news18-kannada Updated:August 31, 2020, 3:00 PM IST
ದರ್ಶನ್- ಚಿರು
ಸ್ಯಾಂಡಲ್ವುಡ್ನಲ್ಲಿ ಡ್ರಗ್ ದಂದೆ ತಲೆ ಎತ್ತಿರುವ ಬಗ್ಗೆ ಮಾಹಿತಿ ಹೊರ ಬರುತ್ತಿದ್ದಂತೆ ಇಡೀ ರಾಜ್ಯದಲ್ಲೆಡೆ ಸಂಚಲನ ಸೃಷ್ಟಿಯಾಗಿದೆ. ಡ್ರಗ್ ಜಾಲದಲ್ಲಿ ಯಾರ್ಯಾರಿದ್ದಾರೆ ಎನ್ನುವ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಇತ್ತೀಚೆಗೆ ಮೃತಪಟ್ಟಿದ್ದ ಚಿರಂಜೀವಿ ಸರ್ಜಾಗೂ ಹಾಗೂ ಡ್ರಗ್ ವಿಚಾರಕ್ಕೆ ಸಂಬಂಧ ಕಲ್ಪಿಸಿ ಕೆಲ ಮಾಧ್ಯಮಗಳು ವರದಿ ಬಿತ್ತರ ಮಾಡಿದ್ದವು. ಡ್ರಗ್ ವಿಚಾರಕ್ಕೆ ಚಿರು ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ವಿಚಾರವಾಗಿ ದರ್ಶನ್ ಪ್ರತಿಕ್ರಿಯೆ ನೀಡಿದ್ದು, ಸತ್ತವರು ಯಾರೇ ಆಗಲಿ ಅವರ ಬಗ್ಗೆ ಕೆಟ್ಟ ಮಾತನಾಡೋದು ತಪ್ಪು ಎಂದಿದ್ದಾರೆ.
ಚಿರು ಹೆಸರನ್ನು ತುಂಬಾ ಎತ್ತುತ್ತಿದ್ದಾರೆ. ಅದು ಸರಿಯಲ್ಲ. ಸತ್ತವನು ಕೊಲೆಗಾರನೇ ಆಗಿದ್ದರೂ ಅವರ ತಿಥಿ ಮಾಡುತ್ತೇವೆ. ಹೀಗಿರುವಾಗ ಚಿರು ಬಗ್ಗೆ ಕೆಟ್ಟದ್ದು ಮಾತನಾಡುವುದು ಎಷ್ಟು ಸರಿ? ಒಂದೊಮ್ಮೆ ಚಿರು ಮೇಲಿರುವ ಆರೋಪ ಸಾಬೀತಾದರೂ ಯಾರಾದರೂ ಶಿಕ್ಷೆ ಕೊಡಲು ಸಾಧ್ಯವೇ? ಹೀಗಾಗಿ ಸತ್ತವರ ಬಗ್ಗೆ ದಯವಿಟ್ಟು ಕೆಟ್ಟ ಮಾತು ಬೇಡ ಎಂದು ದರ್ಶನ್ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ಕಲಾವಿದರು ಡ್ರಗ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್, ಲೈಟ್ ಬಾಯ್ನಿಂದ ಇಲ್ಲಿಯವರೆಗೆ ಬಂದಿದ್ದೇನೆ. ಸ್ಯಾಂಡಲ್ವುಡ್ನಲ್ಲಿ ಇದುವರೆಗೆ 37 ವರ್ಷ ಕಳೆದಿದ್ದೇನೆ. ಆದರೆ ನಾನು ಡ್ರಗ್ ವಿಚಾರ ಕೇಳಿಲ್ಲ. ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ವಾರದೊಳಗೆ ಪ್ರಕರಣದಲ್ಲಿ ಯಾರ್ಯಾರಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಇನ್ನು ದಾವಣೆಗೆರೆಗೆ ಬಂದಿದ್ದೇಕೆ ಎನ್ನುವ ಬಗ್ಗೆಯೂ ದರ್ಶನ್ ಮಾತನಾಡಿದ್ದಾರೆ. ಅಂಬರೀಷ್ ಗೆಳೆಯ ಮಲ್ಲಣ್ಣರ ಬಳಿ ಎರಡು ಕುದುರೆಗಳಿವೆ. ಅದನ್ನು ಕೊಡುತ್ತೇನೆ ಎಂದಿದ್ದರು. ಹೀಗಾಗಿ ತೆಗೆದುಕೊಂಡು ಹೋಗಲು ಬಂದಿದ್ದೆ. ಮಲ್ಲಣ್ಣ ಅವರನ್ನು ಭೇಟಿ ಮಾಡಿ ಮಾತನಾಡಿದೆ, ಎಂದು ಹೇಳಿದ್ದಾರೆ.
Published by:
Rajesh Duggumane
First published:
August 31, 2020, 2:58 PM IST