• Home
  • »
  • News
  • »
  • entertainment
  • »
  • ಮೇವಿಲ್ಲದೆ ಜಾನುವಾರುಗಳು ಕಂಗಾಲು: ಮಾನವೀಯತೆ ಮೆರೆದ ಅಭಿಮಾನಿಗಳ ದಾಸ ದರ್ಶನ್

ಮೇವಿಲ್ಲದೆ ಜಾನುವಾರುಗಳು ಕಂಗಾಲು: ಮಾನವೀಯತೆ ಮೆರೆದ ಅಭಿಮಾನಿಗಳ ದಾಸ ದರ್ಶನ್

ದರ್ಶನ್

ದರ್ಶನ್

Darshan: ತಮ್ಮ ಸ್ನೇಹಿತ ನಟ ಸೃಜನ್ ಲೋಕೇಶ್ ಸೇರಿಕೊಂಡು ಒಂದು ಜಿಫಾರೆ ಮರಿಯನ್ನೂ ದರ್ಶನ್ ದತ್ತು ಪಡೆದುಕೊಂಡಿದ್ದಾರೆ. ಇದಲ್ಲದೆ ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‍ನಲ್ಲೂ ಕುದುರೆ, ಹಸು ಸೇರಿದಂತೆ ಅನೇಕ ಪ್ರಾಣಿಗಳನ್ನು ಸಾಕುತ್ತಿದ್ದಾರೆ.

  • Share this:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಇದಕ್ಕೆ ಬಹುದೊಡ್ಡ ಸಾಕ್ಷಿಯೇ ಅವರ ಫಾರ್ಮ್​ ಹೌಸ್. ಅಲ್ಲಿ ಅನೇಕ ಬಗೆಯ ಪ್ರಾಣಿ-ಪಕ್ಷಿಗಳನ್ನು ದರ್ಶನ್ ಸಾಕಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಫಾರ್ಮ್‌ ಹೌಸ್​ಗೆ ಭೇಟಿ ನೀಡಿ ಅವುಗಳ ಹಾರೈಕೆ ಮಾಡುತ್ತಾರೆ.


ಅಂತಹ ಪ್ರೀತಿ ಬರೀ ತಮ್ಮ ಸಾಕು ಪ್ರಾಣಿಗಳ ಮೇಲೆ ಮಾತ್ರವಲ್ಲ ಎಂಬುದನ್ನು ಇದೀಗ ಡಿ ಬಾಸ್ ನಿರೂಪಿಸಿದ್ದಾರೆ. ಹೌದು, ಈ ಬಾರಿ ಮಂಡ್ಯ ಭಾಗದ ರೈತರು ಬರದಿಂದ ಕಂಗೆಟ್ಟಿದ್ದಾರೆ. ಅತ್ತ ಗೋಶಾಲೆಗಳಲ್ಲಿರುವ ಹಸುಗಳಿಗೂ ಮೇವಿನ ಸಮಸ್ಯೆ ತಲೆದೂರಿದೆ.


ಈ ವಿಷಯ ಚಾಲೆಂಜಿಂಗ್ ಸ್ಟಾರ್ ಅವರಿಗೆ ಗೊತ್ತಾಗಿದ್ದೇ ತಡ, ಡಿ ಬಾಸ್ ಮಂಡ್ಯದ
ದೊಡ್ಡ ಬ್ಯಾಡರ ಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ್ದಾರೆ. ಅಲ್ಲದೆ ಅಲ್ಲಿನ ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್​ಗಳಷ್ಟು  ಮೇವು ದಾನ ಮಾಡಿ ತಮ್ಮ ಪ್ರಾಣಿ ಪ್ರೀತಿಯನ್ನು ಮರೆದಿದ್ದಾರೆ.


ಚೈತ್ರ ಗೋಶಾಲೆಯಲ್ಲಿ ದರ್ಶನ್


ದರ್ಶನ್ ಅವರ ಈ ಮೇವು ದಾನದ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಪ್ರೀತಿ ಹಂಚುವ ಯಜಮಾನನಿಗೆ ಅಭಿಮಾನಿಗಳು ಬಹುಪರಾಕ್ ಅಂದಿದ್ದಾರೆ. ಈ ಹಿಂದೆ ದರ್ಶನ್ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳನ್ನ ದತ್ತು ಪಡೆದಿದ್ದರು. ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ 2.95 ಲಕ್ಷ ರೂ. ಚೆಕ್ ನೀಡಿ 4 ಪ್ರಾಣಿಗಳ ದತ್ತು ನವೀಕರಣ ಮಾಡಿಕೊಂಡಿದ್ದರು. ಒಂದು ಗಂಡು ಹುಲಿ, ಎರಡು ಅನಾಕೊಂಡ ಹಾಗೂ ಆನೆಯನ್ನ ದರ್ಶನ್ ಮತ್ತೆ ದತ್ತು ಪಡೆದಿದ್ದಾರೆ. ಈ ಮೂಲಕ ಅವುಗಳ ಖರ್ಚು ವೆಚ್ಚವನ್ನು ಡಿ ಬಾಸ್ ಭರಿಸುತ್ತಿದ್ದಾರೆ.


ಅಷ್ಟೇ ಅಲ್ಲದೆ ತಮ್ಮ ಸ್ನೇಹಿತ ನಟ ಸೃಜನ್ ಲೋಕೇಶ್ ಸೇರಿಕೊಂಡು ಒಂದು ಜಿಫಾರೆ ಮರಿಯನ್ನೂ ದರ್ಶನ್ ದತ್ತು ಪಡೆದುಕೊಂಡಿದ್ದಾರೆ. ಇದಲ್ಲದೆ ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‍ನಲ್ಲೂ ಕುದುರೆ, ಹಸು ಸೇರಿದಂತೆ ಅನೇಕ ಪ್ರಾಣಿಗಳನ್ನು ಸಾಕುತ್ತಿದ್ದಾರೆ.ಇದನ್ನೂ ಓದಿ: Bigg Boss Kannada 7 Elimination: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್​: ಈ ವಾರ ಮನೆಯಿಂದ ಹೊರಬಂದ 2ನೇ ಸ್ಪರ್ಧಿ ಇವರೇ ನೋಡಿ

Published by:zahir
First published: