ಪೋಷಕರಾಗುವುದು (Parenthood) ಯಾವುದೇ ದಂಪತಿಗಳ (Couple) ಜೀವನದಲ್ಲಿ ಒಂದು ಮಹತ್ವದ ಹಂತವಾಗಿದೆ ಅಂತ ಹೇಳಬಹುದು. ಕೆಲವರು ಬೇಗನೆ ಪೋಷಕರಾದರೆ, ಇನ್ನೂ ಕೆಲವರಿಗೆ ಈ ಹಂತವನ್ನು ತಲುಪಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ವಯಸ್ಸಾದಂತೆ ಮಕ್ಕಳಾಗುವ ಸಾಧ್ಯತೆ ಕಡಿಮೆ (Infertility) ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಕೆಲವೊಮ್ಮೆ ಈ ಸಾಧ್ಯತೆಗಳು ಸಹ ಉಲ್ಟಾ ಹೊಡೆಯುತ್ತವೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ.
ಅದರಲ್ಲೂ ಈ ಟಿವಿ ಸೆಲೆಬ್ರಿಟಿಗಳು ತಮ್ಮ 40 ಮತ್ತು 50 ರ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿರುವ, ಪೋಷಕರಾಗಿರುವುದನ್ನು ಕಾಣಬಹುದು. ಯಾವ ಯಾವ ಸೆಲೆಬ್ರಿಟಿಗಳು ಈ ವಯಸ್ಸಿನಲ್ಲಿ ಪೋಷಕರಾಗಿದ್ದಾರೆ ಅಂತ ಒಮ್ಮೆ ನೋಡಿ.
ಮನೋಜ್ ತಿವಾರಿ ಮತ್ತು ಸುರಭಿ ತಿವಾರಿ
ಬಿಗ್ಬಾಸ್ ಖ್ಯಾತಿಯ ಮನೋಜ್ ತಿವಾರಿ ಮತ್ತು ಅವರ ಪತ್ನಿ ಸುರಭಿ ತಿವಾರಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 51 ವರ್ಷದ ಮನೋಜ್ ತನ್ನ ಪತ್ನಿಯ 'ಗೋಧ್ ಭರಾಯಿ’ ಸಮಾರಂಭದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ನೀವು ಕೆಲವು ಸಂತೋಷದ ಘಳಿಗೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ನೀವು ಅದನ್ನು ಅನುಭವಿಸಬೇಕಷ್ಟೆ" ಎಂದು ಅವರ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್
43 ವರ್ಷ ವಯಸ್ಸಿನ ನಟಿ ಬಿಪಾಶಾ ಬಸು ಮತ್ತು 40 ವರ್ಷ ವಯಸ್ಸಿನ ಕರಣ್ ಸಿಂಗ್ ಗ್ರೋವರ್ ದಂಪತಿಗಳು ನವೆಂಬರ್ 12 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಈ ವರ್ಷದ ಆಗಸ್ಟ್ ನಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. ಅಂತಿಮ ತ್ರೈಮಾಸಿಕದಲ್ಲಿ ಬಿಪಾಶಾ ಬೆಡ್ ರೆಸ್ಟ್ ನಲ್ಲಿದ್ದರು. ಅವರು ತಮ್ಮ ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.
ತೀಜಯ್ ಸಿಧು ಮತ್ತು ಕರಣ್ವೀರ್ ಬೊಹ್ರಾ
ತೀಜಯ್ ಸಿಧು ಎರಡನೇ ಬಾರಿಗೆ ಪ್ರೆಗ್ನೆಂಟ್ ಆದಾಗ ಅವರಿಗೆ 40 ವರ್ಷ ವಯಸ್ಸಾಗಿತ್ತು. ಈಗಾಗಲೇ ಬೆಲ್ಲಾ ಮತ್ತು ವಿಯೆನ್ನಾ ಎಂಬ ಅವಳಿ ಹೆಣ್ಣುಮಕ್ಕಳನ್ನು ಹೊಂದಿರುವ ತೀಜಯ್ ಮತ್ತು ಅವರ ಪತಿ ಕರಣ್ವೀರ್ ಬೊಹ್ರಾ ಲಾಕ್ಡೌನ್ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಮತ್ತು ಡಿಸೆಂಬರ್ 2020 ರಲ್ಲಿ ತಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದರು.
ಕಿಶ್ವರ್ ಮರ್ಚೆಂಟ್ ಮತ್ತು ಸುಯ್ಯಾಶ್ ರೈ
ಆಗಸ್ಟ್ 27, 2021 ರಂದು ಕಿಶ್ವರ್ ಮತ್ತು ಸುಯ್ಯಾಶ್ ಅವರು ಗಂಡು ಮಗುವಿಗೆ ಪೋಷಕರಾದರು. ದಂಪತಿಗಳು ಅದೇ ವರ್ಷದ ಮಾರ್ಚ್ ನಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದರು. ಕಿಶ್ವರ್ ತನ್ನ ಮೊದಲ ಮಗುವಿನೊಂದಿಗೆ ಗರ್ಭಿಣಿಯಾಗಿದ್ದಾಗ ಅವರಿಗೆ 40 ವರ್ಷ ವಯಸ್ಸಾಗಿತ್ತು. ಈ ಜೋಡಿ 2016 ರಲ್ಲಿ ಮದುವೆಯಾಗಿದ್ದರು.
ಅನಿತಾ ಹಸನಂದಾನಿ ಮತ್ತು ರೋಹಿತ್ ರೆಡ್ಡಿ
ರೋಹಿತ್ ರೆಡ್ಡಿ ಅವರನ್ನು ಮದುವೆಯಾಗಿರುವ ಅನಿತಾ ಹಸನಂದಾನಿ ಅವರು ತಮ್ಮ 40ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಇಬ್ಬರೂ 2020 ರಲ್ಲಿ ಒಳ್ಳೆಯ ಸುದ್ದಿಯನ್ನು ಘೋಷಿಸಿದರು ಮತ್ತು ಫೆಬ್ರವರಿ 7, 2021 ರಂದು ತಮ್ಮ ಮಗ ಆರವ್ ಅವರನ್ನು ಸ್ವಾಗತಿಸಿದರು. ಅನಿತಾ "ವಯಸ್ಸಿನ ಅಂಶವು ನನ್ನ ಮನಸ್ಸಿನಲ್ಲಿ ತುಂಬಾನೇ ಗೊಂದಲ ಉಂಟು ಮಾಡಿತ್ತು. ಈ ವಯಸ್ಸಿನಲಿ ಪ್ರೆಗ್ನೆಂಟ್ ಆಗುವುದು ಒಂದು ಸವಾಲು ಎಂದು ನನಗೆ ಹಲವಾರು ಮಂದಿ ಹೇಳುತ್ತಿದ್ದರು. ಆದರೆ ನಾನು ಸ್ವಾಭಾವಿಕವಾಗಿ ಗರ್ಭಧರಿಸಿದ ನಂತರ, ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಎಂದು ನಾನು ಅರಿತುಕೊಂಡೆ" ಎಂದು ಅನಿತಾ ಅಭಿಪ್ರಾಯ ಪಟ್ಟಿದ್ದಾರೆ.
ರಾಜೇಶ್ ಖಟ್ಟರ್ ಮತ್ತು ವಂದನಾ ಸಂಜಾನಿ
ರಾಜೇಶ್ ಖಟ್ಟರ್ ಮತ್ತು ಅವರ ಪತ್ನಿ ವಂದನಾ ಆಗಸ್ಟ್ 2019 ರಲ್ಲಿ ಗಂಡು ಮಗುವಿಗೆ ಪೋಷಕರಾದರು. ರಾಜೇಶ್ ಖಟ್ಟರ್ ಅವರಿಗೆ 53 ವರ್ಷ ವಯಸ್ಸಾಗಿತ್ತು, ಅವರು ಎರಡನೇ ಬಾರಿಗೆ ತಂದೆಯಾದರು. ಅದರ ಬಗ್ಗೆ ಮಾತನಾಡಿದ ಅವರು "ನನಗೆ 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನಲ್ಲಿ ತಂದೆಯಾಗುವುದು ಮತ್ತೊಂದು ಸವಾಲಾಗಿತ್ತು, ಆದರೆ ನಂತರ, ನಾನು ಈ ವರ್ಗದಲ್ಲಿ ಮೊದಲಿಗನೂ ಅಲ್ಲ ಅಥವಾ ಕೊನೆಯವನೂ ಅಲ್ಲ" ಎಂದು ಹೇಳಿದರು.
"ಕಳೆದ 11 ವರ್ಷಗಳಲ್ಲಿ ಮೂರು ಗರ್ಭಪಾತಗಳು, ಮೂರು ಐಯುಐ (ಇಂಟ್ರಾಯುಟರೈನ್ ಇನ್ಸೆಮಿನೇಷನ್) ವೈಫಲ್ಯಗಳು, ಮೂರು ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ವೈಫಲ್ಯಗಳು ಮತ್ತು ಮೂರು ಬಾಡಿಗೆ ತಾಯ್ತನದ ವೈಫಲ್ಯಗಳ ನಂತರ ನಾವು ಈ ಗಂಡು ಮಗುವಿಗೆ ಪೋಷಕರಾಗಿದ್ದೇವೆ" ಎಂದು ಅವರ ಪತ್ನಿ ವಂದನಾ ಬಹಿರಂಗಪಡಿಸಿದ್ದಾರೆ. ನಾನು ನನ್ನ ಕಥೆಯನ್ನು ಹೇಳಲು ಬಯಸುತ್ತೇನೆ, ಏಕೆಂದರೆ ಇದು ಅನೇಕ ದಂಪತಿಗಳು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಅವರ ವಯಸ್ಸು ಏನೇ ಇರಲಿ, ಮಗು ಪಡೆಯಬೇಕೆಂಬ ಭರವಸೆಯನ್ನು ಬಿಟ್ಟುಕೊಡುವುದಿಲ್ಲ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ