ಇದು ದರ್ಶನ್ ಸಿನಿಜೀವನದ ಹೊಸ ವರ್ಷನ್: ರಾಜಕೀಯ ರಣರಂಗಕ್ಕೆ ಕಾಲಿಡಲಿದ್ದಾರಾ ದಾಸ..?

ದರ್ಶನ್​ ಇತ್ತೀಚೆಗೆ ಹೊಸ ಹೊಸ ವಿಷಯಗಳಿರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೂ ಒಂದು ಕಾರಣವಿದೆ. ಅದರಲ್ಲೂ ಈ ಬಾರಿ ಅವರ ಆಯ್ಕೆ ರಾಜಕೀಯದ ರಣರಂಗ. ಇದನ್ನು ಗಮನಿಸಿದರೆ ಇದು ದರ್ಶನ್​ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡುವಂತಿದೆ.

Anitha E | news18
Updated:January 31, 2019, 7:09 PM IST
ಇದು ದರ್ಶನ್ ಸಿನಿಜೀವನದ ಹೊಸ ವರ್ಷನ್: ರಾಜಕೀಯ ರಣರಂಗಕ್ಕೆ ಕಾಲಿಡಲಿದ್ದಾರಾ ದಾಸ..?
ಹೊಸ ಸಿನಿಮಾದಲ್ಲಿ ರಾಜಕಾರಣಿಯಾಗಲಿದ್ದಾರೆ ದರ್ಶನ್​
Anitha E | news18
Updated: January 31, 2019, 7:09 PM IST
ಚಾಲೆಂಜಿಂಗ್‍ಸ್ಟಾರ್ ದರ್ಶನ್ ಸಿನಿಮಾಗಳ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಪ್ರತಿ ಬಾರಿಯೂ ಹೊಸ ವಿಷಯವನ್ನೇ ಆಯ್ದುಕೊಳ್ಳಲಿದ್ದಾರೆ. ಈಗ ದರ್ಶನ್ ಒಪ್ಪಿಕೊಳ್ಳುತ್ತಿರೋ ಹೊಸ ಸಿನಿಮಾದ ಬಗ್ಗೆ ಬಂದಿರೋ ಸುದ್ದಿ ಕೇಳಿದರೆ ದರ್ಶನ್ ಬಗ್ಗೆ ಹೊಸ ಲೆಕ್ಕಾಚಾರವೇ ಶುರುವಾಗಿಬಿಡುತ್ತೆ. ಹಾಗಂತ ಇದು, ಪೌರಾಣಿಕಾನೋ ಐತಿಹಾಸಿಕಾನೋ ಅಲ್ಲ. ಇಲ್ಲಿ ದರ್ಶನ್ ಹೊಸ ಯುಗವೇ ಆರಂಭವಾಗಲಿದೆ. ಅದೇನು ? ಯಾವ್ ಸಿನಿಮಾ? ಎಂಥಾ ಕಥೆ? ಇಲ್ಲಿದೆ ದರ್ಶನ್ ಹೊಸ ಸಿನಿಮಾದ ಕತೆ.

ಇದನ್ನೂ ಓದಿ: ಗೋಲ್ಡನ್​ ಸ್ಟಾರ್​ ದೇವದಾಸ್​ ಆಗೊರೀದ್ಯಾಕೆ: ಅದಕ್ಕೂ '99'ಗೂ ಎಲ್ಲಿನ ಸಂಬಂಧ...!

ದರ್ಶನ್ ಈಗ ಅಭಿನಯಿಸುತ್ತಿರೋ ಸಿನಿಮಾಗಳನ್ನು ಒಂದು ಸಾರಿ ನೋಡುತ್ತಿದ್ದರೆ, ಅಲ್ಲಿ 'ಯಜಮಾನ', 'ಒಡೆಯ'ದಂತಹ ಕೌಟುಂಬಿಕ ಕಥೆಗಳು ಹೆಚ್ಚಿವೆ. ಐತಿಹಾಸಿಕ 'ಮದಕರಿ' ಚಿತ್ರ ಶೂಟಿಂಗ್ ಮುಗಿಸಿದ್ರೆ, 'ಕುರುಕ್ಷೇತ್ರ'ದಂತಹ ಪೌರಾಣಿಕ ಸಿನಿಮಾ ಕೂಡ ತೆರೆಗೂ ಬಂದಾಗಿದೆ. 'ಕುರುಕ್ಷೇತ್ರ'ದಲ್ಲಿ ದುರ್ಯೋಧನನಾಗಿದ್ದ ದಚ್ಚುಗೆ ರಾಜಕೀಯದ ಕುರುಕ್ಷೇತ್ರದ ಪಾತ್ರ ಸಿಕ್ಕಿದೆ.

ನಟ ದರ್ಶನ್​


ಹೌದು, ಪರಶಿವನಿಂದ ಅರ್ಜುನ ಪಡೆದ ಪಾಶುಪತಾಸ್ತ್ರ... 'ಕುರುಕ್ಷೇತ್ರ'ದಲ್ಲಿ ದುರ್ಯೋಧನ ಪಾತ್ರ ಮಾಡಿರೋ ದಚ್ಚುಗೆ ಅರ್ಜುನ ಪಡೆದ ಅಸ್ತ್ರ ಸಿಕ್ಕಿದೆ. ಅದುವೇ 'ಪಾಶುಪತಾಸ್ತ್ರ'. ದರ್ಶನ್ ಮುಂದಿನ ಸಿನಿಮಾ ಈ 'ಪಾಶುಪತಾಸ್ತ್ರ' ಅನ್ನೋ ಸುದ್ದಿ ಕೇಳಿಬಂದಿದ್ದು ಇದೊಂದು ರಾಜಕೀಯ ಕಥಾ ಹಂದರವನ್ನು ಹೊಂದಿರುವ ಕಥೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಬೆಳ್ಳಿ ತೆರೆಗೆ ಕಿಚ್ಚ ಸುದೀಪ್​ ಸವೆಸಿದ ಹಾದಿಗೆ ಇಂದು 23ರ ಪ್ರಾಯ..!
Loading...

'ಪಾಶುಪತಾಸ್ತ್ರ' ಒಂದು ಪವರ್​ಫುಲ್​ ಅಸ್ತ್ರ. ಪುರಾಣದಲ್ಲಿ ಪ್ರಾಣಿ ಪಕ್ಷಿಗಳ ಉಪಟಳ ಅತಿಯಾಗಿದ್ದರಿಂದ ಪಶುಗಳನ್ನು ನಿಯಂತ್ರಿಸುವ ಪಶುಪತಿ ಅಸ್ತ್ರವಾದ ಪಾಶುಪತಾಸ್ತ್ರವನ್ನು ಮಹಾದೇವ ಅರ್ಜುನನಿಗೆ ನೀಡಿದ್ದು ಕಥೆ. ಈಗ ಆ ಪಾಶುಪತಾಸ್ತ್ರವನ್ನು ಹಿಡಿಯಲಿದ್ದಾರೆ ಚಾಲೆಂಜಿಂಗ್‍ಸ್ಟಾರ್. ರಾಜಕೀಯದಲ್ಲಿರೋ ದುಷ್ಟ ಮೃಗಗಳನ್ನು ಸಂಹಸರಿಸೋಕೆ ದಾಸ ಈ ಅಸ್ತ್ರವನ್ನು ಹಿಡಿದು ಅಬ್ಬರಿಸಲಿದ್ದಾರಂತೆ.

ತೆಲುಗಿನಲ್ಲಿ ಮಹೇಶ್‍ಬಾಬು ಅಭಿನಯದ ,'ಭರತ್ ಅನೆ ನೇನು' ರೀತಿಯಲ್ಲಿ ತಮಿಳಿನಲ್ಲಿ ಬಂದ ಇಳೆಯದಳಪತಿ ವಿಜಯ್ ಅಭಿನಯದ 'ಸರ್ಕಾರ್' ರೀತಿಯಲ್ಲಿ 'ಪಾಶುಪತಾಸ್ತ್ರ' ಕೂಡ ಇರಲಿದೆಯಂತೆ. ದರ್ಶನ್ ಈ ಹಿಂದೆ ಪೂರ್ಣ ಪ್ರಮಾಣದ ಪೊಲಿಟಿಕಲ್ ಕಥೆಯಲ್ಲಿ ಯಾವತ್ತೂ ಕಾಣಿಸಿಕೊಂಡಿಲ್ಲ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

ಹೊಸ ನಿರ್ದೇಶಕ ನಿರ್ಮಾಪಕರು ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದು, ದರ್ಶನ್ ರಾಜಕೀಯ ಹಿನ್ನೆಲೆಯ ಕಥೆ ಆಯ್ದುಕೊಳ್ಳುವ ಮೂಲಕ ಬರುವ ದಿನಗಳಲ್ಲಿ ರಾಜಕೀಯದ ಕಡೆಗೆ ಒಲವು ತೋರಿಸ್ತಾರಾ ಅನ್ನೋ ಅನುಮಾನಗಳೂ ಶುರುವಾಗಿವೆ.

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626