ಎಲ್ಲರ ಜೀವನ ಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ‘ರಾಬರ್ಟ್‘​ ಚಿತ್ರ ನಿಮ್ಮ ಮಡಿಲಿಗೆ; ದರ್ಶನ್​

Roberrt: ‘ರಾಬರ್ಟ್‘​ ಚಿತ್ರದ ಹೊಸ ಪೋಸ್ಟರ್​ನಲ್ಲಿ ದರ್ಶನ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.​​ ಉದ್ದನೆ ಕೂದಲು, ಗಡ್ಡ  ಬಿಟ್ಟಿದ್ದು,  ಕಣ್ಣಿಗೆ ಕೂಲಿಂಗ್​ ಗ್ಲಾಸ್​ ಹಾಕಿಕೊಂಡಿರುವ ಪೋಸ್ಟರ್​ ಇದಾಗಿದೆ. ನೂತನ ಪೋಸ್ಟರ್​​ ನೋಡಿದ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡಿದ್ದಾರೆ.

news18-kannada
Updated:May 25, 2020, 1:51 PM IST
ಎಲ್ಲರ ಜೀವನ ಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ‘ರಾಬರ್ಟ್‘​ ಚಿತ್ರ ನಿಮ್ಮ ಮಡಿಲಿಗೆ; ದರ್ಶನ್​
ರಾಬರ್ಟ್​
  • Share this:
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ‘ರಾಬರ್ಟ್‘​ ಚಿತ್ರದ ಹೊಸ ಪೋಸ್ಟರ್​ ಬಿಡುಗಡೆಯಾಗಿದೆ.

ರಂಜಾನ್​ ಹಬ್ಬದ ಪ್ರಯುಕ್ತ ನಟ ದರ್ಶನ್​ ‘ರಾಬರ್ಟ್‘​ ಚಿತ್ರದ ಹೊಸ ಪೋಸ್ಟರ್​ ಅನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.  ‘ಎಲ್ಲಾ ನಲ್ಮೆಯ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ಧಿಕ ಶುಭಾಶಯಗಳು. ನಮ್ಮ 'ರಾಬರ್ಟ್' ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮಡಿಲಿಗೆ ಸೇರಲಿದೆ. ಮನೆಯಲ್ಲಿ ಇರಿ , ಮನೆಯವರಿಗಾಗಿ ಜಾಗೃತರಾಗಿರಿ ಎಂದು ಬರೆದುಕೊಂಡಿದ್ದಾರೆ.

ಇನ್ನು ‘ರಾಬರ್ಟ್‘​ ಚಿತ್ರದ ಹೊಸ ಪೋಸ್ಟರ್​ನಲ್ಲಿ ದರ್ಶನ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.​​ ಉದ್ದನೆ ಕೂದಲು, ಗಡ್ಡ  ಬಿಟ್ಟಿದ್ದು,  ಕಣ್ಣಿಗೆ ಕೂಲಿಂಗ್​ ಗ್ಲಾಸ್​ ಹಾಕಿಕೊಂಡಿರುವ ಪೋಸ್ಟರ್​ ಇದಾಗಿದೆ. ನೂತನ ಪೋಸ್ಟರ್​​ ನೋಡಿದ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡಿದ್ದಾರೆ. ರಾಬರ್ಟ್​ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

 


ರಾಮನವಮಿ ಪ್ರಯುಕ್ತ ‘ರಾಬರ್ಟ್‘​ ಚಿತ್ರತಂಡ ‘ಜೈ ಶ್ರೀರಾಮ್​​ ‘ಹಾಡಿನ ಹೊಸ ವರ್ಷನ್​ ಬಿಡುಗಡೆ ಮಾಡಿದ್ದರು.  ಇದೀಗ ರಂಜಾನ್​ ಹಬ್ಬದ ಪ್ರಯುಕ್ತ  ಹೊಸ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ನೂತನ ಪೋಸ್ಟರ್​ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಇನ್ನು ಚಿತ್ರತಂಡ ರಾಬರ್ಟ್​ ಸಿನಿಮಾವನ್ನು ಏಪ್ರಿಲ್​ ತಿಂಗಳಿನಲ್ಲಿ ಬಿಡುಗಡೆ ಮಾಡುವ ಪ್ಲಾನ್​ ಹಾಕಿಕೊಂಡಿತ್ತು. ಆದರೆ ಕೊರೋನಾದಿಂದಾಗಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇದೀಗ ದರ್ಶನ್​ ಅವರು ಟ್ವೀಟ್​ನಲ್ಲಿ ಹೇಳಿರುವಂತೆ ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ‘ರಾಬರ್ಟ್‘​ ಚಿತ್ರ ನಿಮ್ಮ ಮಡಿಲಿಗೆ ಬರಲಿದೆ ಎಂದು ಹೇಳಿದ್ದಾರೆ.

ವಿಶ್ವವಿಖ್ಯಾತ ಅಂಬೇಗಾಲು ಕೃಷ್ಣನಿಗೂ ಕೊರೋನಾ ಕಂಟಕ; ಆದಾಯದಲ್ಲಿ ಭಾರೀ ಇಳಿಕೆ
First published: May 25, 2020, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading