news18-kannada Updated:September 28, 2020, 2:33 PM IST
Challenging Star Darshan
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಂಡಿಸಿರೋ ಭೂ ಸುಧಾರಣಾ ಕಾಯಿದೆ ಹಾಗೂ ಎಪಿಎಂಸಿ ಕಾಯಿದೆ ರೈತರಿಗೆ ಮಾರಕ. ಈ ಎರಡೂ ಕಾಯಿದೆಗಳು ಮುಂದಿನ ದಿನಗಳಲ್ಲಿ ಅನ್ನದಾತರಿಗೆ ಸಂಕಷ್ಟ ತಂದೊಡ್ಡಲಿವೆ ಅಂತ ರೈತರು ಬೀದಿಗಿಳಿದಿದ್ದಾರೆ. ಕರ್ನಾಟಕ ಬಂದ್ ಆಚರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.. ಹೀಗಿರುವಾಗಲೆ ಡಿ-ಬಾಸ್ ದರ್ಶನ್ ಅವರ ಫೋಟೋ ಹಾಗೂ ಮಗ ವಿನೀಶ್ ಹಸಿರು ಶಾಲು ಹಾಕಿರುವ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ದರ್ಶನ್ ಹೆಗಲ ಮೇಲೆ ರೈತರ ಶಾಲು ಇರೋ ಫೋಟೋವೊಂದು ಇಂದಿನ ಸಂದರ್ಭಕ್ಕೆ ತಕ್ಕಂತಿದೆ.. ಯಾಕೆಂದರೆ ನಟ ದರ್ಶನ್ ಸಾಮಾಜಿಕ ಕಳಕಳಿ ಇರುವ ನಟ. ಸಾಮಾಜಿಕ ಬದ್ಧತೆ ಇರುವ ನಟ. ನಾಡು ನುಡಿಗಾಗಿ ಯಾವಾಗಲೂ ತಾನು ಸದಾ ಸನ್ನದ್ಧ ಅಂತಿರುತ್ತಾರೆ.
ಇನ್ನು ದರ್ಶನ್ ಅವರ ರೈತಪರ ಕಾಳಜಿ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಅನ್ನದಾತರ ಪರ ಸಿಕ್ಕ ಸಿಕ್ಕಲ್ಲಿ ತಮ್ಮ ಕಾಳಜಿ ವ್ಯಕ್ತಪಡಿಸುತ್ತಿರುತ್ತಾರೆ. ಕಳೆದ ವರ್ಷ ಯಾವುದೋ ಸಮಾರಂಭದಲ್ಲಿ ರೈತರ ಸಾಲ ಮನ್ನಾ ಬೇಡ, ರೈತರ ಬೆಳೆಗೆ ಸರಿಯಾದ ಬೆಲೆ ಸಿಗುವಂತೆ ಮಾಡಿ, ಬೇಕಾದರೆ ಅವರೇ ಸರ್ಕಾರಕ್ಕೆ ಸಾಲ ಕೊಡ್ತಾರೆ ಎಂಬ ಮಾತುಗಳನ್ನ ಹೇಳಿದ್ದರು.
ಸೋ.. ಇಂತಹ ದರ್ಶನ್ ಇವತ್ತು ಹಸಿರು ಶಾಲು ಹಾಕೊಂಡು ಎಲ್ಲಾದರೂ ರೈತ ಪರ ಬೀದಿಗಿಳಿದ್ರಾ? ಆ ಸಂಧರ್ಭದಲ್ಲಿ ತೆಗೆದ ಫೋಟೋನಾ ಇದು ಅನ್ನೋ ಅನುಮಾನಗಳು ಹುಟ್ಟಿಕೊಂಡಿದ್ದವು. ಇನ್ನು ಸಾಮಾಜಿಕ ಜಾಲತಾಣ ಅದೇ ರೀತಿ ವೈರಲ್ ಆಗ್ತಾ ಇತ್ತು. ಆದರೆ ನಿಜ ವಿಚಾರ ಏನಂದ್ರೆ ಕಳೆದ ಬಾರಿಯ ಹುಟ್ಟುಹಬ್ಬದಂದು ಕ್ಲಿಕ್ಕಿಸಿರೋ ಫೋಟೋ ಈಗ ವೈರಲ್ ಆಗ್ತಿದೆ ಅಷ್ಟೇ.
Published by:
zahir
First published:
September 28, 2020, 2:29 PM IST