ಒಂದೇ ದಿನಕ್ಕೆ 16 ಲಕ್ಷ ವೀಕ್ಷಣೆ ಕಂಡ ‘ಯಜಮಾನ’ ಹಾಡು; ಯೂಟ್ಯೂಬ್​ನಲ್ಲಿ ಡಿ-ಬಾಸ್ ಹವಾ

ಸಂಕ್ರಾಂತಿ ನಿಮಿತ್ತ ತೆರೆಕಂಡಿದ್ದ ‘ಶಿವನಂದಿ…’ ಹಾಡಿಗೆ ಅಭಿಮಾನಿಗಳು ತಲೆದೂಗಿದ್ದರು. ಈಗ ಹೊಸ ಹಾಡಿನಲ್ಲಿ ದರ್ಶನ್​ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ.

Rajesh Duggumane | news18
Updated:January 20, 2019, 12:23 PM IST
ಒಂದೇ ದಿನಕ್ಕೆ 16 ಲಕ್ಷ ವೀಕ್ಷಣೆ ಕಂಡ ‘ಯಜಮಾನ’ ಹಾಡು; ಯೂಟ್ಯೂಬ್​ನಲ್ಲಿ ಡಿ-ಬಾಸ್ ಹವಾ
'ಯಜಮಾನ' ಸಿನಿಮಾದಲ್ಲಿ ದರ್ಶನ್​
Rajesh Duggumane | news18
Updated: January 20, 2019, 12:23 PM IST
‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅಭಿನಯದ ‘ಯಜಮಾನ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರಲಿದೆ ಎನ್ನುವ ಮಾತಿದೆ. ಸದ್ಯ, ಚಿತ್ರದ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿಕೊಳ್ಳುತ್ತಿದೆ ಚಿತ್ರತಂಡ. ನಿನ್ನೆ ಬಿಡುಗಡೆಯಾದ ಈ ಚಿತ್ರದ ಹಾಡು ಒಂದೇ ದಿನಕ್ಕೆ 16 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

‘ಒಂದು ಮುಂಜಾನೆ ಹಂಗೆ ಸುಮ್ಮನೆ, ನಾವು ಹೋಗುವ ಬಾರೆ…’ ಹಾಡು ಶನಿವಾರ ರಿಲೀಸ್​ ಆಗಿದೆ. ಈ ಗೀತೆ ಸದ್ಯ 16 ಲಕ್ಷ ಬಾರಿ ವೀಕ್ಷಣೆ ಕಂಡಿದ್ದು, ಸದ್ಯದಲ್ಲೇ 20ರ ಗಡಿ ತಲುಪಲಿದೆ. ಚಿತ್ರದಲ್ಲಿರುವ ಸಖತ್​ ರೊಮ್ಯಾಂಟಿಕ್​ ಸಾಂಗ್​ ಇದಾಗಿದ್ದು, ಲವ್ವರ್​ ಬಾಯ್​ ಆಗಿ ದರ್ಶನ್​ ಕಾಣಿಸಿಕೊಂಡಿದ್ದಾರೆ. ದಚ್ಚುಗೆ ನಟಿ ರಶ್ಮಿಕಾ ಮಂದಣ್ಣ ಸಾಥ್​​​ ನೀಡಿದ್ದಾರೆ.

ಸಂಕ್ರಾಂತಿ ನಿಮಿತ್ತ ತೆರೆಕಂಡಿದ್ದ ‘ಶಿವನಂದಿ…’ ಹಾಡಿಗೆ ಅಭಿಮಾನಿಗಳು ತಲೆದೂಗಿದ್ದರು. ಈಗ ಹೊಸ ಹಾಡಿನಲ್ಲಿ ದರ್ಶನ್​ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಅಷ್ಟೇ ಅಲ್ಲ, ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಇರುವ ಈ ಹಾಡಿಗೆ ಕವಿರಾಜ್​ ಸಾಹಿತ್ಯವಿದೆ.

ಇದನ್ನೂ ಓದಿ: 'ಬಾಸ್​ ಪರ್ವ': ಸುಲ್ತಾನನ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೈಯಲ್ಲಿ 'ಡಿ-ಬಾಸ್​' ಬೆಳ್ಳಿ ಕಡಗದ ಮೆರುಗು..!

ಎರಡು ವರ್ಷಗಳ ನಂತರ ದರ್ಶನ್​ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಕಳೆದ ವರ್ಷ ಅವರ ನಟನೆಯ ಯಾವುದೇ ಸಿನಿಮಾಗಳು ತೆರೆಕಂಡಿರಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಆದರೆ, ಈ ವರ್ಷ ಅವರ ನಟನೆಯ ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತಿವೆ. ಇದು ಸಿನಿಪ್ರಿಯರ ಖುಷಿ ಹೆಚ್ಚಿಸಿದೆ. ‘ಕುರುಕ್ಷೇತ್ರ’, ‘ಇನ್ಸ್​​ಪೆಕ್ಟರ್​ ವಿಕ್ರಂ’ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅಂಬರೀಶ್​ ಪುತ್ರ ‘ಅಮರ್​’ ಚಿತ್ರದಲ್ಲಿ ವಿಶೇಷ ಹಾಡೊಂದರಲ್ಲಿ ದರ್ಶನ್​ ಕಾಣಿಸಿಕೊಳ್ಳುತ್ತಿದ್ದಾರೆ.

First published:January 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ