HOME » NEWS » Entertainment » CELEBRITIES CONGRATULATING HIMA DAS FOR HER VICTORY AE

Hima Das: ಚಿನ್ನದ ಪದಕ ಗೆದ್ದ ಹಿಮಾ ದಾಸ್​ ಸಾಧನೆ ಮೆಚ್ಚಿದ ಸೆಲೆಬ್ರಿಟಿಗಳು

Hima Das: ಹಿಮಾ ದಾಸ್​ ಸಾಧನೆಗೆ ಈಗ ನಮ್ಮ ಸ್ಯಾಂಡಲ್​ವುಡ್​ ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ಶುಭ ಹಾರೈಕೆಗಳ ಮಹಾ ಪೂರವನ್ನೇ ಹರಿಸಿದ್ದಾರೆ. ಬಿ-ಟೌನ್​ನ ಬಿಗ್​ ಬಿ ಅಮಿತಾಭ್​​, ಕನ್ನಡದ ಕಿಚ್ಚ ಸುದೀಪ್​, ನಟ ಅನಿಲ್​ ಕಪೂರ್​, ಅನುಷ್ಕಾ ಶರ್ಮಾ, ಸೋನಮ್​ ಕಪೂರ್​ ಸೇರಿದಂತೆ ಸಾಕಷ್ಟು ಮಂದಿ ಹಿಮಾರ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. 

Anitha E | news18
Updated:July 22, 2019, 6:26 PM IST
Hima Das: ಚಿನ್ನದ ಪದಕ ಗೆದ್ದ ಹಿಮಾ ದಾಸ್​ ಸಾಧನೆ ಮೆಚ್ಚಿದ ಸೆಲೆಬ್ರಿಟಿಗಳು
ಹಿಮಾ ದಾಸ್​
  • News18
  • Last Updated: July 22, 2019, 6:26 PM IST
  • Share this:
ಜೆಕ್ ಗಣರಾಜ್ಯದಲ್ಲಿ ಜು.13ರಂದು ನಡೆದ ಟ್ಯಾಬರ್​ ಅಥ್ಲೀಟ್​ ಮೀಟ್​ನಲ್ಲಿ 200 ಮೀ ಸ್ಪರ್ಧೆಯಲ್ಲಿ ಹಿಮಾ ದಾಸ್​ ಚಿನ್ನ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

23.43 ಸೆಕೆಂಡ್​​ಗಳಲ್ಲಿ 200 ಮೀ ಓಟವನ್ನು ಪೂರ್ಣಗೊಳಿಸುವ ಮೂಲಕ 3 ನೇ ಚಿನ್ನದ ಪದಕ ಗೆದ್ದಿದ್ದಾರೆ. ​ಈ ಮೂಲಕ 15 ದಿನಗಳಲ್ಲಿ 4 ಚಿನ್ನದ ಪದಕವನ್ನು ಗೆದ್ದ ಹಿಮಾದಾಸ್​ ಕ್ರೀಡಾಭಿಮಾನಿಗಳಿಂದ ಅಭಿನಂದನೆ ಗಿಟ್ಟಿಸಿಕೊಂಡಿದ್ದಾರೆ.

ಹಿಮಾ ದಾಸ್​


ಈವರೆಗೂ ಹಿಮಾದಾಸ್​ 4 ಚಿನ್ನದ ಪದಕವನ್ನು ಗೆದ್ದಿದ್ದಾರೆ. ಜು. 2 ರಂದು ಪೊಲೆಂಟ್​ನಲ್ಲಿ ನಡೆದ ಪೊಜ್ನಾನ್​ ಅಥ್ಲೆಟಿಕ್ಸ್​​ ಪ್ರಿಕ್ಸ್​​ನಲ್ಲಿ ನಡೆದ ಸ್ಪರ್ಧೆಯಲ್ಲಿ 23.63 ಸೆಕೆಂಡ್​ ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೊದಲ ಚಿನ್ನವನ್ನು ಗೆದ್ದಿದ್ದರು. ನಂತರ ಜು.8 ರಂದು ಕುಟ್ಮೊ ಅಥ್ಲೆಟಿಕ್ಸ್​ ರೇಸ್​​ನಲ್ಲಿ 23.97 ಸೆಕೆಂಡ್​ಗಳಲ್ಲಿ 2ನೇ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಇಂತಹ ಚಿನ್ನದ ಹುಡುಗಿಯ ಸಾಧನೆಗೆ ಈಗ ನಮ್ಮ ಸ್ಯಾಂಡಲ್​ವುಡ್​ ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ಶುಭ ಹಾರೈಕೆಗಳ ಮಹಾ ಪೂರವನ್ನೇ ಹರಿಸಿದ್ದಾರೆ. ಬಿ-ಟೌನ್​ನ ಬಿಗ್​ ಬಿ ಅಮಿತಾಬ್​, ಕನ್ನಡದ ಕಿಚ್ಚ ಸುದೀಪ್​, ನಟ ಅನಿಲ್​ ಕಪೂರ್​, ಅನುಷ್ಕಾ ಶರ್ಮಾ, ಸೋನಮ್​ ಕಪೂರ್​ ಸೇರಿದಂತೆ ಸಾಕಷ್ಟು ಮಂದಿ ಹಿಮಾರ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼 Awesome awesome awesome.... https://t.co/ewksjZjaiF


ಇದನ್ನೂ ಓದಿ: ಮತ್ತೊಂದು ನಗ್ನ ವಿಡಿಯೋ ಪೋಸ್ಟ್​ ಮಾಡಿದ ನಟಿ ಅಮಲಾ

 

Rana Daggubati: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಟಾಲಿವುಡ್​ ಹಂಕ್: ಮಗನಿಗಾಗಿ ಮೂತ್ರಪಿಂಡ ದಾನಕ್ಕೆ ಸಿದ್ಧರಾದ ರಾಣಾ ತಾಯಿ..!


First published: July 22, 2019, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories