Pailwaan: ಸುದೀಪ್​ ಅಭಿನಯದ ಪೈಲ್ವಾನ್​ಗೆ ಶುಭಕೋರಿದ ಸಿನಿ ತಾರೆಯರು​..!

Pailwaan Movie Review: ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ. ಸ್ಯಾಂಡಲ್​ವುಡ್​ನಲ್ಲಿ ಕೆ.ಜಿ.ಎಫ್​ನಿಂದ ಈ ಟ್ರೆಂಡ್​ ಆರಂಭವಾಗಿತ್ತು. ಇನ್ನು ಕೃಷ್ಣ ನಿರ್ದೇಶನದ ಈ ಸಿನಿಮಾ ರಿಲೀಸ್​ ಆಗಿದ್ದು, ಅದಕ್ಕೆ ಚಂದನವನ ಸೇರಿದಂತೆ ಬೇರೆ ಭಾಷೆಯ ಸೆಲೆಬ್ರಿಟಿಗಳು ಕಿಚ್ಚನಿಗೆ ಶುಭ ಕೋರಿದ್ದಾರೆ.

Anitha E | news18-kannada
Updated:September 12, 2019, 10:58 AM IST
Pailwaan: ಸುದೀಪ್​ ಅಭಿನಯದ ಪೈಲ್ವಾನ್​ಗೆ ಶುಭಕೋರಿದ ಸಿನಿ ತಾರೆಯರು​..!
ಪೈಲ್ವಾನ್​ ಸಿನಿಮಾದಲ್ಲಿ ಸುದೀಪ್​
Anitha E | news18-kannada
Updated: September 12, 2019, 10:58 AM IST
ಇಂದು ಕಿಚ್ಚನ ಅಭಿಮಾನಿಗಳಿಗೆ ಹಬ್ಬ. ಇವತ್ತು ವಿಶ್ವದಾದ್ಯಂತ 'ಪೈಲ್ವಾನ್​' ಸಿನಿಮಾ ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಭಾರತ ಸೇರಿದಂತೆ ಇತರೆ ದೇಶಗಳಲ್ಲೂ 'ಪೈಲ್ವಾನ್'​ ಅಬ್ಬರಿಸೋಕೆ ಆರಂಭಿಸಿದ್ದಾನೆ.

ಸುದೀಪ್​ ಅಭಿನಯದ ಈ ಸಿನಿಮಾ ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ. ಸ್ಯಾಂಡಲ್​ವುಡ್​ನಲ್ಲಿ 'ಕೆ.ಜಿ.ಎಫ್​'ನಿಂದ ಈ ಟ್ರೆಂಡ್​ ಆರಂಭವಾಗಿತ್ತು. ಇನ್ನು ಕೃಷ್ಣ ನಿರ್ದೇಶನದ ಈ ಸಿನಿಮಾ ರಿಲೀಸ್​ ಆಗಿದ್ದು, ಅದಕ್ಕೆ ಚಂದನವನ ಸೇರಿದಂತೆ ಬೇರೆ ಭಾಷೆಯ ಸೆಲೆಬ್ರಿಟಿಗಳು ಕಿಚ್ಚನಿಗೆ ಶುಭ ಕೋರಿದ್ದಾರೆ.

ನಟ ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ, ವಿತರಕ ಕಾರ್ತಿಕ್​​ ಗೌಡ,  ನಭಾ ನಟೇಶ್​, ಸಿಂಪಲ್​ ಸುನಿ, ಪವನ್​ ಒಡೆಯರ್​, ಪ್ರೇಮ್​, ದುನಿಯಾ ವಿಜಿ, ತೆಲುಗು ನಿರ್ದೇಶಕ ಸಾಯಿ ಕೃಷ್ಣರೆಡ್ಡಿ ಟ್ವೀಟ್​ ಮಾಡುವ ಮೂಲಕ ಸುದೀಪ್​ ಅವರ 'ಪೈಲ್ವಾನ್​' ಸಿನಿಮಾಗೆ ಶುಭ ಕೋರಿದ್ದಾರೆ.



Loading...


















ನಿರ್ದೇಶಕ ಕೃಷ್ಣ ಅವರ ಈ ಸಿನಿಮಾದಲ್ಲಿ ಮುಂಬೈ ಬೆಡಗಿ ಆಕಾಂಕ್ಷಾ ಸಿಂಗ್ ಕಿಚ್ಚನಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಕರಾವಳಿಯ ಸರದಾರ ಸುನೀಲ್​ ಶೆಟ್ಟಿ 'ಪೈಲ್ವಾನ'ನ ಗುರುವಿನ ಪಾತ್ರಕ್ಕೆ ಜೀವತುಂಬಿದ್ದಾರೆ.

ಸಿನಿಮಾಗಾಗಿ ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸಿಕೊಂಡ ನಟಿ ನಿವೇತಾ


 
First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...