• Home
  • »
  • News
  • »
  • entertainment
  • »
  • Celebrities: ತಮ್ಮ ಗಂಡನ “ಮಾಜಿ ಗೆಳತಿ”ಯರ ಜೊತೆ ಇನ್ನೂ ಚೆನ್ನಾಗಿಯೇ ಇರುವ ಸೆಲೆಬ್ರಿಟಿಗಳಿವರು!

Celebrities: ತಮ್ಮ ಗಂಡನ “ಮಾಜಿ ಗೆಳತಿ”ಯರ ಜೊತೆ ಇನ್ನೂ ಚೆನ್ನಾಗಿಯೇ ಇರುವ ಸೆಲೆಬ್ರಿಟಿಗಳಿವರು!

ಸೆಲೆನಾ ಗೊಮೆಜ್ ಮತ್ತು ಹೈಲಿ ಬೈಬರ್, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್

ಸೆಲೆನಾ ಗೊಮೆಜ್ ಮತ್ತು ಹೈಲಿ ಬೈಬರ್, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್

ಗಂಡನ ಅಥವಾ ಬಾಯ್‌ ಫ್ರೆಂಡ್‌ ನ ಮಾಜಿ ಗೆಳೆತಿಯರೆಂದರೆ ಅಸೂಯೆ ಇದ್ದೇ ಇರುತ್ತೆ ಅಂತ ಅನೇಕರು ಅಂದುಕೊಳ್ತಾರೆ. ಆದ್ರೆ ಅದರ ಆಚೆಗೂ ಅವರು ಒಂದು ಮಾನವೀಯತೆ ಪ್ರೀತಿ ಗೌರವಗಳೊಂದಿಗೆ ನಡೆದುಕೊಳ್ತಾರೆ ಅನ್ನೋದಕ್ಕೆ ಈ ಸೆಲೆಬ್ರಿಟಿಸ್‌ ಸಾಕ್ಷಿಯಾಗ್ತಾರೆ. ಹಾಲಿವುಡ್‌ ಸೆಲೆಬ್ರಿಟಿಗಳಾದ ಹೈಲಿ ಬೈಬರ್ ನಿಂದ ಹಿಡಿದು ಆಲಿಯಾ ಭಟ್‌ ವರೆಗೆ ಹಲವು ಸೆಲೆಬ್ರಿಟಿಗಳು ತಮ್ಮ ಗಂಡನ ಮಾಜಿಗಳೊಂದಿಗೆ ಚೆನ್ನಾಗಿಯೇ ಇದ್ದಾರೆ.

ಮುಂದೆ ಓದಿ ...
  • Share this:

ಅಸೂಯೆ ಅನ್ನೋದು ಮನುಷ್ಯನ ಸ್ವಾಭಾವಿಕ ಗುಣ. ಆದ್ರಲ್ಲೂ ಮಹಿಳೆಯರಲ್ಲಿ (Women's) ಇದು ಜಾಸ್ತಿ ಅನ್ನೋದು ಸಾಮಾನ್ಯ ಅಭಿಪ್ರಾಯ. ವಿಶೇಷವಾಗಿ ಪ್ರೀತಿ ವಿಷಯಕ್ಕೆ ಬಂದಾಗ ಲೇಡೀಸ್‌ ರಾಜಿ ಮಾಡ್ಕೊಳ್ಳೋದೇ ಇಲ್ಲ ಅನ್ನೋದು ಸತ್ಯ. ಗಂಡನ (Husband) ಅಥವಾ ಬಾಯ್‌ ಫ್ರೆಂಡ್‌ ನ ಮಾಜಿ ಗೆಳೆತಿಯರೆಂದರೆ ಅಸೂಯೆ ಇದ್ದೇ ಇರುತ್ತೆ ಅಂತ ಅನೇಕರು ಅಂದುಕೊಳ್ತಾರೆ. ಆದ್ರೆ ಅದರ ಆಚೆಗೂ ಅವರು ಒಂದು ಮಾನವೀಯತೆ ಪ್ರೀತಿ ಗೌರವಗಳೊಂದಿಗೆ ನಡೆದುಕೊಳ್ತಾರೆ ಅನ್ನೋದಕ್ಕೆ ಈ ಸೆಲೆಬ್ರಿಟಿಸ್‌ ಸಾಕ್ಷಿಯಾಗ್ತಾರೆ. ಹಾಲಿವುಡ್‌ ಸೆಲೆಬ್ರಿಟಿಗಳಾದ (Celebrities) ಹೈಲಿ ಬೈಬರ್ ನಿಂದ ಹಿಡಿದು ಆಲಿಯಾ ಭಟ್‌ ವರೆಗೆ ಹಲವು ಸೆಲೆಬ್ರಿಟಿಗಳು ತಮ್ಮ ಗಂಡನ ಮಾಜಿಗಳೊಂದಿಗೆ ಚೆನ್ನಾಗಿಯೇ ಇದ್ದಾರೆ.


ಸೆಲೆನಾ ಗೊಮೆಜ್ ಮತ್ತು ಹೈಲಿ ಬೈಬರ್
ಸೆಲೆನಾ ಗೊಮೆಜ್ ಮತ್ತು ಹೈಲಿ ಬೈಬರ್ ಲಾಸ್ ಏಂಜಲೀಸ್‌ನಲ್ಲಿರುವ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ ಗಾಲಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಾಗ ಅಭಿಮಾನಿಗಳೆಲ್ಲ ಆಶ್ಚರ್ಯಕ್ಕೊಳಗಾದರು. ಜಸ್ಟಿನ್ ಬೈಬರ್ ಅವರೊಂದಿಗಿನ ಇಬ್ಬರೂ ಕೂಡ ರಿಲೇಶನ್‌ ಶಿಪ್‌ ನಲ್ಲಿದ್ದರು ಎಂಬ ಕಾರಣಕ್ಕೆ ಅವರಿಬ್ಬರು ಮಧ್ಯೆ ಅಸೂಯೆ ಭಾವ ಇರಬಹುದೆಂಬ ಅಭಿಪ್ರಾಯವನ್ನು ಅವರು ತಪ್ಪಾಗಿಸಿದ್ದರು.


ಸೆಲೆನಾ, ಬೈಬರ್‌ ಜೊತೆ ದೀರ್ಘಕಾಲದ ಸಂಬಂಧ ಹೊಂದಿದ್ದರೂ ಕೊನೆಗೆ 2018 ರಲ್ಲಿ ಬೈಬರ್‌ ಮದುವೆಯಾಗಿದ್ದು ಹೈಲಿಯನ್ನ. ಆದ್ರೆ ಕಾರ್ಯಕ್ರಮದಲ್ಲಿ ಸೆಲೆನಾ ಹಾಗೂ ಹೈಲಿ ಇಬ್ಬರೂ ತಬ್ಬಿಕೊಂಡು ಗೌರವ ಸೂಚಿಸಿದ್ದನ್ನು ನೋಡಿ ಅವರಿಬ್ಬರ ಮಧ್ಯೆ ಏನೂ ಮನಸ್ತಾಪವಿಲ್ಲ ಅನ್ನೋದನ್ನು ಸಾಬೀತುಪಡಿಸಿದರು.


ಕಿಮ್ ಶರ್ಮಾ ಮತ್ತು ಹೇಜೆಲ್ ಕೀಚ್
ಒಂದೊಮ್ಮೆ ಬಾಲಿವುಡ್ ತಾರೆ ಕಿಮ್ ಶರ್ಮಾ ಮಾಜಿ ಗೆಳೆಯ ಯುವರಾಜ್ ಸಿಂಗ್ ಮತ್ತು ಅವರ ಪತ್ನಿ ಹೇಜೆಲ್ ಕೀಚ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಾಗ "ಗುಡ್ ವೈಬ್ಸ್ ಮಾತ್ರ" ಹೇಳಿದ್ದರು.


ಇದನ್ನೂ ಓದಿ:  Gandhada Gudi-Sudha Murty: ಡಾ. ರಾಜ್ ನೆನಪಾಗ್ತಾರೆ! ಗಂಧದ ಗುಡಿ ನೋಡಿ ಸುಧಾ ಮೂರ್ತಿ ಹೇಳಿದ್ದಿಷ್ಟು


ಯುವರಾಜ್‌ ಸಿಂಗ್‌ ಅವರ ನಿವೃತ್ತಿ ಪಾರ್ಟಿಯಲ್ಲಿ ತೆಗೆದ ಚಿತ್ರದಲ್ಲಿ ಮೂವರೂ ಚೆಂದದ ಸ್ಮೈಲಿಂಗ್‌ ಫೋಸ್‌ ನೀಡಿದ್ದರು. ಯುವಿ ಹಾಗೂ ಕಿಮ್‌ ಮೊದಲು ಒಟ್ಟಿಗೆ ಓಡಾಡುತ್ತಿದ್ದರೂ ನಂತರ 2016 ರಲ್ಲಿ ಯುವರಾಜ್‌ ಸಿಂಗ್‌ ಹಾಗೂ ಹೆಜೆಲ್‌ ಮದುವೆಯಾಗಿದ್ದದು ಈಗ ಹಳೇ ವಿಷಯ. ‌


ನೀನಾ ಡೊಬ್ರೆವ್ ಮತ್ತು ನಿಕ್ಕಿ ರೀಡ್
'ದಿ ವ್ಯಾಂಪೈರ್ ಡೈರೀಸ್' ನಲ್ಲಿ ನೀನಾ ಡೊಬ್ರೆವ್ ಮತ್ತು ಇಯಾನ್ ಸೊಮರ್‌ಹಾಲ್ಡರ್ ಅವರ ಆನ್ ಸ್ಕ್ರೀನ್‌ ಹಾಗೂ ಆಫ್-ಸ್ಕ್ರೀನ್ ಕೆಮೆಸ್ಟ್ರಿ ಸಖತ್‌ ಫೇಮಸ್‌ ಆಗಿತ್ತು. ಆದ್ರೆ ನಂತರ ಟ್ವಿಲೈಟ್ ನಟಿ ನಿಕ್ಕಿ ರೀಡ್ ಜೊತೆ ಇಯಾನ್‌ ಡೇಟಿಂಗ್‌ ಶುರು ಮಾಡಿದ ಮೇಲೆ ನೀನಾ ದೂರವಾದ್ರು.


ವ್ಯಾಂಪೈರ್‌ ಡೈರೀಸ್‌ ನಿಂದಲೂ ಅವರು ಹೊರಹೋಗೋದಿಕ್ಕೆ ಇದೇ ಕಾರಣ ಅಂತ ಕೂಡ ಅನ್ನಲಾಗುತ್ತೆ. ಆದ್ರೆ ನೀನಾ ಹಾಗೂ ನಿಕ್ಕಿ ನಡುವೆ ಯಾವುದೇ ದ್ವೇಷ ಇಲ್ಲ ಅನ್ನೋದಕ್ಕೆ ಈ ಮೂವರು ಹಂಚಿಕೊಂಡ ಪೋಟೋ ಹಾಗೂ ಅವರ ಜೊತೆ ಬರೆದಿರುವ “ಇಲ್ಲಿರುವುದು ಪ್ರೀತಿ ಮಾತ್ರ ಮತ್ತು ಅದು ಯಾವಾಗಲೂ ಇರುತ್ತದೆ” ಅನ್ನೋ ಬರಹ ಸಾಕ್ಷಿ ನುಡಿಯುತ್ತೆ.


ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್
ಬಾಲಿವುಡ್‌ ನ ಕ್ಯಾಟ್‌ ಅಂತಾನೇ ಕರೆಯಿಸಿಕೊಳ್ಳೋ ಕತ್ರಿನಾ ಕೈಫ್‌ ಹಾಗೂ ರಣಬೀರ್‌ ಕಪೂರ್‌ ಸಂಬಂಧ ಜಗತ್ತಿಗೇ ಗೊತ್ತು. ನಂತರ ಅವರ ಬ್ರೇಕಪ್‌ ಆಗಿ, ಬ್ರಹ್ಮಾಸ್ತ್ರ ಶೂಟಿಂಗ್‌ ಸಮಯದಲ್ಲಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಪ್ರೇಮದಲ್ಲಿ ಬಿದ್ದಿದ್ದು ಗೊತ್ತೇ ಇದೆ. ಸದ್ಯ ಅವರಿಬ್ಬರೂ ಮದುವೆಯೂ ಆಗಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


ಆದರೆ ಆಲಿಯಾ ಹಾಗೂ ಕತ್ರೀನಾ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂಬುದಕ್ಕೆ 2019 ರ ಫಿಲ್ಮ್‌ ಫೇರ್‌ ಅವಾರ್ಡ್ಸ್‌ ಫಂಕ್ಷನ್‌ ಸಾಕ್ಷಿಯಾಗಿತ್ತು. ಈ ವೇಳೆ ಭೇಟಿಯಾಗಿದ್ದ ಆಲಿಯಾ ಹಾಗೂ ಕತ್ರೀನಾ ಪರಸ್ಪರ ನಗು ಸೂಸಿ ತಬ್ಬಿಕೊಳ್ಳುತ್ತಾರೆ. ಹೀಗಾಗಿ ಇಬ್ಬರ ನಡುವೆಯೂ ಅಸೂಯೆ ಇದೆ ಅನ್ನೋ ವದಂತಿಗಳಿಗೆಲ್ಲ ಈ ಘಟನೆ ತೆರೆ ಎಳೆದಿತ್ತು.


ಟೇಲರ್ ಸ್ವಿಫ್ಟ್ ಮತ್ತು ಕೇಟಿ ಪೆರ್ರಿ
ಟೇಲರ್ ಸ್ವಿಫ್ಟ್ ಮತ್ತು ಕೇಟಿ ಪೆರ್ರಿ ಇಬ್ಬರೂ 'ಯು ನೀಡ್ ಟು ಕಾಮ್ ಡೌನ್' ಮ್ಯೂಸಿಕ್ ವೀಡಿಯೊದಲ್ಲಿ 'ಹ್ಯಾಪಿ ಮೀಲ್' ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಾವಿಬ್ಬರೂ ಒಟ್ಟಾಗಿದ್ದೇವೆಂಬ ಸಂದೇಶ ನೀಡಿದ್ದಾರೆ. ಕೆಲ ಟ್ಯಾಬ್ಲಾಯ್ಡ್‌ ವರದಿಗಳ ಪ್ರಕಾರ ಗಾಯಕ ಜಾನ್‌ ಮೇಯರ್‌ ಇವರಿಬ್ಬರ ಗೆಳೆತನ ಮಧ್ಯೆ ಬಂದಿದ್ದರಿಂದಾಗಿ ಟೇಲರ್‌ ಹಾಗೂ ಕೇಟಿ ಇಬ್ಬರೂ ದೂರವಾಗಿದ್ದರು.


ಇದನ್ನೂ ಓದಿ:  Kantara Movie: ಕಾಂತಾರ ಗುಂಗಿನಲ್ಲಿ ಕನ್ನಡಿಗರು! ಚಿತ್ರ ರಿಲೀಸ್ ಮಾಡಲು ನಿರ್ಮಾಪಕರಿಗೆ ಭಯ!


ಇಬ್ಬರೂ ಈ ಗಾಯಕನ ಜೊತೆ ಡೇಟಿಂಗ್‌ ಮಾಡಿದ್ದ ಕಾರಣ ಇವರ ಸ್ನೇಹ ಮುರಿದುಹೋಗಿತ್ತು. ಆದರೀಗ ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ.

Published by:Ashwini Prabhu
First published: