ಈಗಂತೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ನಮ್ಮಿಷ್ಟದ ಸೆಲೆಬ್ರಿಟಿಗಳನ್ನು ದಿನ ನೋಡಬಹುದು. ಇನ್ಸ್ಟಾಗ್ರಾಮ್ನಲ್ಲಿ (Instagram ) ಸೆಲೆಬ್ರಿಟಿಗಳು ಹೆಚ್ಚು ಸಕ್ರೀಯವಾಗಿರುತ್ತಾರೆ ಮತ್ತು ಅಭಿಮಾನಿಗಳಿಗೂ ಹತ್ತಿರವಾಗಿರುತ್ತಾರೆ. ಅವರು ಹಂಚಿಕೊಳ್ಳುವ ಒಂದು ಫೋಟೋಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನೂ ಕೆಲ ಬಾಲಿವುಡ್ (Bollywood) ಬ್ಯಾಚುರಲ್ ಹೀರೋ-ಹೀರೋಯಿನ್ಗಿಂತ ಈ ಮದುವೆಯಾದ ಸೆಲೆಬ್ರಿಟಿ ಜೋಡಿಗಳು, ಇನ್ನೇನು ಮದುವೆ ಹೊಸ್ತಿಲಲ್ಲಿರುವ ಪ್ರಣಯ ಪಕ್ಷಿಗಳ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಸಖತ್ ಸದ್ದು ಮಾಡುತ್ತಿವೆ. ನೆಟ್ಟಿಗರೂ ಸಹ ಕೆಲ ಜೋಡಿಗಳ ಫೋಟೋ (Photos), ವಿಡಿಯೋ, ರೀಲ್ಸ್ಗೆ ಮನಸೋತಿದ್ದು, ಮುದ್ದಾಗಿದೆ ಜೋಡಿ ಅಂತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮುದ್ದಾದ ಪೋಸ್ಟ್ಗಳಿಂದಲೇ ನೆಟ್ಟಿಗರ ಹೃದಯ ಗೆಲ್ಲುತ್ತಿರುವ ಆ ಸೆಲೆಬ್ರಿಟಿ ಜೋಡಿಗಳು ಯಾರು ಅನ್ನೋ ಕಾತುರಕ್ಕೆ ಇಲ್ಲಿದೆ ನೋಡಿ ಉತ್ತರ.
ರಣವೀರ್ ಸಿಂಗ್ - ದೀಪಿಕಾ ಪಡುಕೋಣೆ
ಇನ್ಸ್ಟಾಗ್ರಾಮ್ನಲ್ಲಿ ಈ ಜೋಡಿ ಯಾವಾಗ್ಲೂ ಸದ್ದು ಮಾಡುತ್ತಲೇ ಇರುತ್ತವೆ.
ಈ ಜೋಡಿ ಒಂದಿಲ್ಲೊಂದು ರೊಮ್ಯಾಂಟಿಕ್ ಕ್ಷಣಗಳಲ್ಲಿ ಕ್ಯಾಮರಾದಲ್ಲಿ ಸೆರೆಯಾಗುತ್ತಿರುತ್ತಾರೆ. ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಪರಸ್ಪರ ಮುದ್ದಾದ ಕಾಮೆಂಟ್ ಮಾಡುವ ಮೂಲಕ ಇಬ್ಬರು ಒಬ್ಬರಿಗೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿಕೊಳ್ಳುತ್ತಲೇ ಇರುತ್ತಾರೆ. ಒಟ್ಟಾರೆ ಈ ಇಬ್ಬರ ಜೋಡಿಗಳ ಫೋಟೋಗೆ ನೆಟ್ಟಿಗರು ಕಾತುರದಿಂದ ಕಾಯುತ್ತಿರುತ್ತಾರೆ ಅನ್ನೋದಂತೂ ನಿಜ.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಬ್ಬರೂ ಪವರ್ಫುಲ್ ಕಪಲ್. ಇಬ್ಬರೂ ಆಗಾಗ ತಮ್ಮ ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಖತ್ ರೋಮ್ಯಾಂಟಿಕ್ ಕಪಲ್ ಇವರಾಗಿದ್ದೂ, ನೆಟ್ಟಿಗರಂತೂ ಇವರ ಫೋಸ್ಟ್ಗೆ ಫಿಧಾ ಆಗಿದ್ದಾರೆ.
ಸೋನಮ್ ಕಪೂರ್-ಆನಂದ್ ಅಹುಜಾ
ಬಾಲಿವುಡ್ನ ಸ್ಟೈಲಿಶ್ ಲೇಡಿ ಸೋನಮ್ ಕಪೂರ್ ಮತ್ತು ಉದ್ಯಮಿ ಆನಂದ ಅಹುಜಾ ಬಾಲಿವುಡ್ನ ಮತ್ತೊಂದು ಸೂಪರ್ ಜೋಡಿ. ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಇವರೂ ಕೂಡ ತಮ್ಮ ಪೋಸ್ಟ್ ಮೂಲಕ ನೆಟ್ಟಿಗರನ್ನು ಸೆಳೆಯುತ್ತಿದ್ದಾರೆ. ಮೊನ್ನೆ ಮೊನ್ನೆ ಸೋನಮ್ ಶೂ ಲೇಸ್ ಕಟ್ಟಿದ್ದಕ್ಕೆ ಆನಂದ್ ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಪತಿ-ಪತ್ನಿ ಇಬ್ಬರು ಪರಸ್ಪರ ಕಾಮೆಂಟ್ ಮಾಡಿಕೊಳ್ಳುವ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಸಕ್ರೀಯರಾಗಿರುತ್ತಾರೆ. ಅಭಿಮಾನಿಗಳೂ ಕೂಡ ಜೋಡಿ ಮುದ್ದಾಗಿದೆ ಅಂತಿದ್ದಾರೆ.
ಇದನ್ನೂ ಓದಿ: Anurag Kashyap-Rishab Shetty: ರಿಷಬ್ ಶೆಟ್ಟಿಗೆ ಬಾಲಿವುಡ್ ನಟನ ವಾರ್ನಿಂಗ್, ಅನುರಾಗ್ ಕಶ್ಯಪ್ ಯಾಕೆ ಹೀಗಂದ್ರು?
ಅತಿಯಾ ಶೆಟ್ಟಿ-ಕೆಎಲ್ ರಾಹುಲ್
ಇನ್ನೇನು ಹಸೆಮಣೆ ಏರಲು ಸಿದ್ಧವಾಗಿರುವ ಈ ಪ್ರಣಯ ಪಕ್ಷಿಗಳಿಗೆ ಇನ್ಸ್ಟಾಗ್ರಾಮ್ನಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಅತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಆಗಾಗ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಸದ್ದು ಮಾಡುತ್ತಿರುತ್ತಾರೆ.
ಶಾಹಿದ್ ಕಪೂರ್-ಮೀರಾ ರಜಪೂತ್ ಕಪೂರ್
ಇನ್ಸ್ಟಾಗ್ರಾಮ್ನಲ್ಲಿ ಇವರಿಬ್ಬರ ಪೋಸ್ಟ್ಗಳನ್ನು ನೋಡುತ್ತಿದ್ದರೆ ಜೋಡಿ ಅಂದರೆ ಹೀಗಿರಬೇಕು ಎಂದೆನಿಸುತ್ತದೆ. ಇಬ್ಬರೂ ತಮಾಷೆ, ಪ್ರೀತಿ ತುಂಬಿದ ಪೋಸ್ಟ್ಗಳ ಮೂಲಕ ಫಾಲೋವರ್ಸ್ಗಳಿಗೆ ಖುಷಿ ನೀಡುತ್ತಿದ್ದಾರೆ.
ವಿಕ್ಕಿ ಕೌಶಲ್-ಕತ್ರಿನಾ ಕೈಫ್
ಬಾಲಿವುಡ್ನ ಸೆನ್ಸೇಷನ್ ಜೋಡಿ ಅಂದರೆ ವಿಕ್ಕಿ ಮತ್ತು ಕ್ಯಾಟ್. ಇಬ್ಬರ ನಡುವಿನ ಪ್ರೀತಿಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಡದೇ ನೇರವಾಗಿ ಮದುವೆ ಆಗುತ್ತಿರುವ ಬಗ್ಗೆ ಹೇಳಿದ್ದರು.ಬಾಲಿವುಡ್ನ ಸದ್ಯದ ಸೂಪರ್ ಜೋಡಿ ಅಂತಾಲೇ ಫೇಮಸ್ ಆಗಿದ್ದಾರೆ. ಇಬ್ಬರು ಯಾವಾಗ ಒಟ್ಟಿಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇರುತ್ತಾರೆ.
ಅರ್ಜುನ್ ಕಪೂರ್-ಮಲೈಕಾ ಅರೋರಾ
ಸದಾ ಸುದ್ದಿಯಲ್ಲಿರುವ ಅರ್ಜುನ್ ಕಪೂರ್-ಮಲೈಕಾ ಅರೋರಾ ಜೋಡಿ ಇನ್ಸ್ಟಾಗ್ರಾಮ್ನಲ್ಲೂ ಸಖತ್ ಫೇಮಸ್. ಟ್ರೋಲ್ಗಳಿಗೆ ತಲೆಕೆಡಿಸಿಕೊಳ್ಳದ ಇವರು ಕೇವಲ ಪ್ರೀತಿಯಿಂದಲೇ ಎಲ್ಲಾ ಸಾಧ್ಯ ಎನ್ನುತ್ತಾರೆ. ನೆಟಿಜನ್ಗಳು ಕೂಡ ಈ ಜೋಡಿಯ ಪೋಸ್ಟ್ಗೆ ಲೈಕ್, ಕಾಮೆಂಟ್ ಮಾಡುವ ಮೂಲಕ ಹೊಗಳಿಕೆ ವ್ಯಕ್ತಪಡಿಸುತ್ತಾರೆ.
ಅಲಿ ಫಜಲ್-ರಿಚಾ ಚಡ್ಡಾ
2.5 ವರ್ಷಗಳ ಹಿಂದೆ ವಿವಾಹವಾದ ಅಲಿ ಮತ್ತು ರಿಚಾ ಇತ್ತೀಚೆಗೆ ಸ್ನೇಹಿತರು ಮತ್ತು ಕುಟುಂಬದ ಉಪಸ್ಥಿತಿಯಲ್ಲಿ ತಮ್ಮ ಮದುವೆ ಸಂಭ್ರಮವನ್ನು ಆಚರಿಸಿದರು. ಅಲಿ ಮತ್ತು ರಿಚಾ ತಮ್ಮ ನೈಜ, ಸಾದ-ಸೀದಾ ಚಿತ್ರಗಳ ಮೂಲಕ ನೆಟ್ಟಿಗರ ಮನಸ್ಸು ಕದಿಯುತ್ತಲೇ ಇರುತ್ತಾರೆ.
ಜಾಕಿ ಭಗ್ನಾನಿ-ರಾಕುಲ್ಪ್ರೀತ್ ಸಿಂಗ್
ಕೆಲವು ದಿನಗಳ ಹಿಂದೆ ಅಷ್ಟೇ ಜಾಕಿ ಭಗ್ನಾನಿ-ರಾಕುಲ್ಪ್ರೀತ್ ಸಿಂಗ್ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ನಲ್ಲಿ ಮತ್ತೊಂದು ಮುದ್ದಾದ ಜೋಡಿ ಹವಾ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ