HOME » NEWS » Entertainment » CHALLENGING STAR DARSHAN STARRER YAJAMANA MOVIE SHOOTING COMPLETED

ಕುಂಬಳಕಾಯಿ ಒಡೆಯುವ ಖುಷಿಯಲ್ಲಿ ಯಜಮಾನ; ಶೀಘ್ರ ತೆರೆಗೆ ಬರಲಿದೆ ದರ್ಶನ್​ ಸಿನಿಮಾ

ಈಗಾಗಲೇ ಮೂರು ದಿನಗಳ ಕಾಲ ಹಾಡುಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಂದು ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ಕುಂಬಳಕಾಯಿ ಒಡೆಯಲಿದೆ.

Rajesh Duggumane | news18
Updated:January 2, 2019, 11:01 AM IST
ಕುಂಬಳಕಾಯಿ ಒಡೆಯುವ ಖುಷಿಯಲ್ಲಿ ಯಜಮಾನ; ಶೀಘ್ರ ತೆರೆಗೆ ಬರಲಿದೆ ದರ್ಶನ್​ ಸಿನಿಮಾ
ಯಜಮಾನ ಚಿತ್ರದ ಪೋಸ್ಟರ್​
  • News18
  • Last Updated: January 2, 2019, 11:01 AM IST
  • Share this:
ಕಳೆದ ವರ್ಷ ದರ್ಶನ್​ ನಟನೆಯ ಯಾವುದೇ ಚಿತ್ರಗಳು ತೆರೆಕಂಡಿಲ್ಲ. ‘ಕುರುಕ್ಷೇತ್ರ’ ಹಾಗೂ ‘ಯಜಮಾನ’ ಚಿತ್ರ 2018ರಲ್ಲೇ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತಾದರೂ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ವಿಳಂಬವಾಗಿದ್ದವು. ಈಗ ‘ಯಜಮಾನ’ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದೆ. ಈ ಮೂಲಕ ಶೀಘ್ರದಲ್ಲೇ ಸಿನಿಮಾ ತೆರೆಗೆ ಬರುವ ಸೂಚನೆ ಸಿಕ್ಕಿದೆ.

‘ಯಜಮಾನ’ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿತ್ತು. ಬಾಕಿ ಉಳಿದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಸ್ವೀಡನ್​ಗೆ ತೆರಳಿತ್ತು ಚಿತ್ರತಂಡ. ಆದರೆ ‘ರೆಬೆಲ್​ ಸ್ಟಾರ್​’ ಅಂಬರೀಶ್​ ಕೊನೆ ಉಸಿರೆಳೆದ ಕಾರಣ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈಗ ಈ ಹಾಡಿನ ದೃಶ್ಯಗಳನ್ನು ಬೆಂಗಳೂರಿನ ಸುತ್ತಮುತ್ತ ಸೆರೆಹಿಡಿಯಲಾಗುತ್ತಿದೆ.

ಈಗಾಗಲೇ ಮೂರು ದಿನಗಳ ಕಾಲ ಹಾಡುಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಂದು ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ಕುಂಬಳಕಾಯಿ ಒಡೆಯಲಿದೆ. ಇದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಇನ್ನು, ಯಜಮಾನ ಶೀರ್ಷಿಕೆಯ ಬೃಹತ್​ ಕೇಕ್​ ಕತ್ತರಿಸುವ ಮೂಲಕ ಹೊಸ ವರ್ಷಕ್ಕೆ ಚಿತ್ರತಂಡ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಡಿ-ಬಾಸ್​ ಈಗ ‘ರಾಬರ್ಟ್​’; ದರ್ಶನ್​ 53ನೇ ಚಿತ್ರಕ್ಕೆ ಶೀರ್ಷಿಕೆ ಫೈನಲ್​

ಇತ್ತೀಚೆಗೆ ಚಿತ್ರತಂಡ ‘ಯಜಮಾನ’ದ ಫಸ್ಟ್​ ಲುಕ್​ ಬಿಡುಗಡೆ ಮಾಡಿತ್ತು. ಇದರಲ್ಲಿ ದರ್ಶನ್​ ಭಿನ್ನವಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈ ಚಿತ್ರಕ್ಕೆ ಪಿ. ಕುಮಾರ್​ ನಿರ್ದೇಶನವಿದ್ದು, ಶೈಲಜಾ ನಾಗ್​ ಹಾಗೂ ಬಿ. ಸುರೇಶ್​ ಬಂಡವಾಳ ಹೂಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್​ ದರ್ಶನ್​ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು, ದರ್ಶನ್​ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋದನನ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ 2ಡಿ ಅವತರಣಿಕೆಯ ಸೆನ್ಸಾರ್​ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ 3ಡಿ ಅವತರಣಿಕೆ ಸೆನ್ಸಾರ್​ ಅಂಗಳ ತಲುಪಲಿದೆ. ಇನ್ನು, ದರ್ಶನ್​ 53ನೇ ಚಿತ್ರಕ್ಕೆ ‘ರಾಬರ್ಟ್​​’ ಶೀರ್ಷಿಕೆ ಇಡಲಾಗಿದೆ. ಪ್ರಜ್ವಲ್ ದೇವರಾಜ್​ ನಟನೆಯ ಇನ್ಸ್​ಪೆಕ್ಟರ್​ ವಿಕ್ರಂ ಚಿತ್ರದಲ್ಲಿ ದರ್ಶನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಅಲ್ಲು ಅರ್ಜುನ್​ ಸಿಹಿ ಸುದ್ದಿ; ನಿರ್ದೇಶಕ ತ್ರಿವಿಕ್ರಂ ಜೊತೆ ಕೈ ಜೋಡಿಸಿದ ಸ್ಟೈಲಿಶ್​ ಸ್ಟಾರ್​
First published: January 2, 2019, 10:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories