Darshan: ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​

ನಟರಾದವರು ಸಾಮಾಜಿಕ ಜವಾಬ್ದಾರಿ ಕೂಡ ಹೊಂದಿರಬೇಕು ಎಂಬುದನ್ನು ನಟ ದರ್ಶನ್​ ತಮ್ಮ ಟ್ವೀಟ್​ ಮೂಲಕ ಸಾಬೀತು ಪಡಿಸಿದ್ದಾರೆ ಎಂಬ ಮೆಚ್ಚುಗೆ ಮಾತು ವ್ಯಕ್ತವಾಗಿದೆ. 

ನಟ ದರ್ಶನ್

ನಟ ದರ್ಶನ್

 • Share this:
  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರದ ದಾಳಿಯಲ್ಲಿ ಸಿಎಆರ್​ಪಿಎಫ್​ ಯೋಧರು ಹುತಾತ್ಮರಾಗಿ ಇಂದಿಗೆ ಎರಡು ವರ್ಷ ಕಳೆದಿದೆ. ಫೆ. 14 ರಂದು ನಡೆದ ಈ ಘಟನೆಯಲ್ಲಿ ಅನೇಕ ಸೈನಿಕರು ಪ್ರಾಣತ್ಯಾಗ ಮಾಡಿದ್ದರು. ಈ ಸೈನಿಕರ ತ್ಯಾಗವನ್ನು ದೇಶದ ಜನರು ಎಂದಿಗೂ ಮರೆಯುವುದಿಲ್ಲ. ಅವರ ತ್ಯಾಗ ಬಲಿದಾನಕ್ಕೆ ನಟ ದರ್ಶನ್​ ಕೂಡ ಗೌರವ ನಮನ ಸಲ್ಲಿಸಿದ್ದಾರೆ. ಪುಲ್ವಾಮಾ ಘಟನೆಯಲ್ಲಿ ಮಡಿದ ವೀರ ಯೋಧರಿಗೆ ಚಾಲೆಂಜಿಂಗ್​ ಸ್ಟಾರ್​ ಟ್ವೀಟ್​ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

  Feb 14 remains as a black day for India due to horrendous Pulwama attack few years ago. Tribute to those brave soldiers who sacrificed their lives

  Jai Hind

  Posted by Darshan Thoogudeepa Srinivas on Sunday, 14 February 2021
  ಪುಲ್ವಾಮಾ ದಾಳಿಯ ಯೋಧರಿಗೆ ಗೌರವ ಸಲ್ಲಿಸಿದ ದರ್ಶನ್​ ಟ್ವೀಟ್​ಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ದರ್ಶನ್​ರ ಮಾನವೀಯತೆಯ ಗುಣಕ್ಕೆ ಸಾಕ್ಷಿ. ಈ ದಿನ ಎಲ್ಲರೂ ನೆನಪಿನಲ್ಲಿಡಬೇಕು. ನಮಗಾಗಿ ಜೀವ ಬಲಿದಾನ ಮಾಡಿದವರ ನೆನೆದಿರುವ ಅವರ ಕಾರ್ಯ ಎಲ್ಲರಿಗೂ ಸ್ಪೂರ್ತಿ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

  ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳು ಶ್ರದ್ಧಾಂಜಲಿ ಸಲ್ಲಸಿದ್ದಾರೆ. ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಲವರು ಕೂಡ ಹುತಾತ್ಮ ಯೋಧರಿಗೆ ಟ್ವೀಟ್​ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

  ನಟರಾದವರು ಸಾಮಾಜಿಕ ಜವಾಬ್ದಾರಿ ಕೂಡ ಹೊಂದಿರಬೇಕು ಎಂಬುದನ್ನು ನಟ ದರ್ಶನ್​ ತಮ್ಮ ಟ್ವೀಟ್​ ಮೂಲಕ ಸಾಬೀತು ಪಡಿಸಿದ್ದಾರೆ ಎಂಬ ಮೆಚ್ಚುಗೆ ಮಾತು ವ್ಯಕ್ತವಾಗಿದೆ.
  Published by:Seema R
  First published: