ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರ ತೆರೆಯಲು ಸೆಲೆಬ್ರಿಟಿಗಳ ಆಗ್ರಹ: ಪ್ರತಿಕ್ರಿಯಿಸಿದ ಸಚಿವ ಕೆ. ಸುಧಾಕರ್​..!

ಎಲ್ಲರಿಗೂ ಅನುಮತಿ ನೀಡಿರುವ ರಾಜ್ಯ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಮಾತ್ರ ಶೇ 50ರಷ್ಟು ಏಕೆ. ಸಿನಿರಂಗಕ್ಕಾಗಿ ಎಲ್ಲರೂ ಜೊತೆಗಿದ್ದೇವೆ. ರಾಜ್ಯ ಸರ್ಕಾರದ ನಿರ್ಧಾರ ಬದಲಾಗಲೇಬೇಕು ಎಂದು ಶಿವಣ್ಣ ಆಗ್ರಹಿಸಿದ್ದಾರೆ.

ಸ್ಯಾಂಡಲ್​ವುಡ್​ ತಾರೆಯರು

ಸ್ಯಾಂಡಲ್​ವುಡ್​ ತಾರೆಯರು

  • Share this:
ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿ, ಹೊಸ ಮಾರ್ಗಸೂಚಿ ಹೊರಡಿಸಿದೆ. ಕೇಂದ್ರ ಸರ್ಕಾರ ನೀಡಿದ್ದ ಸಿಹಿ ಸುದ್ದಿಯಿಂದಾಗಿ ಖುಷಿಯಾಗಿದ್ದ ಸ್ಯಾಂಡಲ್​ವುಡ್​ ಮಂದಿ, ನಿನ್ನೆ ಸಂಜೆ ರಾಜ್ಯ ಸರ್ಕಾರ ಇದೇ ವಿಷಯವಾಗಿ ನೀಡಿದ ಹೊಸ ಆದೇಶದಿಂದ ಮತ್ತೆ ಬೇಸರಗೊಂಡಿದ್ದಾರೆ. ಹೌದು, ಕೊರೋನಾ ಸೋಂಕು ಮತ್ತೆ ಹರಡಲಾರಂಭಿಸಿದ್ದು, ಅದಕ್ಕಾಗಿ ಸಿನಿಮಾ ಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ ಹಿಂದಿನಂತೆ ಶೇ50ರಷ್ಟು ಆಸನ ಭರ್ತಿ ವ್ಯವಸ್ಥೆಯನ್ನು ಮುಂದುವರೆಸುವಂತೆ ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಈಗ ಸ್ಯಾಂಡಲ್​ವುಡ್​ನಲ್ಲಿರುವ ಕೆಲ ನಿರ್ದೇಶಕರು ಹಾಗೂ ಸ್ಟಾರ್​ಗಳು ಪ್ರಶ್ನಿಸಲಾರಂಭಿಸಿದ್ದಾರೆ. ಬಸ್​ಗಳು, ಮಾರುಕಟ್ಟೆ ಹೀಗೆ ಎಲ್ಲ ಕಡೆ ಜನರ ಗುಂಪುಗಳಲ್ಲಿ ಗಿಜಿಗಿಜಿ ಎನ್ನುತ್ತಿದ್ದಾರೆ. ಹೀಗಿರುವಾಗ ಸಿನಿಮಾ ಮಂದಿರಗಳಿಗೆ ಮಾತ್ರ ಏಕೆ ಇನ್ನೂ ಪೂರ್ಣ ಪ್ರಮಾಣದ ಭರ್ತಿಗೆ ಅನುಮತಿ ನೀಡುತ್ತಿಲ್ಲ ಎಂದು ಟ್ವೀಟ್​ ಮಾಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. 

ಫೆ. 19ರಂದು ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾ ತೆರೆ ಕಾಣಲಿದೆ. ಈಗ ರಾಜ್ಯ ಸರ್ಕಾರದ ನಿರ್ಧಾರದಿಂದ ಚಿತ್ರತಂಡಕ್ಕೆ ನಷ್ಟವಾಗುವುದಂತೂ ಖಂಡಿತ. ಇದರಿಂದಾಗಿಯೇ ಧ್ರುವ ಸರ್ಜಾ ಸರ್ಜಾ ಟ್ವೀಟ್​ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಅದರಂತೆ ಪ್ರಶಾಂತ್​ ನೀಲ್​, ಶಿವರಾಜ್​ಕುಮಾರ್​, ಪುನೀತ್​ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.

When private functions, places of worship, public transport, markets, tourist places are allowed to operate normally, Why not MOVIE THEATRES !?@drashwathcn @CMofKarnataka @mla_sudhakar #KFIDemandsFullOccupancy pic.twitter.com/wh96okEtOLಎಲ್ಲರಿಗೂ ಅನುಮತಿ ನೀಡಿರುವ ರಾಜ್ಯ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಮಾತ್ರ ಶೇ 50ರಷ್ಟು ಏಕೆ. ಸಿನಿರಂಗಕ್ಕಾಗಿ ಎಲ್ಲರೂ ಜೊತೆಗಿದ್ದೇವೆ. ರಾಜ್ಯ ಸರ್ಕಾರದ ನಿರ್ಧಾರ ಬದಲಾಗಲೇಬೇಕು ಎಂದು ಶಿವಣ್ಣ ಆಗ್ರಹಿಸಿದ್ದಾರೆ.

ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​. ದುನಿಯಾ ವಿಜಯ್​, ರವಿ ಬಸ್ರೂರು, ನಿರ್ದೇಶಕ ಸಿಂಪಲ್​ ಸುನಿ ಸಹ ಟ್ವೀಟ್​ ಮಾಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.


ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು. ದೇವಸ್ಥಾನದಲ್ಲಿ ಎಲ್ಲರ ಕೈಗಳು
ಒಂದೇ ಗಂಟೆ ಬಾರಿಸಬಹುದು. ಮಾರ್ಕೆಟ್​ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ, ಪಬ್ ಹೋಟೆಲ್​ನಲ್ಲಿ ಎಲ್ಲರ ವಿಹಾರ. ಆದರೆ ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ ಏಕೆ ಎಂದು ನಿರ್ದೇಶಕ ಸಿಂಪಲ್​ ಸುನಿ ಪ್ರಶ್ನಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ಗಳ ರಾಜ್ಯ ಸರ್ಕಾರದ ನಿರ್ಧಾರ ಬದಲಿಸಬೇಕೆಂದು ಆಗ್ರಹಿಸಲಾರಂಭಿಸುತ್ತಿದ್ದಂತೆಯೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಟ್ವೀಟ್​ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.ಚಿತ್ರರಂಗದ ಗಣ್ಯರ ಒತ್ತಡದಿಂದ ಎಚ್ಚೆತ್ತ ಸರ್ಕಾರ

'ಕೊರೋನಾ ಬಿಕ್ಕಟ್ಟಿನಿಂದ ಉಂಟಾದ ಲಾಕ್ ಡೌನ್ ಮತ್ತು ನಂತರ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳಿಂದ ನಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಚಿತ್ರರಂಗವೂ ಒಂದು ಎಂಬ ಅರಿವಿದೆ. ಚಿತ್ರರಂಗ ಜನರಿಗೆ ಮನರಂಜನೆ ನೀಡುವುದಷ್ಟೇ ಅಲ್ಲದೆ, ಸಾವಿರಾರು ಜನರಿಗೆ ಜೀವನೋಪಾಯ ಒದಗಿಸಿರುವ ಉದ್ಯಮವೂ ಹೌದು. ನಾಡಿನ ಸಮಸ್ತ ಜನರ ಆರೋಗ್ಯ ಮತ್ತು ಚಿತ್ರೋದ್ಯಮದ ಒಳಿತು ಎರಡನ್ನೂ ಗಮನದಲ್ಲಿಟ್ಟುಕೊಂಡು ತಜ್ಞ ವೈದ್ಯರು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ' ಎಂದು ಟ್ವೀಟ್​ ಮಾಡಿದ್ದಾರೆ ಕೆ. ಸುಧಾಕರ್​.
Published by:Anitha E
First published: