Article 370 Scrapped: ಕೇಂದ್ರದ ನಿರ್ಧಾರಕ್ಕೆ ಚಿತ್ರನಟ-ನಟಿಯರಿಂದ ಸಲಾಂ

.

.

ಸ್ಯಾಡಲ್​ವುಡ್​ ನಟ ಜಗ್ಗೇಶ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ‘ಕರ್ಣಾನಂದವಾಯಿತು ಇಂದಿನ ನನ್ನ ಹೆಮ್ಮೆಯ ಭಾಜಪ ಪಕ್ಷದ ಐತಿಹಾಸಿಕ ನಿರ್ಣಯ. ಭಾರತೀಯರ ಪಾಳಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 1947 ಅಲ್ಲಾ 2019 ಭಾರತಕ್ಕೆ ನಿವಾದ ಸ್ವತಂತ್ರ ಸಿಕ್ಕ ದಿನವಾಗಿದೆ. ಒಕ್ಕೊರಳಿನ ಸ್ವಾಭಿಮಾನದ ಘೋಷ ಮೊಳಗಲಿ‘ ಎಂದು ಪೋಸ್ಟ್​ ಮಾಡಿದ್ದಾರೆ.

ಮುಂದೆ ಓದಿ ...
  • News18
  • 3-MIN READ
  • Last Updated :
  • Share this:

    ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ  ಸಂವಿಧಾನದ 370ನೇ ವಿಧಿಗೆ ಕೇಂದ್ರ ಸರ್ಕಾರ ತಿಲಾಂಜಲಿ ಹಾಡಿದೆ. ಈ ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಇಬ್ಬಾಗ ಮಾಡಿದೆ. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಟ-ನಟಿಯರು ಕೂಡ ಈ ಕುರಿತು ಟ್ವಿಟ್​ ಮಾಡಿದ್ದಾರೆ.

    ಸಿನಿ​ ತಾರೆಯರು 370 ನೇ ವಿಧಿ ರದ್ಧತಿಯನ್ನು ಸ್ವಾಗತಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಾಲಿವುಡ್​ ನಟ ವಿವೇಕ್​​ ಒಬೆರಾಯ್​ ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್​ ಮಾಡಿದ್ದು, ‘ಕಾಶ್ಮೀರಕ್ಕಾಗಿ ಹುತಾತ್ಮರಾದ ಸಾಕಷ್ಟು ಭಾರತೀಯ ಯೋಧರಿಗೆ ಗೌರವ ಸಿಕ್ಕಿದೆ. ಇಂತಹ ಐತಿಹಾಸಿಕ ದಿನ ಸೃಷ್ಠಿಸಿದ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಅವರಿಗೆ ನನ್ನ ಧನ್ಯವಾದಗಳು. ಪ್ರತಿಯೊಬ್ಬ ಭಾರತೀಯನು ಹೃದಯದಿಂದ ದೇಶಭಕ್ತ ಎಂದು ಮೋದಿ ಸರ್ಕಾರವನ್ನು ಶ್ಲಾಘನೆ ಮಾಡಿದ್ದಾರೆ‘ ಎಂದು ಟ್ವಿಟ್​ನಲ್ಲಿ ಬರೆದುಕೊಂಡಿದ್ದಾರೆ.



    ಸ್ಯಾಂಡಲ್​ವುಡ್​ ನಟ ಜಗ್ಗೇಶ್  ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ‘ಕರ್ಣಾನಂದವಾಯಿತು ಇಂದಿನ ನನ್ನ ಹೆಮ್ಮೆಯ ಭಾಜಪ ಪಕ್ಷದ ಐತಿಹಾಸಿಕ ನಿರ್ಣಯ. ಭಾರತೀಯರ ಪಾಳಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 1947 ಅಲ್ಲಾ 2019 ಭಾರತಕ್ಕೆ ನಿವಾದ ಸ್ವತಂತ್ರ ಸಿಕ್ಕ ದಿನವಾಗಿದೆ. ಒಕ್ಕೊರಳಿನ ಸ್ವಾಭಿಮಾನದ ಘೋಷ ಮೊಳಗಲಿ‘ ಎಂದು ಪೋಸ್ಟ್​ ಮಾಡಿದ್ದಾರೆ.


    ಬಾಲಿವುಡ್​ ನಟಿ ಕಂಗನಾ ರಾಣವತ್​ ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ 370ನೇ ವಿಧಿ ರದ್ಧತಿಯ ಬಗೆಗೆ ಪೋಸ್ಟ್​ ಹಾಕಿರುವ ಅವರು ‘ಭಯೋತ್ಪಾದನೆ ನಿರ್ಮಾಣಕ್ಕೆ ಐತಿಹಾಸಿಕ ಹೆಜ್ಜೆ. ಕಳೆದ ಕೆಲ ವರ್ಷಗಳಿಂದ ಈ ವಿಧಿಯನ್ನು ಕಿತ್ತೊಗೆಯುವಂತೆ ನಾನು ಒತ್ತಾಯಿಸುತ್ತ ಬಂದಿದ್ದೆ. ಈಗ ಅದೇ ಕಾಲ ಕೂಡಿ ಬಂತು. ಇಂತಹ ದಿಟ್ಟ-ದೃಢ ನಿರ್ಧಾರ ಕೈಗೊಳ್ಳುವುದು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ನನಗೆಗೊತ್ತಿತ್ತು. ಈ ಐತಿಹಾಸಿಕ ದಿನ ಸೃಷ್ಠಿಸಿದ ಮೋದಿ ಅವರಿಗೆ ಇಡೀ ದೇಶದ ಪರ ಧನ್ಯವಾದಗಳು. ಮುಂದಿನ ಉಜ್ವಲ ಭಾರತವನ್ನು ನಾವು ಎದುರು ನೋಡುತ್ತಿದ್ದೇವೆ‘ ಎಂದಿದ್ದಾರೆ



     




    View this post on Instagram




     

    #KanganaRanaut on #Article370: It's a historic step in the direction of terrorism free nation!


    A post shared by Kangana Ranaut (@team_kangana_ranaut) on





    ಕನ್ನಡದ ಮತ್ತೊಬ್ಬ ನಟ ಪ್ರಥಮ್​ ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ. ‘ಭಾರತ ಈಗ ಸುಭದ್ರ, ಯೋಗ್ಯರು ಆಡಳಿತದ ಚುಕ್ಕಾಣಿ ಹಿಡಿದಾಗ, ಮಹತ್ವದ ಬೆಳವಣಿಗೆ ಆಯೋದು ಸಾಮಾನ್ಯ! ಜಮ್ಮು ಕಾಶ್ಮೀರದಲ್ಲಿ ಮೋದಿಯವರ ಧೃಢ ನಿರ್ಧಾರಕ್ಕೆ ಸಲಾಂ. ಇಂಟರ್​ನೆಟ್​ ಸಂಪರ್ಕ್​ ಕಟ್​ ಮಾಡದೇನೋ ಮಾಡಿದ್ದರಿ, ಅದೇ ರೀತಿ ದೇಶದ್ರೋಹಿಗಳನ್ನು ರಾಕೆಟ್​ ಉಡಾವಣೆ ಮಾಡಿದಂಗೆ ಉಡಾಯಿಸಿ ಬಿಡಿ, ಪೀಡೆ ತೊಲಗಲಿ‘ ಎಂದು ಬರೆದುಕೊಂಡಿದ್ದಾರೆ


    ಬಾಲಿವುಟ್​ ನಟಿ ಪಾಯಲ್​ ರೊಹಾಟ್ಗಿ ಈ ಕುರಿತು ಟ್ವಿಟ್​ ಮಾಡಿದ್ದು, ‘ನಾನು ಹಿಂದು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ನನ್ನ ಧರ್ಮವನ್ನು ಪ್ರೀತಿಸಲು ನನಗೆ ನಾಚಿಕೆ ಇಲ್ಲ. ನಾನು ಇತರ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಧಾರ್ಮಿಕ ನಂಬಿಕೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ನನ್ನ ಕೌಶಲ್ಯವನ್ನ ಒಳ್ಳೆಯ ನಟಿಯಾಗಲು ಬಳಿಸಿಕೊಂಡಿದ್ದೇನೆ. ನಾನು ಎಲ್ಲರಂತೆ ಮನುಷ್ಯಳೇ, ಕುರಿಯಲ್ಲ‘ ಎಂದು ಬರೆದುಕೊಂಡಿದ್ದಾರೆ.


    ನಟಿ ರವೀನಾ ಟಂಡನ್​ ಕೂಡ ತನ್ನ ಟ್ವಿಟ್ಟರ್​ ಖಾತೆಯಲ್ಲಿ ರಾಷ್ಟ್ರಧ್ವಜವನ್ನು ಪೋಸ್ಟ್​ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

    top videos
      First published: