ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಹೆಂಡತಿ ವಿಜಯಲಕ್ಷ್ಮೀ ಸೋಷಿಯಲ್​ ಮೀಡಿಯಾ ಖಾತೆ ಹ್ಯಾಕ್​!

ನಟಿ ಆಶಿಕಾ ರಂಗನಾಥ್​​ ಸಾಮಾಜಿಕ ಜಾಲತಾಣ ಖಾತೆ ​​ ಹ್ಯಾಕರ್ಸ್​ಗಳು ಹ್ಯಾಕ್​ ಮಾಡಿದ್ದರು. ಈ ವಿಚಾರ ತಕ್ಷಣವೇ ಅವರ ಗಮನಕ್ಕೆ ಬಂದಿತ್ತು. ನಂತರ ಅಕೌಂಟ್​ ಹ್ಯಾಕ್​ ಆಗಿರುವ ಬಗ್ಗೆ ಪೋಸ್ಟ್ ಹಾಕಿದ್ದರು.

Vijayalakshmi Darshan

Vijayalakshmi Darshan

 • Share this:
  ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣದ ಖಾತೆಗಳು ಹ್ಯಾಕ್​ ಆಗೋದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೆಲ ತಿಂಗಳ ಹಿಂದಷ್ಟೇ ನಟಿ ಮಾನ್ವಿತಾ ಹಾಗೂ ಆಶಿಕಾ ರಂಗನಾಥ್​ ಅವರ ಇನ್ಸ್​ಟಾಗ್ರಾಂ ಖಾತೆ ಹ್ಯಾಕ್​ ಆಗಿತ್ತು. ಈಗ ನಟ ದರ್ಶನ್​ ಪತ್ನಿ ಅವರ ಟ್ವಿಟ್ಟರ್​ ಖಾತೆ ಮೇಲೆ ಹ್ಯಾಕರ್​ಗಳು ಕಣ್ಣಿಟ್ಟಿದ್ದಾರೆ. ವಿಜಯಲಕ್ಷ್ಮೀ ಸೋಷಿಯ್​ ಮೀಡಿಯಾ​ ಖಾತೆ  ಹ್ಯಾಕ್​ ಆಗಿರುವ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

  ಸೋಷಿಯಲ್ ಮೀಡಿಯಾ ಹ್ಯಾಕ್ ಮಾಡಿರುವ ಬಗ್ಗೆ ವಿಜಯಲಕ್ಷ್ಮಿ ಟ್ವೀಟ್​ ಮಾಡಿದ್ದಾರೆ. ನನ್ನ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್​ ಆಗಿದೆ. ಹೀಗಾಗಿ ನನ್ನ ಸೋಷಿಯಲ್​ ಮೀಡಿಯಾ ಖಾತೆಯಿಂದ ಯಾವುದೇ ಆಕ್ಷೇಪಾರ್ಹ ಮೆಸೇಜ್ ಅಥವಾ ಪೋಸ್ಟ್‌ ಗಳು ಬಂದಲ್ಲಿ ಕ್ಷಮೆ ಇರಲಿ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

  ನಟಿ ಆಶಿಕಾ ರಂಗನಾಥ್​​ ಸಾಮಾಜಿಕ ಜಾಲತಾಣ ಖಾತೆ ​​ ಹ್ಯಾಕರ್ಸ್​ಗಳು ಹ್ಯಾಕ್​ ಮಾಡಿದ್ದರು. ಈ ವಿಚಾರ ತಕ್ಷಣವೇ ಅವರ ಗಮನಕ್ಕೆ ಬಂದಿತ್ತು. ನಂತರ ಅಕೌಂಟ್​ ಹ್ಯಾಕ್​ ಆಗಿರುವ ಬಗ್ಗೆ ಪೋಸ್ಟ್ ಹಾಕಿದ್ದರು. ಇನ್ನು, ನಟಿ ಮಾನ್ವಿತಾ ಹರೀಶ್​​ ಇನ್​​ಸ್ಟಾಗ್ರಾಂನಲ್ಲಿ ಕಾಪಿರೈಟ್ಸ್​​ ಎಂಬ ಮೆಸೇಜ್​​​​ ಬಂದಿತ್ತು. ಆ ಮೆಸೇಜ್​ ತೆರೆಯುತ್ತಿದ್ದಂತೆ ಅವರ ಖಾತೆ ಹ್ಯಾಕ್​ ಆಗಿತ್ತು.  ನಟಿ ಪೂಜಾ ಹೆಗ್ಡೆ ಅವರ ಇನ್​ಸ್ಟಾಗ್ರಾಂ ಖಾತೆಯನ್ನು ಹ್ಯಾಕರ್ಸ್​​ಗಳು ಬಿಟ್ಟಿಲ್ಲ. ಯಾರೋ ಅವರ ಅಕೌಂಟ್​ ಬಳಸಿಕೊಂಡು ನಟಿ ಸಮಂತಾ ಫೋಟೋ ಹಾಕಿ ‘ಐ ಡೋಂಟ್​​ ಫೈಂಡ್​​ ಹರ್​ ಪ್ರೆಟ್ಟಿ‘ ಎಂದು ಸಂದೇಶ ಹಾಕಿದ್ದರು.
  Published by:Rajesh Duggumane
  First published: