ರವಿಚಂದ್ರನ್​ 'ದಶರಥ'ನಿಗೆ 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಧ್ವನಿ!

ರವಿಚಂದ್ರನ್​ ‘ದಶರಥ’ ಸಿನಿಮಾಕ್ಕೆ ಎಂ.ಎಸ್​. ರಮೇಶ್​​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಟೈಟಲ್​​ ಸಾಂಗ್​ಗೆ ದರ್ಶನ್​ ಧ್ವನಿ ನೀಡಿದರೆ ಉತ್ತಮ ಎನ್ನುವ ಆಲೋಚನೆ ಚಿತ್ರತಂಡದ್ದಾಗಿತ್ತು. ಈ ಮನವಿಯನ್ನು ದರ್ಶನ್​ ಬಳಿಯೂ ಇಟ್ಟಿತ್ತು ಚಿತ್ರತಂಡ.

Rajesh Duggumane | news18
Updated:January 22, 2019, 6:23 PM IST
ರವಿಚಂದ್ರನ್​ 'ದಶರಥ'ನಿಗೆ 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಧ್ವನಿ!
ದರ್ಶನ್​-ರವಿಚಂದ್ರನ್​
Rajesh Duggumane | news18
Updated: January 22, 2019, 6:23 PM IST
ಸ್ಯಾಂಡಲ್​ವುಡ್​ನ ಸ್ಟಾರ್​ ಕಲಾವಿದರು ನಟನೆಯ ಜೊತೆಗೆ ಕೆಲವು ಸಿನಿಮಾ ಹಾಗೂ ಟ್ರೈಲರ್​ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಪುನೀತ್​ ಸೇರಿ ಅನೇಕ ನಟರು ಹಾಡಿಗೂ ಧ್ವನಿಯಾಗಿದ್ದಾರೆ. ಆದರೆ, ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಮಾತ್ರ ಈವರೆಗೆ ಯಾವುದೇ ಹಾಡನ್ನು ಹಾಡಿಲ್ಲ. ಅಚ್ಚರಿ ಎಂದರೆ ಅವರು ಇದೇ ಮೊದಲ ಬಾರಿಗೆ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ!

ರವಿಚಂದ್ರನ್ ನಟನೆಯ​ ‘ದಶರಥ’ ಚಿತ್ರಕ್ಕೆ ಎಂ.ಎಸ್​. ರಮೇಶ್​​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಟೈಟಲ್​​ ಸಾಂಗ್​ಗೆ ದರ್ಶನ್​ ಧ್ವನಿ ನೀಡಿದರೆ ಉತ್ತಮ ಎನ್ನುವ ಆಲೋಚನೆ ಚಿತ್ರತಂಡದ್ದಾಗಿತ್ತು. ಈ ಮನವಿಯನ್ನು ದರ್ಶನ್​ ಬಳಿಯೂ ಇಟ್ಟಿದ್ದರು ನಿರ್ದೇಶಕರು.

ಆದರೆ, ದರ್ಶನ್​ ಈವರೆಗೆ ಯಾವುದೇ ಸಾಂಗ್​ಅನ್ನು ಹಾಡಿಲ್ಲ. ಹಾಗಾಗಿ, ಹಾಡಲು ನಿರಾಕರಿಸಿದ್ದರು. ಆದರೆ, ಹಾಡಿನ ಸಾಹಿತ್ಯವನ್ನು ತಮ್ಮದೇ ಶೈಲಿಯಲ್ಲಿ ಓದಿದ್ದಾರೆ  ದರ್ಶನ್​. ಇದು ಚಿತ್ರತಂಡಕ್ಕೂ ಇಷ್ಟವಾಗಿದೆ. ದರ್ಶನ್​ ಓದಿರುವ ಸಾಲುಗಳಿಗೆ ಸಂಗೀತ ಸಂಯೋಜನೆ ಮಾಡಿ, ಅದನ್ನು ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: ದಕ್ಷಿಣ ಭಾರತದ ಕಲಾವಿದರನ್ನು ಪ್ರಧಾನಿ ಮೋದಿ ನಿರ್ಲಕ್ಷ್ಯ ಮಾಡಿದ್ದೇಕೆ?; ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಚರ್ಚೆ!

‘ದಶರಥ’ ಚಿತ್ರದಲ್ಲಿ ರವಿಚಂದ್ರನ್​ ವಕೀಲನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ  ರವಿಚಂದ್ರನ್​ಗೆ ಜೊತೆಯಾಗಿ ಸೋನಿಯಾ ಅಗರ್​ವಾಲ್​ ಕಾಣಿಸಿಕೊಂಡಿದ್ದಾರೆ. 15 ವರ್ಷಗಳ ನಂತರ ಅವರು ಕನ್ನಡಕ್ಕೆ ಕಂಬ್ಯಾಕ್​ ಮಾಡುತ್ತಿರುವುದು ವಿಶೇಷ. “ಇದು ಆಧುನಿಕ ರಾಮಾಯಣದ ಕಥೆ. ಆದರೆ, ಇಲ್ಲಿ, ಸೀತೆ ಇಲ್ಲ. ದಶರಥನ ಮಗಳು ಶಾಂತಾಳನ್ನು  ಋಷ್ಯಶೃಂಗನನ್ನು ವರಿಸಿದ್ದಳು. ಇದಕ್ಕೆ ಆಧುನಿಕ ಟಚ್ ನೀಡಿ ಸಿನಿಮಾ ಮಾಡಲಾಗಿದೆ” ಎಂದು ನಿರ್ದೇಶಕರು ಈ ಮೊದಲು ಹೇಳಿಕೊಂಡಿದ್ದರು.

First published:January 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ