HOME » NEWS » Entertainment » CATCH A SNEAK PEEK AT THE FUN DANCE NUMBER OF THE YEAR SPARKLES OORIGOBBA RAAJA SONG FROM YUVARATHNAA AE

Puneeth Rajukumar: ಇಲ್ಲಿದೆ ಯುವರತ್ನ ಸಿನಿಮಾದ ಊರಿಗೊಬ್ಬ ರಾಜ... ಹಾಡಿನ ಪುಟ್ಟ ಝಲಕ್​..!

Oorigobba Raaja Song: ಸಿನಿಮಾದ ಮೂರನೇ ಹಾಡು ಊರಿಗೊಬ್ಬ ರಾಜ... ಎಂಬ ವಿಡಿಯೋ ತೆಲುಗು ಹಾಗೂ ಕನ್ನಡದಲ್ಲಿ ಇಂದು ಮಧ್ಯಾಹ್ನ ಬಿಡುಗಡೆಯಾಗಲಿದೆ. ಆದರೆ ಪ್ರೇಕ್ಷಕರಲ್ಲಿ ಈ ಹಾಡಿನ ಕುರಿತಾಗಿ ಇರುವ ಕುತೂಹಲವನ್ನು ಹೆಚ್ಚಿಸಲು ಚಿತ್ರತಂಡ ಹಾಡಿನ ಪುಟ್ಟ ತುಣುಕನ್ನು ರಿಲೀಸ್​ ಮಾಡಿದೆ.

Anitha E | news18-kannada
Updated:February 25, 2021, 12:44 PM IST
Puneeth Rajukumar: ಇಲ್ಲಿದೆ ಯುವರತ್ನ ಸಿನಿಮಾದ ಊರಿಗೊಬ್ಬ ರಾಜ... ಹಾಡಿನ ಪುಟ್ಟ ಝಲಕ್​..!
ಊರಿಗೊಬ್ಬ ರಾಜ ಹಾಡಿನಲ್ಲಿ ಪುನೀತ್​ -ಸಯೇಷಾ
  • Share this:
ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ರಿಲೀಸ್ ಆಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಯುವರತ್ನ ಸಿನಿಮಾದ ಹಾಡುಗಳು, ಪೋಸ್ಟರ್​ಗಳು ಹಾಗೂ ಟೀಸರ್​ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದೆ. ಪುನೀತ್​ ಅವರ ಡ್ಯಾನ್ಸ್​ ಸ್ಟೆಪ್ಸ್​ ಅಂತೂ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿವೆ. ಪವರ್​ ಆಫ್​ ಯೂತ್​ ಹಾಡಿನ ಸ್ಟೆಪ್​ಗಳನ್ನು ಹಾಕುತ್ತಿರುವ ಅಭಿಮಾನಿಗಳು ಈಗಲೂ ತಮ್ಮ ಡ್ಯಾನ್ಸ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಸಿನಿಮಾದ ಮೂರನೇ ಹಾಡನ್ನು ಅಂದರೆ ಪಾಠಶಾಲಾ ಹಾಡನ್ನು ರಿಲೀಸ್ ಮಾಡುವುದಾಗಿ ಪ್ರಕಟಿಸಿತ್ತು. ಆದರೆ  ಅದು ಸಾಧ್ಯವಾಗಲಿಲ್ಲ. ಇನ್ನೇನು ಹಾಡನ್ನು ನೋಡಿ ಕಣ್ತುಂಬಿಕೊಳ್ಳೋಣ ಅಂತಿದ್ದ ಅಭಿಮಾನಿಗಳಿಗೆ ನಿರಾಶೆ ಕಾದಿತ್ತು. 

ತಾಂತ್ರಿಕ ಕಾರಣಗಳಿಂದಾಗಿ ಪಾಠಶಾಲಾ ಹಾಡನ್ನು ರಿಲೀಸ್ ಮಾಡಲಾಗಲಿಲ್ಲವೆಂದು ಸಂತೋಷ್​ ರಾಮ್​ ಹಾಗೂ ಅವರ ತಂಡ ಮೊನ್ನೆ ರಾತ್ರಿಯಷ್ಟೆ ಮತ್ತೊಂದು ವಿಡಿಯೋ ಹಾಡಿನ ರಿಲೀಸ್ ಬಗ್ಗೆ ಟ್ವೀಟ್​ ಮಾಡಿತ್ತು. ಇಂದು ಮಧ್ಯಾಹ್ನ 3:33ಕ್ಕೆ ಈ ಹಾಡು ರಿಲೀಸ್​ ಆಗಲಿದೆ.








View this post on Instagram






A post shared by Sayyeshaa (@sayyeshaa)






ಸಿನಿಮಾದ ಮೂರನೇ ಹಾಡು ಊರಿಗೊಬ್ಬ ರಾಜ... ಎಂಬ ವಿಡಿಯೋ ತೆಲುಗು ಹಾಗೂ ಕನ್ನಡದಲ್ಲಿ ಇಂದು ಮಧ್ಯಾಹ್ನ ಬಿಡುಗಡೆಯಾಗಲಿದೆ. ಆದರೆ ಪ್ರೇಕ್ಷಕರಲ್ಲಿ ಈ ಹಾಡಿನ ಕುರಿತಾಗಿ ಇರುವ ಕುತೂಹಲವನ್ನು ಹೆಚ್ಚಿಸಲು ಚಿತ್ರತಂಡ ಹಾಡಿನ ಪುಟ್ಟ ತುಣುಕನ್ನು ರಿಲೀಸ್​ ಮಾಡಿದೆ.



ಈ ಹಾಡಿನಲ್ಲಿ ಪುನೀತ್​ ಅವರು ಸಖತ್​ ಸ್ಟೆಪ್​ ಹಾಕಿದ್ದು, ಅದಕ್ಕೆ ನಾಯಕಿ ಸಯೇಷಾ ಕೂಡ ಜೊತೆಯಾಗಿದ್ದಾರೆ. ಹಾಡಿನ ಝಲಕ್​ ತೋರಿಸಿರುವ ಚಿತ್ರತಂಡ ಇನ್ನೇನು ಕೆಲವೇ ಗಂಟೆಗಳಲ್ಲಿ ಪೂರ್ತಿ ಹಾಡನ್ನೇ ರಿಲೀಸ್​ ಮಾಡಲಿದೆ. ಪುನೀತ್​ ಅಭಿಮಾನಿಗಳೂ ಸಹ ಪವರ್ ಸ್ಟಾರ್​ ಅವರ ಪವರ್​ಫುಲ್​ ಸ್ಟೆಪ್ಸ್​ಗಾಗಿ ಕಾತರರಾಗಿ ಕಾಯುತ್ತಿದ್ದಾರೆ.





ಇದೇ ತಿಂಗಳ 21ಕ್ಕೆ ಮೂರನೇ ಹಾಡಾಗಿ ಪಾಠಶಾಲಾ ಹಾಡು ರಿಲೀಸ್​ ಆಗಬೇಕಿತ್ತು.
ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅದಥಮನ್​ ಸಂಗೀತ ನಿರ್ದೇಶನ ಮಾಡಿರುವ ಯುವರತ್ನ ಸಿನಿಮಾದ ಪಾಠಶಾಲಾ ಹಾಡು ಸಹ ಕೊಂಚ ತಡವಾಗಿ ರಿಲೀಸ್​ ಆಗಲಿದೆ. ಪಾಠಶಾಲಾ ಹಾಡಿನಲ್ಲಿ ಗುರುವಿನ ಬಗ್ಗೆ ಹೆಚ್ಚಾಗಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಶಾಲಾ-ಕಾಲೇಜುಗಳಿಗೆ ಹೋಗುವವರಿಗಾಗಿ ಇದನ್ನು ಮಾಡಲಾಗಿದೆ ಎಂದು ಸಂಗೀತ ನಿರ್ದೇಶಕ ಥಮನ್​ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಫ್ರೇಮಿನಲ್ಲಿ ಮೂರು ತಲೆಮಾರು: ಮಗಳು-ಅಮ್ಮನೊಂದಿಗೆ ಅನು ಪ್ರಭಾಕರ್​..!

ಯುವರತ್ನ ಸಿನಿಮಾದಲ್ಲಿ ಪುನೀತ್​ ಮತ್ತೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತಮ್ಮ ದೇಹದ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ಗೆ ನಾಯಕಿಯಾಗಿ ಸಯೇಷಾ ನಟಿಸಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಪವರ್​ ಆಫ್​ ಯೂತ್​​ ಹಾಡು ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Puneeth rajkumar, james kannada movie, james movie shooting Kashmir, james movie Kashmir Shooting Photos viral, ಪುನೀತ್ ರಾಜ್ ಕುಮಾರ್, ಜೇಮ್ಸ್ ಸಿನಿಮಾ, ಕಾಶ್ಮೀರದಲ್ಲಿ ಜೇಮ್ಸ್ ಸಿನಿಮಾದ ಚಿತ್ರೀಕರಣ, ಜೇಮ್ಸ್ ಸಿನಿಮಾದ ಕಾಶ್ಮೀರದ ಫೋಟೋಗಳು ವೈರಲ್, Oorigobba Raaja Song, Oorikokka Raaja telugu Song, Yuvrathnaa, ಊರಿಗೊಬ್ಬ ರಾಜ ವಿಡಿಯೋ ಹಾಡು, ಊರಿಕೊಕ್ಕ ರಾಜ ತೆಲುಗು ವಿಡಿಯೋ ಹಾಡು, ಯುವರತ್ನ, ಪುನೀತ್​ ರಾಜ್​ಕುಮಾರ್​, ಸಂತೋಷ್​ ಆನಂದ್ ರಾಮ್​, movie 3rd song Paatashaala, Puneeth Rajkumar, Sandalwood, Yuvarathnaa Release date, Yuvarathnaa single, Santhosh Anand Ram, Thaman, Puneeth rajkumar, New Workout Video, ಯುವರತ್ನ ರಿಲೀಸ್​ ದಿನಾಂಕ, ಪುನೀತ್​, ಯುವರತ್ನ ಬಿಡುಗಡೆ ದಿನಾಂಕ, Puneeth Rajkumar Workout, Yuvarathnaa, Santhosh Anand Ram, Puneeth Rajkumar Twitter, Puneeth Rajkumar Instagram, ಪುನೀತ್​ ರಾಜ್​ಕುಮಾರ್​, ಫಿಟ್ನೆಸ್​ ವಿಡಿಯೋ, ಹೊಸ ವಿಡಿಯೋ ಹಂಚಿಕೊಂಡ ಪುನೀತ್​ ರಾಜ್​ಕುಮಾರ್​, ಯುವರತ್ನ, ಸಂತೋಷ್​ ಆನಂದ್​ ರಾಮ್, Puneeth Rajkumar is roaming in Kashmir here is the photos from James movie set ae
ಜೇಮ್ಸ್​ ಚಿತ್ರೀಕರಣಕ್ಕಾಗಿ ಕಾಶ್ಮೀರದಲ್ಲಿರುವ ಪುನೀತ್​ ರಾಜ್​ಕುಮಾರ್​


ಪುನೀತ್ ಅವರೊಂಗಿದೆ ಟಗರು ಖ್ಯಾತಿಯ ಡಾಲಿ ಧನಂಜಯ್​ ಸಹ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸುಧಾರಾಣಿ, ದಿಗಂತ್​, ಸೋನು ಗೌಡ, ರಾಧಿಕಾ ಶರತ್​ಕುಮಾರ್​, ಪ್ರಕಾಶ್​ ರೈ ಹಾಗೂ ಇತರರ ತಾರಾಬಳಗವಿದೆ. ಸದ್ಯ ಪುನೀತ್​ ಜೇಮ್ಸ್​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಉತ್ತರ ಕರ್ನಾಟಕದಲ್ಲಿ ಜೇಮ್ಸ್​ ಸಿನಿಮಾದ ಶೂಟಿಂಗ್​ ಶೆಡ್ಯೂಲ್​ ಮುಗಿಸಿರುವ ಚಿತ್ರತಂಡ ಈಗ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುತ್ತಿದೆ.
Published by: Anitha E
First published: February 25, 2021, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories