odeya: ದೀಪಾವಳಿಗೆ ಸಿಹಿ ಸುದ್ದಿಕೊಟ್ಟ ನಟ ದರ್ಶನ್​; ನ.1ಕ್ಕೆ ಒಡೆಯ ಚಿತ್ರದ ಟೀಸರ್​ ಬಿಡುಗಡೆ

odeya movie teaser: ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಟೀಸರ್​​ ಅನ್ನು ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿಹಿ ಸುದ್ದಿಯನ್ನು ನಟ ದರ್ಶನ್​ ಹಂಚಿಕೊಂಡಿದ್ದಾರೆ.

ಸ್ವಿಟ್ಜರ್ಲೆಂಡ್​ನಲ್ಲಿ 'ಒಡೆಯ' ದರ್ಶನ್​

ಸ್ವಿಟ್ಜರ್ಲೆಂಡ್​ನಲ್ಲಿ 'ಒಡೆಯ' ದರ್ಶನ್​

  • Share this:
'ಕುರುಕ್ಷೇತ್ರ' ಸಿನಿಮಾನದ ಬಳಿಕ ಮತ್ತೊಂದು ಕೌಟಂಬಿಕ ಚಿತ್ರದ ಮೂಲಕ ನಟ ದರ್ಶನ್​ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ 'ಒಡೆಯ' ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಹಾಕಿದೆ.

ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಟೀಸರ್​​ ಅನ್ನು ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿಹಿ ಸುದ್ದಿಯನ್ನು ನಟ ದರ್ಶನ್​ ಹಂಚಿಕೊಂಡಿದ್ದಾರೆ.ನವೆಂಬರ್​ 1ರಂದು ಆನಂದ್​ ಆಡಿಯೋದ ಯೂಟ್ಯೂಬ್​ ಚಾನೆಲ್​ನಲ್ಲಿ ಬೆಳಗ್ಗೆ 9.55ಕ್ಕೆ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗುವುದು ಎಂದು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತಮಿಳಿನ 'ವೀರಂ' ಸಿನಿಮಾದ ಕನ್ನಡ ರೀಮೇಕ್ ಆಗಿರುವ 'ಒಡೆಯ' ಸಿನಿಮಾವನ್ನು ಎಂ.ಡಿ. ಶ್ರೀಧರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಬುಲ್ ಬುಲ್' ಸಿನಿಮಾದಲ್ಲಿ ಆ್ಯಕ್ಷನ್- ಕಟ್ ಹೇಳಿದ್ದ ಎಂ.ಡಿ. ಶ್ರೀಧರ್ ಈ ಸಿನಿಮಾದ ಮೂಲಕ ಮತ್ತೆ ದರ್ಶನ್​ಗೆ ಜೊತೆಯಾಗಿದ್ದಾರೆ.  ನಟ ದರ್ಶನ್​ಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ, ಚಿಕ್ಕಣ್ಣ, ಯಶಸ್​​ ಸೂರ್ಯ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

First published: