Actor Darshan: ತಂದೆ ದರ್ಶನ್​ರಂತೆ ಬೆಳೆಯುತ್ತಿದ್ದಾನೆ ವಿನೀಶ್; ಏಕೆ ಅಂತೀರಾ? ಇಲ್ಲಿದೆ ಉತ್ತರ

Vineesh Darshan: ದರ್ಶನ್​ ತಮ್ಮ ಫಾರ್ಮ್​ ಹೌಸ್​ನಲ್ಲಿ ಸಾಕಷ್ಟು ಕುದುರೆ ಸಾಕಿದ್ದಾರೆ. ಬಿಡುವು ಮಾಡಿಕೊಂಡು ಫಾರ್ಮ್​ ಹೌಸ್​ಗೆ ತೆರಳುವ ದರ್ಶನ್​ ಅಲ್ಲಿ ಕುದುರೆ ಸವಾರಿ ಮಾಡುತ್ತಾರೆ. ದರ್ಶನ್​ ಕುದುರೆ ಸವಾರಿ ಮಾಡುವಲ್ಲಿ ನಿಸ್ಸೀಮರು.

news18-kannada
Updated:August 8, 2020, 4:05 PM IST
Actor Darshan: ತಂದೆ ದರ್ಶನ್​ರಂತೆ ಬೆಳೆಯುತ್ತಿದ್ದಾನೆ ವಿನೀಶ್; ಏಕೆ ಅಂತೀರಾ? ಇಲ್ಲಿದೆ ಉತ್ತರ
ನಟ ದರ್ಶನ್​ ಹಾಗೂ ವಿನೀಶ್​
  • Share this:
ನಟ ದರ್ಶನ್​ ಪಕ್ಕಾ ಪ್ರಾಣಿ ಪ್ರೇಮಿ. ಸದಾ ಪ್ರಾಣಿಗಳ ಜೊತೆ ಕಾಲ ಕಳೆಯುವ ದರ್ಶನ್​, ಮೈಸೂರಿನ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದಿದ್ದಾರೆ. ಅಷ್ಟೇ ಅಲ್ಲ ತಮ್ಮ ಫಾರ್ಮ್​ ಹೌಸ್​ನಲ್ಲಿ ಕುದುರೆ, ಆಕಳು ಹಾಗೂ ಇತ್ಯಾದಿ ಪ್ರಾಣಿಗಳನ್ನು ಸಾಕಿದ್ದಾರೆ. ಈಗ ದರ್ಶನ್​ ಮಗ ವಿನೀಶ್​ ಕೂಡ ತಂದೆಯಂತೆ ಬೆಳೆಯುತ್ತಿದ್ದಾನೆ. ದರ್ಶನ್​ ತಮ್ಮ ಫಾರ್ಮ್​ ಹೌಸ್​ನಲ್ಲಿ ಸಾಕಷ್ಟು ಕುದುರೆ ಸಾಕಿದ್ದಾರೆ. ಬಿಡುವು ಮಾಡಿಕೊಂಡು ಫಾರ್ಮ್​ ಹೌಸ್​ಗೆ ತೆರಳುವ ದರ್ಶನ್​ ಅಲ್ಲಿ ಕುದುರೆ ಸವಾರಿ ಮಾಡುತ್ತಾರೆ. ದರ್ಶನ್​ ಕುದುರೆ ಸವಾರಿ ಮಾಡುವಲ್ಲಿ ನಿಸ್ಸೀಮರು. ಈಗಾಗಲೇ ಅವರು ಕುದರೆ ಸವಾರಿ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈಗ ದರ್ಶನ್​ ಮಗ ಕೂಡ ತಂದೆಯಂತೆ ಕುದುರೆ ಸವಾರಿ ಮಾಡುತ್ತಿದ್ದಾನೆ.

ದರ್ಶನ್​ ಸೇನಾ ಸಮಿತಿ ಮಂಡ್ಯ ಹೆಸರಿನ ಅಭಿಮಾನಿ ಬಳಗ ಫೇಸ್​ಬುಕ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ವಿನೀಶ್​ ಲೀಲಾಜಾಲವಾಗಿ ಕುದುರೆ ಓಡಿಸುತ್ತಿದ್ದಾನೆ. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ಅನಾಯಾಸವಾಗಿ ವಿನೀಶ್​ ಕುದುರೆ ಸವಾರಿ ಮಾಡುವುದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಗ ಕೂಡ ತಂದೆ ರೀತಿಯಲ್ಲೇ ಬೆಳೆಯುತ್ತಿದ್ದಾನೆ ಎಂದು ಕಮೆಂಟ್​ ಮಾಡಿದ್ದಾರೆ.



ವಿನೀಶ್​ ಕೆಲ ವರ್ಷಗಳಿಂದ ಕುದುರೆ ಸವಾರಿ ತರಬೇತಿ ಪಡೆಯುತ್ತಿದ್ದಾನೆ ಎನ್ನಲಾಗಿದೆ. ನುರಿತವರು ವಿನೀಶ್​ಗೆ ಕುದುರೆ ಸವಾರಿ ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ದರ್ಶನ್​ ಅಂತೆ ವಿನೀಶ್​ ಕೂಡ ಎಲ್ಲವನ್ನೂ ತುಂಬಾನೇ ಶ್ರದ್ಧೆಯಿಂದ ಕಲಿಯುವುತ್ತಿರುವುದು ನಿಜಕ್ಕೂ ವಿಶೇಷ.
Published by: Rajesh Duggumane
First published: August 8, 2020, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading