ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ: ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೊಟೀಸ್

news18
Updated:August 27, 2018, 7:04 PM IST
ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ: ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೊಟೀಸ್
news18
Updated: August 27, 2018, 7:04 PM IST
-ನ್ಯೂಸ್ 18 ಕನ್ನಡ

ಕನ್ನಡದ ರಾಕಿಂಗ್ ರ‍್ಯಾಪರ್​ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯ ಹಾಡುಗಳಿಗೆ ಹುಚ್ಚೆದ್ದು ಕುಣಿಯುವ ಒಂದು ಯುವ ಅಭಿಮಾನಿಗಳ ಪಡೆ ಇರುವುದು ಗೊತ್ತಿರುವ ವಿಷಯ. ಅದರಂತೆ ಚಂದನ್ ಶೆಟ್ಟಿಯ ಹಾಡುಗಳು ಕೂಡ ಹೊಸ ತಲೆಮಾರಿಗೆ ಅನ್ವಯವಾಗುವಂತೆ ಮೂಡಿ ಬರುತ್ತಿರುತ್ತದೆ. ಇದೀಗ ಚಂದನ್ ಶೆಟ್ಟಿ ರಚಿಸಿದ ಹಾಡೊಂದರ ವಿರುದ್ಧ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದೆ.

ಈ ಹಾಡಿನಲ್ಲಿ ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ನೊಟೀಸ್ ನೀಡಲಾಗಿದೆ. 2015 ರಲ್ಲಿ ಬಿಡುಗಡೆಯಾಗಿದ್ದ 'ಅಂತ್ಯ' ಶೀರ್ಷಿಕೆಯ ಗಾಂಜಾ... ಸಾಂಗ್​ನಲ್ಲಿ ಮಾದಕ ವಸ್ತುವನ್ನು ಸೇವಿಸಲು ಪ್ರಚೋದನೆ ನೀಡುವ ಸಾಹಿತ್ಯವನ್ನು ಚಂದನ್ ಶೆಟ್ಟಿ ರಚಿಸಿದ್ದರು.


ಈ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆ ಚಂದನ್ ಶೆಟ್ಟಿಗೆ ನೋಟಿಸ್​ ನೀಡಿರುವ ಬೆಂಗಳೂರು ಕ್ರೈಂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಕನ್ನಡದಲ್ಲಿ ಆಲ್ಬಂ ಸಾಂಗ್ ಮೂಲಕ ಮುನ್ನಲೆಗೆ ಬಂದಿರುವ ಯುವ ಪ್ರತಿಭೆ ಚಂದನ್ ಶೆಟ್ಟಿ '3 ಪೆಗ್', 'ಚಾಕೊಲೇಟ್ ಗರ್ಲ್' ಎಂಬ ಗೀತೆಗಳ ಮೂಲಕ ಮನೆಮಾತಾಗಿದ್ದರು.

ಇದರ ಬೆನ್ನಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ಪ್ರವೇಶಿಸಿದ್ದ ಚಂದನ್ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಸಂಗೀತ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಅಲ್ಲದೆ ಇತ್ತೀಚೆಗೆ ಕನ್ನಡಿಗರನ್ನು ಬಡಿದೆಬ್ಬಿಸಿ ಕುಣಿಸುವ 'ಫೈರ್' ಎಂಬ ಗೀತೆಯನ್ನು ಚಂದನ್ ಶೆಟ್ಟಿ ಬಿಡುಗಡೆಗೊಳಿಸಿದ್ದರು.
Loading...

First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...