'ಗಲ್ಲಿ ಬಾಯ್​'ಗೆ ಸೆನ್ಸಾರ್​ ಕಿರಿಕ್​​; 13 ಸೆಕೆಂಡ್​ಗಳ ಕಿಸ್ಸಿಂಗ್​ ದೃಶ್ಯಕ್ಕೆ ಕತ್ತರಿ!

ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯ ಸೆನ್ಸಾರ್ ಮಂಡಳಿ ತುಂಬಾನೇ ಸಂಸ್ಕಾರಯುತವಾಗಿದೆ ಎಂದು ಅನೇಕರು ಟ್ವಿಟ್ಟರ್ನಲ್ಲಿ ಟೀಕೆ ಮಾಡಿದ್ದಾರೆ.

Rajesh Duggumane | news18
Updated:February 12, 2019, 1:19 PM IST
'ಗಲ್ಲಿ ಬಾಯ್​'ಗೆ ಸೆನ್ಸಾರ್​ ಕಿರಿಕ್​​; 13 ಸೆಕೆಂಡ್​ಗಳ ಕಿಸ್ಸಿಂಗ್​ ದೃಶ್ಯಕ್ಕೆ ಕತ್ತರಿ!
ಗಲ್ಲಿ ಬಾಯ್​ನಲ್ಲಿ ರಣವೀರ್​-ಆಲಿಯಾ
Rajesh Duggumane | news18
Updated: February 12, 2019, 1:19 PM IST
‘ಗಲ್ಲಿ ಬಾಯ್’ ಚಿತ್ರ ಇದೇ ವಾರ ತೆರೆಗೆ ಬರಲು ಸಿದ್ಧವಾಗಿದೆ. ರಣವೀರ್ ಸಿಂಗ್ ಹಾಗೂ ಆಲಿಯಾ ಕೆಮೆಸ್ಟ್ರಿ ಚಿತ್ರದಲ್ಲಿ ಚೆನ್ನಾಗಿಯೇ ಮೂಡಿ ಬಂದಿದೆ ಎಂಬುದಕ್ಕೆ ಟ್ರೈಲರ್ ಸಾಕ್ಷ್ಯ ನೀಡಿದೆ. ಆದರೆ, ಈಗ ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಆಘಾತ ನೀಡಿದೆ.

ಸಿನಿಮಾದಲ್ಲಿ ರಣವೀರ್ ಹಾಗೂ ಆಲಿಯಾ ನಡುವೆ ಸಾಕಷ್ಟು ರೊಮ್ಯಾನ್ಸ್ ದೃಶ್ಯಗಳು ಬರಲಿವೆಯಂತೆ. ಅದರಲ್ಲಿ 13 ಸೆಕೆಂಡ್​ಗಳ ಕಾಲ ತುಟಿಗೆ ತುಟಿ ಒತ್ತಿ ಕಿಸ್ ಮಾಡುವ ದೃಶ್ಯ ಕೂಡ ಇತ್ತು. ಆದರೆ, ಇದನ್ನು ಬಿತ್ತರಿಸಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ. ಅಷ್ಟೇ ಅಲ್ಲ, ಈ ದೃಶ್ಯಕ್ಕೆ ಕತ್ತರಿ ಹಾಕಿದರೆ ಮಾತ್ರ ಸೆನ್ಸಾರ್ ಪ್ರಮಾಣ ಪತ್ರ ನೀಡುವುದಾಗಿ ಹೇಳಿದೆ. ಹಾಗಾಗಿ, ಈ ರೊಮ್ಯಾಂಟಿಕ್ ದೃಶ್ಯಕ್ಕೆ ಚಿತ್ರತಂಡ ಅನಿವಾರ್ಯವಾಗಿ ಕತ್ತರಿ ಪ್ರಯೋಗ ಮಾಡಿದೆ.

ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯ ಸೆನ್ಸಾರ್ ಮಂಡಳಿ ತುಂಬಾನೇ ಸಂಸ್ಕಾರಯುತವಾಗಿದೆ ಎಂದು ಅನೇಕರು ಟ್ವಿಟ್ಟರ್ನಲ್ಲಿ ಟೀಕೆ ಮಾಡಿದ್ದಾರೆ. ಚಿತ್ರತಂಡ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಗೆದ್ದು ಬೀಗಿದ ‘ಸಿಂಬಾ’; ರಣವೀರ್ ಸಿಂಗ್​ ಅಭಿಮಾನಿಗಳಿಗೆ ಡಬಲ್ ಧಮಾಕ! 

ಪಹ್ಲಾಜ್ ನಿಹ್ಲಾನಿ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿದ್ದ ವೇಳೆ ಸಿನಿಮಾದಲ್ಲಿ ಬರುವ ಅವಾಚ್ಯ ಶಬ್ದ ಹಾಗೂ ರೊಮ್ಯಾಂಟಿಕ್ ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದರು. ಅವರು, 2017ರಲ್ಲಿ ನಿವೃತ್ತಿ ಹೊಂದಿದ್ದರು. ಪ್ರಸೂನ್ ಜೋಶಿ ಅವರು ಈ ಸ್ಥಾನ ತುಂಬಿದ್ದರು. ಈಗ ಅವರು ಕೂಡ ಪಹ್ಲಾಜ್ ಅವರ ದಾರಿಯನ್ನೇ ಅನುಸರಿಸುತ್ತಿರುವುದು ಬೇಸರ ಮೂಡಿಸಿದೆ.

‘ಗಲ್ಲಿ ಬಾಯ್’ ಚಿತ್ರದಲ್ಲಿ ರಣವೀರ್​-ಆಲಿಯಾ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಬೀದಿಯಲ್ಲಿ ಹಾಡು ಹೇಳಿಕೊಂಡಿದ್ದ ರ್ಯಾಪ್​ ಸಿಂಗರ್​ ತುಂಬಾನೇ ಪ್ರಖ್ಯಾತಿ ಪಡೆದುಕೊಳ್ಳುವ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಜೋಯಾ ಅಖ್ತರ್​ ನಿರ್ದೇಶನ ಹೇಳಿರುವ ಈ ಚಿತ್ರ, ಪ್ರೇಮಿಗಳ ದಿನಾಚರಣೆ ಅಂಗವಾಗಿ, ಫೆ.14ಕ್ಕೆ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ 'ಗಲ್ಲಿ ಬಾಯ್​' ಟ್ರೈಲರ್​..!
Loading...

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...