ಗಣೇಶ ಚತುರ್ಥಿಗೆ ಒಡೆಯನ ದರ್ಶನ; ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಪೋಸ್ಟರ್ ರಿಲೀಸ್

Odeya Movie: ಒಡೆಯ ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧಗೊಂಡಿದೆ. ಇದರ ಜೊತೆಗೆ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್​ ಸಿನಿಮಾದಲ್ಲೂ ದರ್ಶನ್ ನಟಿಸುತ್ತಿದ್ದಾರೆ. ಕುರುಕ್ಷೇತ್ರದ ನಂತರ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲೂ ದರ್ಶನ್ ಬಣ್ಣ ಹಚ್ಚಲಿದ್ದು, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಗಂಡುಗಲಿ ವೀರ ಮದಕರಿ ನಾಯಕ ಸಿನಿಮಾದಲ್ಲಿ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್ ಅಭಿನಯಿಸಲಿದ್ದಾರೆ.

Sushma Chakre | news18-kannada
Updated:September 2, 2019, 10:45 AM IST
ಗಣೇಶ ಚತುರ್ಥಿಗೆ ಒಡೆಯನ ದರ್ಶನ; ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಪೋಸ್ಟರ್ ರಿಲೀಸ್
ದರ್ಶನ್ ತೂಗುದೀಪ
  • Share this:
ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ'ದಲ್ಲಿ ದುರ್ಯೋಧನನಾಗಿ ಮೆರೆದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ಒಡೆಯ'ನಾಗಿದ್ದಾರೆ. ಇತ್ತೀಚೆಗೆ ಕೌಟುಂಬಿಕ ಸಿನಿಮಾಗಳಲ್ಲಿ ಹೆಚ್ಚು ಅಭಿನಯಿಸುತ್ತಿರುವ ದರ್ಶನ್ 'ಐರಾವತ', 'ಚಕ್ರವರ್ತಿ', 'ಯಜಮಾನ', 'ತಾರಕ್' ಸಿನಿಮಾಗಳಲ್ಲಿ ಕ್ಲಾಸ್​ ಆಗಿ ಕಾಣಿಸಿಕೊಂಡಿದ್ದರು. ದರ್ಶನ್​ 'ಒಡೆಯ' ಸಿನಿಮಾದ ಡಬ್ಬಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಗೆ ಈ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ತಮಿಳಿನ 'ವೀರಂ' ಸಿನಿಮಾದ ಕನ್ನಡ ರೀಮೇಕ್ ಆಗಿರುವ 'ಒಡೆಯ' ಸಿನಿಮಾವನ್ನು ಎಂ.ಡಿ. ಶ್ರೀಧರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಬುಲ್ ಬುಲ್' ಸಿನಿಮಾದಲ್ಲಿ ಆ್ಯಕ್ಷನ್- ಕಟ್ ಹೇಳಿದ್ದ ಎಂ.ಡಿ. ಶ್ರೀಧರ್ ಈ ಸಿನಿಮಾದ ಮೂಲಕ ಮತ್ತೆ ದರ್ಶನ್​ಗೆ ಜೊತೆಯಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿರುವ ನಟ ದರ್ಶನ್  ಗೌರಿ- ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಕುರುಕ್ಷೇತ್ರ ಟು ಕೀನ್ಯಾ: ಚಿತ್ರರಂಗದಿಂದ ಬ್ರೇಕ್ ಪಡೆಯಲಿದ್ದಾರೆ ದಾಸ ದರ್ಶನ್

'ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲ ಕನಸುಗಳು ಈಡೇರಲಿ. ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ. ಇಂತಿ ನಿಮ್ಮ ದಾಸ ದರ್ಶನ್' ಎಂದು ಟ್ವೀಟ್ ಮಾಡುವ ಮೂಲಕ 'ಒಡೆಯ' ಸಿನಿಮಾ ಪೋಸ್ಟರ್ ಪ್ರಕಟಿಸಿದ್ದಾರೆ.ಕಪ್ಪು ಶರ್ಟ್​, ಖಾಕಿ ಬಣ್ಣದ ಪ್ಯಾಂಟ್, ಕೂಲಿಂಗ್ ಗ್ಲಾಸ್​ ಹಾಕಿಕೊಂಡಿರುವ ದರ್ಶನ್​ ಹೊಸ ಸಿನಿಮಾದ ಲುಕ್​ಗೆ ಟ್ವಿಟ್ಟರ್​ನಲ್ಲಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. 'ಬುಲ್ ಬುಲ್' ರೀತಿಯಲ್ಲೇ ಮತ್ತೊಂದು ಹಿಟ್ ಸಿನಿಮಾ ನೀಡುವ ನಿರೀಕ್ಷೆಯಲ್ಲಿ ಈ ಸಿನಿಮಾದ ನಿರ್ದೇಶಕರಿದ್ದಾರೆ.

ಉಳಿದವರು ಕಂಡಂತೆ ಅಲ್ಲ: ರಕ್ಷಿತ್ ಶೆಟ್ಟಿ ಫೇಸ್​ಬುಕ್​ಗೆ ಗುಡ್​ಬೈ ಹೇಳಲು ಇದುವೇ ಕಾರಣ..!

ಅಂದಹಾಗೆ, 'ಒಡೆಯ' ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧಗೊಂಡಿದೆ. ಇದರ ಜೊತೆಗೆ ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್'​ ಸಿನಿಮಾದಲ್ಲೂ ದರ್ಶನ್ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದಾದ ನಂತರ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲೂ ದರ್ಶನ್ ಬಣ್ಣ ಹಚ್ಚಲಿದ್ದು, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಗಂಡುಗಲಿ ವೀರ ಮದಕರಿ ನಾಯಕ' ಸಿನಿಮಾದಲ್ಲಿ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್ ಅಭಿನಯಿಸಲಿದ್ದಾರೆ.

ಈ ಹಿಂದೆ 'ತಾರಕ್' ನಿರ್ದೇಶಿಸಿದ್ದ ಪ್ರಕಾಶ್​ ಅವರ ಮತ್ತೊಂದು ಹೊಸ ಸಿನಿಮಾಗೂ ದರ್ಶನ್​ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ದರ್ಶನ್​ ತೂಗುದೀಪ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಲಿದ್ದಾರೆ.

 

 
First published:September 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading