Love Aaj Kal Kissing Scene: ಸಾರಾ ಅಲಿ ಖಾನ್​-ಕಾರ್ತಿಕ್​ ಆರ್ಯನ್​ರ ಕಿಸ್ಸಿಂಗ್​ ದೃಶ್ಯಕ್ಕೆ ಬಿತ್ತು ಕತ್ತರಿ..!

Love Aaj Kal Kissing Scene: ನಿರ್ದೇಶಕ ಇಮ್ತಿಯಾಜ್​ ಅಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್​ ಸ್ಟೋರಿ ಲವ್ ಆಜ್​ ಕಲ್​. ಸಾರಾ ಹಾಗೂ ಕಾರ್ತಿಕ್​ ಆರ್ಯನ್​ರ ಕಾಂಬಿನೇಷನ್​ನ ಈ ಚಿತ್ರ ಪ್ರೇಮಿಗಳ ದಿನದಂದು ತೆರೆಗಪ್ಪಳಿಸಲು ಸಜ್ಜಾಗಿದೆ. ಆದರೆ ಇಂತಹ ಸಮಯದಲ್ಲಿ ಚಿತ್ರತಂಡಕ್ಕೆ ಸೆನ್ಸಾರ್​ ಬೋರ್ಡ್​ ದೊಡ್ಡ ಶಾಕ್​ ಕೊಟ್ಟಿದೆ.

Anitha E | news18-kannada
Updated:February 13, 2020, 9:01 AM IST
Love Aaj Kal Kissing Scene: ಸಾರಾ ಅಲಿ ಖಾನ್​-ಕಾರ್ತಿಕ್​ ಆರ್ಯನ್​ರ ಕಿಸ್ಸಿಂಗ್​ ದೃಶ್ಯಕ್ಕೆ ಬಿತ್ತು ಕತ್ತರಿ..!
ಲವ್​ ಆಜ್​ ಕಲ್​ ಸಿನಿಮಾದ ನಿರ್ದೇಸಕ ಇಮ್ತಿಯಾಜ್ ಅಲಿ, ಕಾರ್ತಿಕ್ ಆರ್ಯನ್​ ಹಾಗೂ ಸಾರಾ ಅಲಿ ಖಾನ್​
  • Share this:
ಸಾರಾ ಅಲಿ ಖಾನ್​ ಹಾಗೂ ಕಾರ್ತಿಕ್​ ಆರ್ಯನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಲವ್​ ಆಜ್ ಕಲ್​' 2020. ಈ ಹಿಂದೆ ಸೈಫ್​ ಅಲಿ ಖಾನ್​, ರಿಷಿ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದ 'ಲವ್​ ಆಜ್​ ಕಲ್​' ಸಿನಿಮಾದ ಸೀಕ್ವಲ್​ ಇದಾಗಿದೆ.

ನಿರ್ದೇಶಕ ಇಮ್ತಿಯಾಜ್​ ಅಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್​ ಸ್ಟೋರಿ 'ಲವ್ ಆಜ್​ ಕಲ್​'. ಸಾರಾ ಹಾಗೂ ಕಾರ್ತಿಕ್​ ಆರ್ಯನ್​ರ ಕಾಂಬಿನೇಷನ್​ನ ಈ ಚಿತ್ರ ಪ್ರೇಮಿಗಳ ದಿನದಂದು ತೆರೆಗಪ್ಪಳಿಸಲು ಸಜ್ಜಾಗಿದೆ. ಆದರೆ ಇಂತಹ ಸಮಯದಲ್ಲಿ ಚಿತ್ರತಂಡಕ್ಕೆ ಸೆನ್ಸಾರ್​ ಬೋರ್ಡ್​ ದೊಡ್ಡ ಶಾಕ್​ ಕೊಟ್ಟಿದೆ.

Actor Papa Saif Ali Khan said on Sara Ali Khan and Karthik Aaryan breakup
ಸಾರಾ ಹಾಗೂ ಕಾರ್ತಿಕ್​ ಆರ್ಯನ್​


ಹೌದು, ಈ ಸಿನಿಮಾದಲ್ಲಿ ಸಾರಾ ಹಾಗೂ ಕಾರ್ತಿಕ್​ ನಡುವೆ ನಡೆಯುವ ಕಿಸ್ಸಿಂಗ್ ದೃಶ್ಯವನ್ನು ಕೊಂಚ ಹೆಚ್ಚಾಗಿಯೇ ವೈಭವೀಕರಿಸಲಾಗಿದೆ ಎಂದು ಚಿತ್ರದ ಟ್ರೈಲರ್​ ನೋಡಿದವರು ಮಾತನಾಡಿಕೊಳ್ಳುತ್ತಿದ್ದರು. ಈಗ ಅದಕ್ಕೆ ಸೆಂಟ್ರಲ್​ ಬೋರ್ಡ್​ ಆಫ್​ ಫಿಲ್ಮ್​ ಸರ್ಟಿಫಿಕೇಶನ್​ (ಸಿಬಿಎಫ್​ಸಿ)  ಕತ್ತರಿ ಹಾಕಿದೆ.

ಇದನ್ನೂ ಓದಿ: ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್​..!

ಚಿತ್ರದಲ್ಲಿರುವ ಕಿಸ್ಸಿಂಗ್ ದೃಶ್ಯದ ಸಮಯವನ್ನು ಕಡಿಮೆ ಮಾಡಬೇಕು, ಹಾಗೂ ಚಿತ್ರದಲ್ಲಿ ಬಳಸಲಾಗಿರುವ ಸಾಕಷ್ಟು ಪದಗಳನ್ನು ತೆಗೆಯಬೇಕು ಎಂದು ಹೇಳಿದೆಯಂತೆ. ಅದರಲ್ಲೂ ಕೆಲ ಪದಗಳ ಬಳಕೆ ಮಾಡುವಂತಿಲ್ಲ ಎಂದಿದೆಯಂತೆ ಸಿಬಿಎಫ್​ಸಿ.

Kartik Aaryan to Sara Ali Khan Kaafi Dubli Ho Gayi Ho
ಕಾರ್ತಿಕ್​ ಆರ್ಯನ್​ ಹಾಗೂ ಸಾರಾ ಅಲಿ ಖಾನ್​
ಈ ಸಿನಿಮಾದ ಆರಂಭದಲ್ಲಿ ಬರುವ ಕಿಸ್ಸಿಂಗ್​ ದೃಶ್ಯ, ಮಧ್ಯದಲ್ಲಿ ಲೀಡ್​ ಪಾತ್ರಧಾರಿಗಳು ಬಟ್ಟೆ ಬದಲಿಸುವ ಹಾಗೂ ನೆಕ್​ ಲೈನ್​ ಡೀಪ್​ ಆಗಿರುವ ಡ್ರೆಸ್​ ತೊಟ್ಟಿರುವ ದೃಶ್ಯಗಳನ್ನು ಬ್ಲರ್​ ಮಾಡುವಂತೆ ಸೆನ್ಸಾರ್ ಬೋರ್ಡ್​ ಸೂಚಿಸಿದೆಯಂತೆ.



'ಲವ್ ಆಜ್​ ಕಲ್​' ಸಿನಿಮಾದ ಟ್ರೈಲರ್ ನೋಡಿ ಖುಷಿಯಾಗಿದ್ದ ಪ್ರೇಕ್ಷಕರಿಗೆ ಸೆನ್ಸಾರ್​ ಬೋರ್ಡ್​ ನೀಡಿರುವ ಈ ಸೂಚನೆ ನಿಜಕ್ಕೂ ಬೇಸರ ಉಂಟುಮಾಡಿದೆ. ಇನ್ನು ಇಮ್ತಿಯಾಜ್​ ಅಲಿ ನಿರ್ದೇಶನ ಇರುವ ಕಾರಣಕ್ಕೆ ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಇದೆ.

Golden Star Ganesh Wedding Anniversary: ವಿಶೇಷ ದಿನದಂದು ಹೆಂಡತಿ ಜೊತೆಗಿನ ಮೊದಲ ಭೇಟಿ ನೆನೆದ ಗೋಲ್ಡನ್​ ಸ್ಟಾರ್​ ಗಣೇಶ್​..!


 

First published: February 13, 2020, 8:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading