Lockdown Effect: ಕೃಷಿಯತ್ತ ಯುವಕರ ಚಿತ್ತ!; ನಮ್ಮ ಬೇರುಗಳಿರೋದೆ ಕೃಷಿಯಲ್ಲಿ ಅಂದ್ರು ದರ್ಶನ್!

Darshan: ಲಾಕ್​​​ಡೌನ್ ಸಮಯದಲ್ಲಿ ಊರುಗಳಿಗೆ ಹೋಗುತ್ತಿರುವ ಯುವಕ, ಯುವತಿಯರು ಕೃಷಿ, ಹೈನುಗಾರಿಕೆ, ತೋಟ, ಗದ್ದೆ, ಜಮೀನು, ವ್ಯವಸಾಯ, ಬೆಳೆ ಅಂತೆಲ್ಲಾ ಹೆಚ್ಚೆಚ್ಚು ಗಮನ ಹರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​.

news18-kannada
Updated:July 1, 2020, 6:44 PM IST
Lockdown Effect: ಕೃಷಿಯತ್ತ ಯುವಕರ ಚಿತ್ತ!; ನಮ್ಮ ಬೇರುಗಳಿರೋದೆ ಕೃಷಿಯಲ್ಲಿ ಅಂದ್ರು ದರ್ಶನ್!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​.
  • Share this:
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ್ದು, 17 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಕರ್ನಾಟಕದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದೆ. ಯಾವಾಗ ಕೊರೋನಾ ಪ್ರಕರಣಗಳು ಜಾಸ್ತಿಯಾಗಿ, ಲಾಕ್​ಡೌನ್ ಘೋಷಣೆಯಾಯಿತೋ ಎಲ್ಲ ವ್ಯಾಪಾರ, ವಹಿವಾಟುಗಳೂ ಬಂದ್ ಆಗಿವೆ. ಫ್ಯಾಕ್ಟರಿ, ಕಂಪನಿಗಳ ಬಾಗಿಲಿಗೆ ಬೀಗ ಬಿದ್ದಿದೆ. ಹೀಗಾಗಿ ಬದುಕು ಕಟ್ಟಿಕೊಳ್ಳಲು ನಗರದ ಹಾದಿ ಹಿಡಿದಿದ್ದ ಸಾವಿರಾರು ಮಂದಿ, ಮತ್ತೆ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ಪ್ರಾರಂಭದಲ್ಲಿ ಕೆಲವೇ ದಿನಗಳ ಲಾಕ್​ಡೌನ್ ಮುಗಿದ ಬಳಿಕ ಮತ್ತೆ ಕೆಲಸಕ್ಕೆ ಹೋಗಬಹುದು ಅನ್ನೋ ನಿರೀಕ್ಷೆ ಇತ್ತಾದರೂ, ಕೊರೋನಾ ಆತಂಕದಿಂದಾಗಿ ಹುಟ್ಟಿದ ಊರೇ ಉತ್ತಮ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ನಗರದಲ್ಲಿ ಲ್ಯಾಪ್​ಟಾಪ್, ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುತ್ತಿದ್ದವರು, ನೊಗ ಹಿಡಿದು ಹೊಲದತ್ತ ಹೆಜ್ಜೆ ಹಾಕಿದ್ದಾರೆ. ಬೈಕು, ಕಾರುಗಳಲ್ಲಿ ಓಡಾಡುತ್ತಿದ್ದವರು, ಎತ್ತಿನ ಗಾಡಿ ಹತ್ತಿದ್ದಾರೆ.ಲಾಕ್​​​ಡೌನ್ ಸಮಯದಲ್ಲಿ ಊರುಗಳಿಗೆ ಹೋಗುತ್ತಿರುವ ಯುವಕ, ಯುವತಿಯರು ಕೃಷಿ, ಹೈನುಗಾರಿಕೆ, ತೋಟ, ಗದ್ದೆ, ಜಮೀನು, ವ್ಯವಸಾಯ, ಬೆಳೆ ಅಂತೆಲ್ಲಾ ಹೆಚ್ಚೆಚ್ಚು ಗಮನ ಹರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​.

ಊರು ತೊರೆದು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಯುವಕರು, ಇದೀಗ ತಮ್ಮೂರಿಗೆ ತೆರಳಿ ಜಮೀನು ಕೆಲಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಗೊತ್ತಾಗಿದ್ದೇನೆಂದರೆ, ಪ್ರತಿ ಮನುಷ್ಯನಿಗೆ ಮೊದಲು ಮೂರು ಹೊತ್ತು ಊಟ ಬೇಕು ಎಂಬುದು. ಅದನ್ನು ಈ ಹೊತ್ತಲ್ಲಿ ತುಂಬ ಜನ ತಿಳಿದುಕೊಂಡರು. ಕೃಷಿಯ ಮಹತ್ವವನ್ನೂ ಅರಿತರು. ಯುವಕರು ಪುನಃ ಬೇರಿನತ್ತ ಮುಖ ಮಾಡಿದ್ದು ನನಗೆ ಖುಷಿ ಕೊಟ್ಟಿದೆ. ಆ ಬೇರುಗಳೇ ಶಾಶ್ವತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ನಟ ಡಿಬಾಸ್ ದರ್ಶನ್.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​.


ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​.


ಖುದ್ದು ದರ್ಶನ್ ಸಹ ಮೈಸೂರಿನ ತೋಟದಲ್ಲೇ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಾರೆ. ಕೊರೋನಾ ಹಾವಳಿಗೂ ಮುನ್ನ ವಾರಕ್ಕೊಮ್ಮೆ ಫಾರ್ಮ್​ಹೌಸ್​​​ನತ್ತ ಹೆಜ್ಜೆ ಇಡುತ್ತಿದ್ದರು. ಅಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದರು. ಆದರೆ ಲಾಕ್​​ಡೌನ್ ಸಡಿಲಗೊಂಡಿದ್ದೇ ತಡ, ದರ್ಶನ್ ಬೆಂಗಳೂರಿನಿಂದ ಮೈಸೂರಿನತ್ತ ಹೊರಟುಬಿಟ್ಟರು‌‌. ಸದ್ಯ ಟಿ.ನರಸಿಪುರದ ಬಳಿ ಇರೋ ತಮ್ಮ ಫಾರ್ಮ್​ಹೌಸ್ ಗೆ ತೆರಳಿ ಅಲ್ಲಿ ಕೃಷಿ ಮಾಡುತ್ತಾ ತಾವು ಸಾಕಿರೋ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ ಡಿಬಾಸ್ ದರ್ಶನ್.

ಕನ್ನಡ ಸಿನಿ ಪರದೆ ಮೇಲೆ ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗೇನು ಮಾಡುತ್ತಿದ್ದಾರೆ?ಲೀಕ್​​ ಆಯ್ತು Moto G 5G ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?
First published: July 1, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading