ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆಗೆ ಇದುವೇ ಸಾಕ್ಷಿ!

ನಾನು ಹಣಕ್ಕಾಗಿ ಚುನಾವಣೆ ಪ್ರಚಾರ ಮಾಡುತ್ತಾರೆ ಎಂದೇಳುತ್ತಾರೆ. ಮಾಡಿದ್ದನ್ನು ಎಲ್ಲಿಯೂ ಹೇಳಿಕೊಳ್ಳಬಾರದು. ಆದರೂ ನಾನಿವತ್ತು ಆ ಬಗ್ಗೆ ಹೇಳುತ್ತಿದ್ದೇನೆ.

zahir | news18
Updated:May 12, 2019, 8:05 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆಗೆ ಇದುವೇ ಸಾಕ್ಷಿ!
ನಾನು ಹಣಕ್ಕಾಗಿ ಚುನಾವಣೆ ಪ್ರಚಾರ ಮಾಡುತ್ತಾರೆ ಎಂದೇಳುತ್ತಾರೆ. ಮಾಡಿದ್ದನ್ನು ಎಲ್ಲಿಯೂ ಹೇಳಿಕೊಳ್ಳಬಾರದು. ಆದರೂ ನಾನಿವತ್ತು ಆ ಬಗ್ಗೆ ಹೇಳುತ್ತಿದ್ದೇನೆ.
  • News18
  • Last Updated: May 12, 2019, 8:05 AM IST
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರನ್ನು ಸ್ಯಾಂಡಲ್​ವುಡ್​ನ ದಾನ ಶೂರ ಕರ್ಣ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಂಬಿ ಬಂದವವರನ್ನು ದಾಸ ಎಂದೂ ಕೈ ಬಿಡದಿರುವುದು. ಇದೀಗ ಮತ್ತೊಮ್ಮೆ ಹಿರಿಯ ನಟರೊಬ್ಬರಿಗೆ ತೆರೆಮರೆಯಲ್ಲೇ ಸಹಾಯ ಹಸ್ತ ಚಾಚಿ ಡಿ ಬಾಸ್ ಸಖತ್ ಸುದ್ದಿಯಾಗಿದ್ದಾರೆ.

ಶಿವರಾಜ್​ಕುಮಾರ್, ಅರ್ಜುನ್ ಸರ್ಜಾ, ಮಾಲಾಶ್ರೀ, ಪ್ರಭಾರಕ್​ರಂತಹ ಅತಿರಥ ಮಹಾರಥರೊಂದಿಗೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಭರತ್ ಎಂಬ ಖಳನಾಯಕ ಸ್ಯಾಂಡಲ್​ವುಡ್​ನಿಂದ ಏಕಾಏಕಿ ಮರೆಯಾಗಿದ್ದರು. ತಲೆಗೆ ಸ್ಟ್ರೋಕ್​ ಆಗಿದ್ದರ ಪರಿಣಾಮ ಹಿರಿಯ ನಟ ಚಿತ್ರರಂಗದಿಂದ ದೂರ ಉಳಿದಿದ್ದರು. ಅಷ್ಟೇ ಅಲ್ಲದೆ ಕಳೆದ ಎಂಟು ವರ್ಷಗಳಿಂದ ಹಣವಿಲ್ಲದೆ ಚಿಕಿತ್ಸೆಗಾಗಿ ಪರದಾಡಿದ್ದರು. ಚಿತ್ರರಂಗದಲ್ಲಿ ಅನೇಕರ ಬಳಿ ಸಹಾಯ ಹಸ್ತಕ್ಕಾಗಿ ಕೈ ಚಾಚಿದರೂ ಭರವಸೆಗಳು ಸಿಕ್ಕಿತ್ತೇ ಹೊರತು ಯಾರೂ ಕೂಡ ಸಹಾಯ ಮಾಡಿರಲಿಲ್ಲ. ಆದರೆ ಸ್ಯಾಂಡಲ್​ವುಡ್​ನ ಈ ಒಬ್ಬ ನಟನನ್ನು ಬಿಟ್ಟು ಎಂದೇಳುವಾಗ ನಟ ಭರತ್​ ಅವರ ಕಣ್ಣಲ್ಲಿ ನೀರು ಚಿಮ್ಮಿತ್ತು.

ಹೌದು, ಹಾಸಿಗೆ ಹಿಡಿದಿದ್ದ ಭರತ್​ ಅವರಿಗೆ ಸ್ಯಾಂಡಲ್​ವುಡ್​ 'ಯಜಮಾನ' ದರ್ಶನ್​ ತೂಗುದೀಪ್ ನೆರವಾಗಿದ್ದರು. ಅದು ಕೂಡ ಯಾರಿಗೂ ತಿಳಿಯದಂತೆ. ಯಾವುದೇ ಪ್ರಚಾರವನ್ನು ಬಯಸದ 'ಸರ್ದಾರ', ತಮ್ಮ ಆಪ್ತರನ್ನು ಕಳುಹಿಸಿ ಚಿತ್ತೂರಿನಲ್ಲಿ ಚಿಕಿತ್ಸೆಗೆ ಹಣದ ವ್ಯವಸ್ಥೆ ಮಾಡಿದ್ದರು.ಇದೀಗ ಗುಣಮುಖರಾಗಿ ಭರತ್ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಜಲ್ಲಿಕಟ್ಟು' ಎಂಬ ಚಿತ್ರದಲ್ಲಿ ಮತ್ತೆ ಖಳನಾಗಿ ಘರ್ಜಿಸಲು ತಯಾರಿ ನಡೆಸುತ್ತಿದ್ದಾರೆ. ಇದೇ ವೇಳೆ ತಮ್ಮ ಜೀವ ಉಳಿಸಿದ  ದರ್ಶನ್​ರನ್ನು ನೆನೆದಿದ್ದಾರೆ. ನನ್ನ ಪಾಲಿನ ದೇವರಂತೆ ಬಂದ ದರ್ಶನ್​ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದಾರೆ. ಹಲವು ವರ್ಷಗಳ ಸಾವು ಬದುಕಿನ ಹೋರಾಟದ ನಡುವೆ ಸಹಾಯಹಸ್ತ ಚಾಚಿದ ಮಹಾನುಭಾವನಿಗೆ ಕೃತಜ್ಞತೆ ಸಲ್ಲಿಸಲು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.ಆದರೆ ಇದ್ಯಾವುದಕ್ಕೂ ಸಂಬಂಧವಿಲ್ಲದಂತೆ ಚಾಲೆಂಜಿಂಗ್ ಸ್ಟಾರ್ ಬಲಗೈಯಿಂದ ಕೊಟ್ಟಿಟ್ಟು ಎಡಗೈಗೆ ತಿಳಿಯದಂತೆ ಗೌಪತ್ಯೆಯನ್ನು ಕಾಪಾಡಿಕೊಂಡಿದ್ದಾರೆ. ತಾನು ಮಾಡಿದ ಸಹಾಯವನ್ನು ಎಲ್ಲೂ ಹೇಳಿಕೊಳ್ಳದೆ ಹೃದಯವಂತರಾಗಿ ಮೆರೆಯುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ನಟ ನೀನಾಸಂ ಅನಿಲ್ ಎಂಬ ನಟನ ಚಿಕಿತ್ಸೆಗೆ ಡಿ ಬಾಸ್ ನೆರವಾಗಿದ್ದರು. ಆಸ್ಪತ್ರೆಯಲ್ಲಿ ಬಿಲ್ ಪಾವತಿಸಲು ಪರದಾಡಿದ ಅನಿಲ್ ಕುಟುಂಬಕ್ಕೆ ಆಪ್ತರ ಮೂಲಕ ಧನ ಸಹಾಯ ಮಾಡಿದ್ದರು ಸ್ಯಾಂಡಲ್​ವುಡ್​ ಸುಲ್ತಾನ.

ತಾವು ಮಾಡುವ ಸಹಾಯದ ಬಗ್ಗೆ ಪ್ರಚಾರ ಬಯಸದ ದರ್ಶನ್, ಹಿಂದೆ ಮಂಡ್ಯದಲ್ಲಿ ಸುಮಲತಾ ಪರವಾಗಿ ನಡೆಸಿದ ಸ್ವಾಭಿಮಾನ ಸಮಾವೇಶದಲ್ಲಿ ಗುಡುಗಿದ್ದರು. ಈ ವೇಳೆ ಮಾತನಾಡಿದ ದರ್ಶನ್, 'ನಾನು ಹಣಕ್ಕಾಗಿ ಚುನಾವಣೆ ಪ್ರಚಾರ ಮಾಡುತ್ತಾರೆ ಎಂದೇಳುತ್ತಾರೆ. ಮಾಡಿದ್ದನ್ನು ಎಲ್ಲಿಯೂ ಹೇಳಿಕೊಳ್ಳಬಾರದು. ಆದರೂ ನಾನಿವತ್ತು ಆ ಬಗ್ಗೆ ಹೇಳುತ್ತಿದ್ದೇನೆ. ನನಗೆ ವರ್ಷಕ್ಕೆ ಎರಡರಿಂದ ಎರಡುವರೆ ಕೋಟಿ ಹಣ ಬೇಕು. ಎಲ್​ಕೆಜಿ ಇಂದ ಹಿಡಿದು ಡಾಕ್ಟರ್​ ಓದುವ ವಿದ್ಯಾರ್ಥಿಗಳು ನಮ್ಮ ಮನೆ ಬಳಿ ಬರುತ್ತಾರೆ. ಬಂದು ಸಹಾಯ ಕೇಳುತ್ತಾರೆ. ನನ್ನ ಕೈಲಾದ ಸಹಾಯವನ್ನು ನಾನು ಮಾಡುತ್ತೇನೆ. ಅದು ನಾನು ದುಡಿದ ಹಣದಿಂದ' ಎಂದು ಆರೋಪ ಮಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಚಾಲೆಂಜಿಂಗ್ ಸ್ಟಾರ್ ಉತ್ತರ ನೀಡಿದ್ದರು.

ಇದನ್ನೂ ಓದಿ: ಮದುವೆಗೂ ಮುನ್ನವೇ ಗರ್ಭವತಿಯಾದ ಸಲ್ಮಾನ್​ ಖಾನ್ ಚಿತ್ರದ ನಾಯಕಿ!

ಇದೀಗ ಚಾಲೆಂಜಿಂಗ್ ಸ್ಟಾರ್ ಹೃದಯ ಹೇಗೆ ಮಾನವೀಯತೆಗೆ ಮಿಡಿಯುತ್ತದೆ ಎಂಬುದಕ್ಕೆ ಭರತ್ ಮೂಲಕ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ. ಇದಕ್ಕೆ ಅಲ್ಲವೇ ಡಿ ಬಾಸ್ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಅವರನ್ನು ಕರುನಾಡ ದಾನಶೂರ ಎಂದು ಕರೆಯುತ್ತಿರುವುದು.

ಇದನ್ನೂ ಓದಿ: ವಿದ್ಯಾರ್ಥಿಯನ್ನು ಚುಂಬಿಸಿ ಕೆಲಸ ಕಳೆದುಕೊಂಡ ಶಿಕ್ಷಕಿ

First published: May 11, 2019, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading