Actor Darshan: ದರ್ಶನ್ ನಟನೆಯ ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಆರಂಭದಲ್ಲೇ ವಿಘ್ನ
Gandugali Madakari Nayaka Movie: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಪೋಷಕ ನಟರಾದ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಚಿತ್ರದುರ್ಗಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದರು. ಆದರೆ, ಇದೇ ವಿಚಾರ ಈಗ ವಿರೋಧಕ್ಕೆ ಕಾರಣವಾಗಿದೆ.
news18-kannada Updated:December 4, 2019, 11:17 AM IST

ದರ್ಶನ್
- News18 Kannada
- Last Updated: December 4, 2019, 11:17 AM IST
ದರ್ಶನ್ ಅಭಿನಯಿಸುತ್ತಿರುವ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ತಂಡ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಿಕೊಂಡಿತ್ತು. ಆದರೆ, ಈಗ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಡಿಸೆಂಬರ್ 2ರಂದು ಚಿತ್ರತಂಡ ಚಿತ್ರದುರ್ಗಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿತ್ತು. ಮುರುಘಾ ಶ್ರೀಗಳ ಸಾನಿಧ್ಯದಲ್ಲಿ ಮದಕರಿ ನಾಯಕನ ಪುತ್ಥಳಿಗೆ ನಟ ದರ್ಶನ್ ಹಾರ ಹಾಕಿದ್ದರು. ನಂತರ ಚಿತ್ರತಂಡ ಎಲ್ಲ ಸ್ವಾಮೀಜಿಗಳೊಂದಿಗೆ ಮುರುಘಾ ಮಠದಲ್ಲಿಯೇ ಸುದ್ದಿಗೋಷ್ಠಿ ನಡೆಸಿತ್ತು. ಆದರೆ, ಸುದ್ದಿಗೋಷ್ಠಿಗೆ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಪುರಿ ಶ್ರೀಗಳನ್ನು ಆಹ್ವಾನಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪ್ರಸನ್ನಾನಂದ ಪುರಿ ಶ್ರೀಗಳನ್ನು ‘ಗಂಡುಗಲಿ ಮದಕರಿ ನಾಯಕ’ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಹ್ವಾನಿಸಿಲ್ಲ. ಹೀಗಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್ಗೆ ಧಿಕ್ಕಾರ ಹಾಕಿ ಪೋಸ್ಟ್ ಮಾಡಲಾಗುತ್ತಿದೆ.ಇದನ್ನೂ ಓದಿ: ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಸಿಕ್ತು ಅದ್ದೂರಿ ಕಿಕ್ ಸ್ಟಾರ್ಟ್..!
ಮುರುಘಾ ಮಠ ಕಟ್ಟಿಸಿದ್ದು ಮದಕರಿ ನಾಯಕ ಎನ್ನುವುದು ಕೆಲವರ ನಂಬಿಕೆ. ಹೀಗಿರುವಾಗ ಮುರುಘಾ ಶ್ರೀಗಳು ಈ ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ನಿರ್ಮಿಸಿದ್ದಾರೆ. ಇಂಥ ಸ್ವಾಮೀಜಿಗಳಿಂದ ಚಿತ್ರತಂಡ ಆಶೀರ್ವಾದ ಪಡೆದಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನು, ಕೆಲ ಪೋಸ್ಟ್ಗಳಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಅವರನ್ನು ಭೇಟಿಯಾಗೋಣ ಎಂದು ಒತ್ತಾಯಿಸಲಾಗಿದೆ. ಈ ಮೂಲಕ ನಿರ್ದೇಶಕರಿಗೆ ಈ ವಿಚಾರ ಮನದಟ್ಟು ಮಾಡಿಕೊಳ್ಳಲು ಮುಂದಾಗಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಪೋಷಕ ನಟರಾದ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಈ ಪೂಜೆಯಲ್ಲಿ ಭಾಗವಹಿಸಿದ್ದರು.
(ವರದಿ: ವಿನಾಯಕ್ ತೊಡರನಾಳ್ )