news18-kannada Updated:September 5, 2020, 9:22 AM IST
ಸಂಜನಾ ಗಲ್ರಾನಿ
ಸ್ಯಾಂಡಲ್ವುಡ್ನಲ್ಲಿ ಸದ್ಯ ಡ್ರಗ್ ವಿಚಾರ ತುಂಬಾನೇ ಸುದ್ದಿ ಮಾಡುತ್ತಿದೆ. ಡ್ರಗ್ ಜಾಲ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾದ ರಾಹುಲ್ ಎಂಬಾತತನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆತನ ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆತ ಕೆಲ ಹೆಸರುಗಳನ್ನು ಹೇಳಿದ್ದಾನೆ ಎನ್ನಲಾಗಿದೆ. ಇನ್ನು, ಈ ಪ್ರಕರಣದಲ್ಲಿ ಸಂಜನಾ ಹೆಸರು ಕೂಡ ಕೇಳಿ ಬಂದಿದ್ದು, ಈ ಬಗ್ಗೆ ನಟಿ ಸಿಟ್ಟಾಗಿದ್ದರು. ಈಗ ಕೇಳಿ ಬರುತ್ತಿರುವ ವಿಚಾರ ಎಂದರೆ, ರಾಹುಲ್ ನೀಡಿದ ಮಾಹಿತಿ ಆಧಾರದ ಮೇಲೆ ಸಂಜನಾಗೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ರಾಹುಲ್ ತುಂಬಾ ಪಾರ್ಟಿ ಮಾಡ್ತಾನೆ. ಏನೋ ಹುಡುಗಾಟದಲ್ಲಿ ಆತನನ್ನು ಕರೆದೊಯ್ದಿದ್ದಾರೆ ಅಂದುಕೊಂಡಿದ್ದೆ. ಆದರೆ ಇದುವರೆಗೂ ಆತನನ್ನು ಬಿಡುಗಡೆ ಮಾಡಿಲ್ಲ. ಆತನ ತಂದೆ, ತಾಯಿ ತುಂಬ ಒಳ್ಳೆಯವರು. ತಂದೆ ಹಾರ್ಟ್ ಪೇಷೆಂಟ್. ಆದರೆ, ಆತ ತಪ್ಪು ಮಾಡಿದ್ರೆ ನನ್ನನ್ಯಾಕೆ ಬಲಿ ಕಾ ಬಕ್ರಾ ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಗುತ್ತಿಲ್ಲ, ಎಂದು ನಿನ್ನೆ ಸಂಜನಾ ನಿನ್ನೆ ಹೇಳಿದ್ದರು.
ಇದನ್ನೂ ಓದಿ: ರಾಹುಲ್ ತಪ್ಪು ಮಾಡಿದರೆ ನನಗೇಕೆ ಶಿಕ್ಷೆ ಕೊಡುತ್ತಿದ್ದೀರಾ?; ನಟಿ ಸಂಜನಾ ಗಲ್ರಾನಿ ಪ್ರಶ್ನೆ
ಸಿಸಿಬಿ ಪೊಲೀಸರು ಹೇಳುವ ಪ್ರಕಾರ ರಾಹುಲ್ ಡ್ರಗ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾನಂತೆ. ಈತ ನಟಿ ಸಂಜನಾ ಆಪ್ತ. ಈಗಲೂ ರಾಹುಲ್ ತುಂಬಾ ಒಳ್ಳೆಯವನು ಎಂದು ಸಂಜನಾ ಹೇಳುತ್ತಿದ್ದಾರೆ. ನಿನ್ನೆ ರಾಹುಲ್ ಅನ್ನು ಸಂಜನಾ ಮನೆಗೆ ಕರೆತರಲು ಸಿಸಿಬಿ ಪೊಲೀಸರು ಬಂದಿದ್ದರು ಎನ್ನಲಾಗಿದೆ. ಆದರೆ ಮಾಧ್ಯಮಗಳನ್ನು ಕಂಡು ರಾಹುಲ್ ಅನ್ನು ಕಾರಿನಿಂದ ಇಳಿಸದೇ ಹಾಗೇ ವಾಪಸ್ ಕರೆದೊಯ್ದಿದ್ದರು. ರಾಹುಲ್ ನೀಡಿರುವ ಮಾಹಿತಿ ಮೇರೆಗೆ ವಿಚಾರಣೆಗೆ ಬರುವಂತೆ ಸಂಜನಾಗೆ ಇಂದು ನೊಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
Published by:
Rajesh Duggumane
First published:
September 5, 2020, 9:22 AM IST