Bigg Boss OTT: ಬಿಗ್​ಬಾಸ್​ ಮನೆಯಲ್ಲಿ ಡಬಲ್​ ಎಲಿಮಿನೇಷನ್; ಚೈತ್ರಾ, ಅಕ್ಷತಾ ಕುಕ್ಕಿ ಔಟ್​!

ಚೈತ್ರಾ ಹಳ್ಳಿಕೇರಿ, ಜಶ್ವಂತ್​, ಜಯಶ್ರೀ ಆರಾಧ್ಯ, ನಂದಿನಿ, ಸಾನ್ಯಾ ಐಯ್ಯರ್​, ಅಕ್ಷತಾ ಕುಕ್ಕಿ, ರಾಕೇಶ್​ ಅಡಿಗ, ಸೋನು ಶ್ರೀನಿವಾಸ್​ ಗೌಡ ಅವರು ಈ ವಾರ ನಾಮಿನೇಟ್​ ಆಗಿದ್ದರು. ಅಂತಿಮವಾಗಿ ಅಕ್ಷತಾ ಮತ್ತು ಚೈತ್ರಾ ಹಳ್ಳಿಕೇರಿ ಎಲಿಮಿನೇಟ್​ ಆಗುವ ಮೂಲಕ ಬಿಗ್​ ಬಾಸ್​ ಆಟ ಮುಗಿಸಿದ್ದಾರೆ.

ಚೈತ್ರಾ, ಅಕ್ಷತಾ ಕುಕ್ಕಿ

ಚೈತ್ರಾ, ಅಕ್ಷತಾ ಕುಕ್ಕಿ

  • Share this:
ಬಿಗ್​ ಬಾಸ್ ಮನೆಯಲ್ಲಿ (Bigg Boss Elimination)​ ಈ ಬಾರಿ ಡಬಲ್ ಎಲಿಮೆನೇಷನ್ ನಡೆದಿದೆ. ಕಳೆದ ವಾರ ಮುಂದಿನ ವಾರ ಡಬಲ್​ ಎಲಿಮಿನೇಷನ್​ ನಡೆಯಲಿದೆ ಎಂದು ಕಿಚ್ಚ ಸುದೀಪ್ (Sudeep)​ ಸುಳಿವು ನೀಡಿದ್ರು. ಈ ವಾರ ಯಾರು ಔಟ್ (Who Out)​ ಆಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಸುದೀಪ್​ ಹೇಳಿದಂತೆ ಈ ವಾರ ಡಬಲ್​ ಎಲಿಮಿನೇಷನ್​ ಮಾಡಲಾಗಿದೆ. ಬಿಗ್​ ಬಾಸ್​​ ಮನೆಯಿಂದ ಅಕ್ಷತಾ ಕುಕ್ಕಿ (Akshatha kuki), ಚೈತ್ರಾ  ಹಳ್ಳಕೇರಿ (Chaitra Hallikeri) ಹೊರ ಹೋಗಿದ್ದಾರೆ.  ವೀಕ್ಷಕರಿಂದ ಕಡಿಮೆ ವೂಟ್​ ಪಡೆದ ಕಾರಣದಿಂದ ಇಬ್ಬರನ್ನು ಎಲಿಮಿನೇಟ್​ ಮಾಡಲಾಗಿದೆ. 

ಬಿಗ್​ ಬಾಸ್​ ಆಟ ಮುಗಿಸಿದ ಅಕ್ಷತಾ, ಚೈತ್ರಾ

ಚೈತ್ರಾ ಹಳ್ಳಿಕೇರಿ, ಜಶ್ವಂತ್​, ಜಯಶ್ರೀ ಆರಾಧ್ಯ, ನಂದಿನಿ, ಸಾನ್ಯಾ ಐಯ್ಯರ್​, ಅಕ್ಷತಾ ಕುಕ್ಕಿ, ರಾಕೇಶ್​ ಅಡಿಗ, ಸೋನು ಶ್ರೀನಿವಾಸ್​ ಗೌಡ ಅವರು ಈ ವಾರ ನಾಮಿನೇಟ್​ ಆಗಿದ್ದರು. ಅಂತಿಮವಾಗಿ ಅಕ್ಷತಾ ಮತ್ತು ಚೈತ್ರಾ ಹಳ್ಳಿಕೇರಿ ಎಲಿಮಿನೇಟ್​ ಆಗುವ ಮೂಲಕ ಬಿಗ್​ ಬಾಸ್​ ಆಟ ಮುಗಿಸಿದ್ದಾರೆ.

chaitra hallikeri and akshatha kuki eliminated from bigg boss kannada ott
ಚೈತ್ರಾ, ಅಕ್ಷತಾ ಕುಕ್ಕಿ


ಕಡಿಮೆ ವೋಟ್ ಬಂದ ಹಿನ್ನಲೆ ಔಟ್​​!​​ 

ಬಿಗ್​ ಮನೆಯಿಂದ 4ನೇ ವಾರಕ್ಕೆ ಅಕ್ಷತಾ ಮತ್ತು ಚೈತ್ರಾ ಎಲಿಮಿನೇಟ್​ ಆಗಿದ್ದಾರೆ. ಚೈತ್ರ ಅವರು ಜಯಶ್ರೀ ಹೊರತುಪಡಿಸಿ ಬೇರೆ ಯಾರ ಜೊತೆಗೂ ಅವರಿಗೆ ಹೆಚ್ಚು ಒಡನಾಟ ಇರಲಿಲ್ಲ. ಹಾಗಾಗಿ ಅವರಿಗೆ ಕಡಿಮೆ ವೂಟ್​ ಬಂದಿರಬಹುದು. ಟಾಸ್ಕ್​ ಮತ್ತು ಎಂಟರ್​ಟೇನ್​ಮೆಂಟ್​ ವಿಚಾರದಲ್ಲಿ ಅಕ್ಷತಾ ಕುಕ್ಕಿ ಅವರು ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್​ ನೀಡಲಿಲ್ಲ. ಈ ಎಲ್ಲ ಕಾರಣದಿಂದ ಪ್ರೇಕ್ಷಕರಿಂದ ಅವರಿಗೆ ಹೆಚ್ಚು ವೋಟ್​ ಸಿಕ್ಕಿಲ್ಲ.

ಬಿಗ್​ ಬಾಸ್​ ಸೀಸನ್​ 9 ಗೆ ಯಾರ್ಯಾರು ಸ್ಥಾನ ಪಡೀತಾರೆ!?

ಐದನೇ ವಾರದತ್ತ ಬಿಗ್​ ಬಾಸ್ ಕನ್ನಡ​ ಒಟಿಟಿ ಮೊದಲ ಸೀಸನ್​ ಸಾಗುತ್ತಿದೆ. 6ನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಭಾಗವಹಿಸಿದ ಕೆಲವರಿಗೆ ಬಿಗ್​ ಬಾಸ್​ ಕನ್ನಡ ಸೀಸನ್​ 9ಗೆ ಎಂಟ್ರಿ ಸಿಗಲಿದೆ. ಆ ಚಾನ್ಸ್​ ಯಾರು ಪಡೆಯುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಹೆಚ್ಚಾಗಿದೆ.

ದೊಡ್ಮನೆಯಲ್ಲಿ ಹೆಚ್ಚಾಗಲಿದೆ ಕಾಂಪಿಟೇಷನ್​

ಈ ಮೂಲಕ ದೊಡ್ಮನೆ ಸೇರಿದ್ದ 16 ಮಂದಿಯಲ್ಲಿ ಈಗ 09 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು ಕೇವಲ 2 ವಾರಗಳ ಕಾಲ ‘ಬಿಗ್ ಬಾಸ್ ಒಟಿಟಿ’ ನಡೆಯುವುದರಿಂದ ಕಾಂಪಿಟೇಷನ್​ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ಕಳೆದ ವಾರ ಉದಯ್​ ಔಟ್​

ಪ್ರತಿ ವಾರವೂ ಮನೆಯಿಂದ ಒಬ್ಬೊಬ್ಬರೆ ಮನೆಯಿಂದ ಹೊರ ಬರುತ್ತಾರೆ. 6 ವಾರವಿರುವ ಈ ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ ಕಳೆದ ವಾರ ಇದೀಗ ಉದಯ್ ಸೂರ್ಯ ಔಟ್ ಆಗಿದ್ದರು. ಮನೆಯಲ್ಲಿ ಇರುವಂತಹ ರೀತಿ, ವಾರದ ಪರ್ಫಾಮೆನ್ಸ್, ಆಡಿರುವ ಮಾತು ಎಲ್ಲಾ ಗಣನೆಗೆ ತೆಗೆದುಕೊಂಡು ಓರ್ವ ಸ್ಪರ್ಧಿಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತದೆ. ಕಳೆದ ವಾರ ಮನೆಯಿಂದ ಉದಯ್ ಸೂರ್ಯ ಹೊರ ನಡೆದಿದ್ದರು


ಉದಯ್​ ಮೇಲಿತ್ತು ಹಲವು ಆರೋಪಗಳು


ಬಿಗ್ ಬಾಸ್ ಮನೆಯಲ್ಲಿ ಉದಯ್​ ಸೂರ್ಯ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದರು. ಕೆಲವರ ಬಗ್ಗೆ ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಇಡೀ ಮನೆಯವರು ಉದಯ್ ವಿರುದ್ಧ ತಿರುಗಿ ಬಿದ್ದರು. ಇನ್ನು, ಮನೆಯಲ್ಲಿ ಅವರು ಡಬಲ್​ಗೇಮ್ ಆಡುತ್ತಿದ್ದರು ಎಂಬ ಆರೋಪ ಕೂಡ ಇದೆ.
Published by:Pavana HS
First published: