news18-kannada Updated:June 8, 2020, 8:24 AM IST
ಸೋನು ಸೂದ್
ಮುಂಬೈ (ಜೂ 8): ಮಹಾರಾಷ್ಟ್ರದಲ್ಲಿ ಸಿಲುಕಿರುವ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸುವ ಕೆಲಸವನ್ನು ನಟ ಸೋನು ಸೂದ್ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಇಡೀ ರಾಷ್ಟ್ರವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಶಿವಸೇನೆ ಮಾತ್ರ ಈ ವಿಚಾರದಲ್ಲಿ ರಾಜಕೀಯವನ್ನು ಎಳೆದು ತರುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆ’ಯಲ್ಲಿ ವಿವರವಾಗಿ ಬರೆಯಲಾಗಿದ್ದು, “ಸೋನು ಸೂದ್ ಬಗ್ಗೆ ವ್ಯಂಗ್ಯ ಮಾಡಲಾಗಿದೆ. ಸೋನು ಸೂದ್ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಾರೆ. ಈ ಮಾತುಕತೆ ನಂತರದಲ್ಲಿ ಅವರು ಮುಂಬೈನ ಸೆಲೆಬ್ರಿಟಿ ಮ್ಯಾನೆಜರ್ ಆಗಿ ಬಡ್ತಿ ಪಡೆಯುತ್ತಾರೆ,” ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಈ ವೇಳೆ ಸೋನು ಸೂದ್ ತಕ್ಷಣಕ್ಕೆ ಪ್ರತ್ಯಕ್ಷರಾಗಿದ್ದಾರೆ. ಅವರು ನಮ್ಮ ದೇಶದ ಹೊಸ ಮಹಾತ್ಮ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಸಾಮ್ನಾ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಚಿರು-ಮೇಘನಾ ಮದುವೆಗೆ ಸುಂದರ್ ಮನೆಯವರನ್ನು ಒಪ್ಪಿಸಿದ್ದರಂತೆ ಜಗ್ಗೇಶ್!
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಸಂಜಯ್, ಸೋನು ಸೂದ್ ಓರ್ವ ಉತ್ತಮ ನಟ ಅದರಲ್ಲಿ ಎರಡು ಮಾತಿಲ್ಲ. ಅವರು ಮಾಡಿರುವ ಕೆಲಸವೂ ಉತ್ತಮವಾಗಿದೆ. ಆದರೆ, ಇದರ ಹಿಂದೆ ರಾಜಕೀಯ ಉದ್ದೇಶ ಇರಬಹುದು ಎಂದಿದ್ದಾರೆ.
ಸದ್ಯ, ಸಂಜಯ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಓರ್ವ ನಟನಾಗಿ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ. ಆದರೆ, ಓರ್ವ ರಾಜಕಾರಣಿಯಾಗಿ ನೀವೇನು ಮಾಡಿದ್ದೀರಿ ಎಂದು ಜನರು ಪ್ರಶ್ನೆ ಮಾಡಿದ್ದಾರೆ.
First published:
June 8, 2020, 8:24 AM IST