• Home
  • »
  • News
  • »
  • entertainment
  • »
  • ನಟ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ಹೊರ ತರುತ್ತಿರುವ ಡಿ ಬಾಸ್ ಅಭಿಮಾನಿಗಳು

ನಟ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ಹೊರ ತರುತ್ತಿರುವ ಡಿ ಬಾಸ್ ಅಭಿಮಾನಿಗಳು

 ನಟ ದರ್ಶನ್

ನಟ ದರ್ಶನ್

ನಟ ದರ್ಶನ್​​ ಅಭಿಮಾನಿಗಳು ಈ ಬಾರಿಯ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ತಮ್ಮ ನೆಚ್ಚಿನ ನಟನ  ಬರ್ತಡೇಗಾಗಿ ಹಾಡುಗಳನ್ನ ಸಮರ್ಪಿಸುತ್ತಿದ್ದಾರೆ.

  • Share this:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿನ ನೆಚ್ಚಿನ ಡಿ ಬಾಸ್. ಇನ್ನು 5 ವರ್ಷ ದರ್ಶನ್ ಕಾಲ್‌ಶೀಟ್ ಸಿಗೋದು ಕಷ್ಟ. ಆ ಮಟ್ಟಿಗೆ ಬ್ಯುಸಿ ಇದ್ದರೂ ದರ್ಶನ್ ತಮಗೆ ಅಂತ ಒಂದಷ್ಟು ಸಮಯವನ್ನ ಮೀಸಲಿಡುತ್ತಾರೆ. ಆ ಸಮಯವನ್ನ ಪ್ರಾಣಿ ಪಕ್ಷಿಗಳ ಜೊತೆ ಕಳೆಯುತ್ತಾರೆ. ಸದ್ಯ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ಶೂಟಿಂಗ್ ಮುಗಿಸಿದೆ. ಕುಂಬಳ ಕಾಯಿ ಒಡೆದು ಸಂಭ್ರಮಿಸಿರೋ ಡಿ-ಬಾಸ್ ತಮ್ಮ ಬಳಗವನ್ನೆಲ್ಲಾ ಸೇರಿಸಿಕೊಂಡು ಬಾಡೂಟ ಮಾಡಿಸಿದರು. ಹಾಗೆಯೇ ಚಿತ್ರಕ್ಕಾಗಿ ದುಡಿದ ಎಲ್ಲರಿಗೂ ಉಡುಗೊರೆಯನ್ನ ಸಹ ನೀಡಿದರು.


ಇನ್ನು ರಾಬರ್ಟ್ ನಂತರ ಚಾಲೆಂಜಿಂಗ್ ಸ್ಟಾರ್, ಮದಕರಿಯ ಅವತಾರ ತಾಳಲಿದ್ದಾರೆ. ಈಗಾಗಲೇ ಮದಕರಿಗೆ ಚಿತ್ರದುರ್ಗದಲ್ಲಿ ಒಮ್ಮೆ ಹಾಗೆ ಬೆಂಗಳೂರಿನಲ್ಲಿ ಮಗದೊಮ್ಮೆ ಪೂಜೆ ನೆರವೇರಿಸಲಾಗಿದೆ. ಇನ್ನೇನಿದ್ದರೂ ಶೂಟಿಂಗ್ ಸ್ಟಾರ್ಟ್ ಮಾಡೋದಷ್ಟೇ ಬಾಕಿ. ಆ ಗ್ಯಾಪ್‌ನಲ್ಲಿ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಉತ್ತರಾಖಂಡದತ್ತ ಮುಖ ಮಾಡಿದ್ದಾರೆ. ಗೆಳೆಯರ ಜೊತೆ ಸೇರಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಎಂದಿನಂತೆ ಅವರ ಹೆಗಲ ಮೇಲೊಂದು ಕ್ಯಾಮೆರಾ ಇದೆ. ಅಲ್ಲಿನ ರಾಜಾಜಿ ನ್ಯಾಷನಲ್ ಪಾರ್ಕ್​​​​ನಲ್ಲಿ ದರ್ಶನ್, ಪ್ರಾಣಿ ಪಕ್ಷಿಗಳ ಫೋಟೋ ಸೆರೆ ಹಿಡಿಯುತ್ತಿದ್ದಾರೆ. ನದಿ ದಂಡೆಯಲ್ಲಿ ಕುಳಿತು ಫೋಟೋ ಕ್ಲಿಕ್ಕಿಸುತ್ತಿರೋ ಚಿತ್ರವೊಂದು ಸದ್ಯ ಎಲ್ಲಾ ಕಡೆ ವೈರಲ್ ಆಗಿದೆ.


ನಿಮಗೆ ಗೊತ್ತೇ ಇದೆ ಅಭಿಮಾನಿಗಳ ಪ್ರೀತಿಯ ಡಿ-ಬಾಸು. ಪ್ರಾಣಿ ಪಕ್ಷಿಗಳ ಜೊತೆ ಯಾವ ರೀತಿಯ ಒಡನಾಟ ಇಟ್ಕೊಂಡಿದ್ದಾರೆ ಅಂತ. ಸಮಯ ಸಿಕ್ಕಾಗಲೆಲ್ಲಾ ನಾಗರಹೊಳೆ ಅರಣ್ಯದತ್ತ ದೌಡಾಯಿಸೋ ದರ್ಶನ್ ಅಲ್ಲಿನ ಪ್ರಾಣಿ ಪಕ್ಷಿಗಳ ಫೋಟೋ ಕ್ಲಿಕ್ಕಿಸುತ್ತಾರೆ. ಹಾಗೆ ತಾವು ಕ್ಲಿಕ್ಕಿಸಿರೋ ಫೋಟೋಗಳನ್ನ ಹರಾಜಿಗಿಟ್ಟು ಅದರಿಂದ ಬಂದ ಹಣವನ್ನ ವನ್ಯ ಜೀವಿಗಳ ಸಂರಕ್ಷಣಾ ನಿಧಿಗೆ ಕೊಡುವಂತಹ ಔಧಾರ್ಯವಂತ ಮನುಷ್ಯ. ಇನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ದೂರದ ಕೀನ್ಯಾಗೂ ಹೋಗಿ ಬಂದಿದ್ದ ನಟ ದರ್ಶನ್ ಅಲ್ಲಿನ ಮಸಾಯಿ ಮರ ಫಾರಸ್ಟ್​​ ನಲ್ಲಿ ಸಫಾರಿ ಮಾಡಿದರು. ಹಾಗೆ ಅಲ್ಲಿನ ಬುಡಕಟ್ಟು ಜನರ ಜೊತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು.
ಇನ್ನು ಅವರ ಅಭಿಮಾನಿಗಳು ಈ ಬಾರಿಯ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ತಮ್ಮ ನೆಚ್ಚಿನ ನಟನ  ಹುಟ್ಟು ಹಬ್ಬಕ್ಕಾಗಿ ಹಾಡುಗಳನ್ನ ಸಮರ್ಪಿಸುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅಂಡ್ ಟೀಮ್ 'ಬಾಸ್ ಬಾಸ್ ಡಿಬಾಸ್' ಎಂಬ ಹಾಡನ್ನ ರೆಡಿ ಮಾಡುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅವರೇ  ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿಗೆ ಸಿದ್ಧಾರ್ಥ್ ಗೌಡ ಸಾಹಿತ್ಯ ಬರೆದಿದ್ರೆ, ಸ್ವತಃ ಸುಪ್ರೀತ್, ಮಧ್ವೇಶ್, ಶ್ರೀರಂಗ ದರ್ಶನ್, ವೇದ ವಿ ಭಟ್, ಅರ್ಪಿತ  ಧ್ವನಿಯಾಗಿದ್ದಾರೆ.


ಅಂದಹಾಗೆ ಈ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇಗೆ ಹಾಡನ್ನ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಸುಪ್ರೀತ್ ಅಂಡ್ ಟೀಮ್ ಇದಕ್ಕೂ ಮುನ್ನ ಮೂರು ಹಾಡುಗಳನ್ನ ಬಿಡುಗಡೆ ಮಾಡಿದೆ. 2017 ರಲ್ಲಿ ಮೊದಲ ಬಾರಿಗೆ ಕರುನಾಡ ದಳಪತಿ ಎಂಬ ಟೈಟಲ್‌ನಲ್ಲಿ ಸಾಂಗ್ ಬಿಡುಗಡೆ ಮಾಡಿದ್ದರು.
ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂಚಿತ್ ಹೆಗಡೆ ಧ್ವನಿಯಲ್ಲಿ ಆ ಹಾಡು ಮೂಡಿ ಬಂದಿತ್ತು. ಹಾಗೆ 2008 ರಲ್ಲಿ ಸಹ ಡಿ-ಬಾಸ್ ಹುಟ್ಟುಹಬ್ಬಕ್ಕೆ ಸುಪ್ರೀತ್ ಅಂಡ್ ಟೀಮ್ ಸಾಂಗ್ ಅರ್ಪಿಸಿತ್ತು. ಡಿ ಬಾಸ್​​ ಎಂಬ ಎಂಬ ಶೀರ್ಷಿಕೆಯಲ್ಲಿ ಮೂಡಿ ಬಂದಿದ್ದ ಹಾಡಿಗೆ ಅನಿರುದ್ ಶಾಸ್ತ್ರಿ, ಮಧ್ವೇಶ್ ಭಾರಧ್ವಜ್, ಪೂಜಾ, ಸೋನು, ಸುಪ್ರಿತ್ ದನಿಗೂಡಿಸಿದರು.


ಇದನ್ನೂ ಓದಿ : ದರ್ಶನ್​ರ ಮದಕರಿ ನಾಯಕನಿಗೆ ಮುನ್ನ ತೆರೆಗೆ ಅಪ್ಪಳಿಸಲಿದೆ ಶಿಷ್ಯನ ಆರ್ಭಟದ ಕಥೆ


ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಈ ಹಾಡು 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಇನ್ನು ಕಳೆದ ವರ್ಷ `ಡಿ ಬಾಸ್ ಪಕ್ಕಾ ಮಾಸ್' ಎಂಬ ಶೀರ್ಷಿಕೆಯಲ್ಲಿ ಹಾಡನ್ನ ಬಿಡುಗಡೆ ಮಾಡಲಾಗಿತ್ತು. ಸತತ ನಾಲ್ಕು ವರ್ಷಗಳಿಂದ ದರ್ಶನ್ ಬರ್ತಡೇ ಅಂತ ಹಾಡುಗಳನ್ನ ಹೊರತರುತ್ತಿರುವ ಸುಪ್ರಿತ್ ಅಂಟ್ ಟೀಮ್, ತಮ್ಮ ನೆಚ್ಚಿನ ನಟನನ್ನ ಹಾಡಿನ ಮೂಲಕ ಹಾಡಿ ಕೊಂಡಾಡಿ ಸಂಭ್ರಮಿಸುತ್ತಿದೆ. 

Published by:G Hareeshkumar
First published: