ತಮಿಳು ಚಿತ್ರರಂಗದತ್ತ ಚಾಟಿ ಬೀಸಿದ ಶ್ರೀರೆಡ್ಡಿ: ನಟ ಶ್ರೀಕಾಂತ್-ನಿರ್ದೇಶಕ ಮುರುಗದಾಸ್ ವಿರುದ್ಧ ಆರೋಪ!
news18
Updated:July 12, 2018, 3:12 PM IST
news18
Updated: July 12, 2018, 3:12 PM IST
ನ್ಯೂಸ್ 18 ಕನ್ನಡ
ಟಾಲಿವುಡ್ನಲ್ಲಿ ಪಾತ್ರಕ್ಕಾಗಿ ಪಲ್ಲಂಗ (ಕಾಸ್ಟಿಂಗ್ ಕೌಚ್) ಕುರಿತಂತೆ ಧ್ವನಿ ಎತ್ತಿದ ನಟಿ ಶ್ರೀರೆಡ್ಡಿ ಈಗ ತಮಿಳು ಚಿತ್ರರಂಗದತ್ತಲ್ಲೂ ಚಾಟಿ ಬೀಸಿದ್ದಾರೆ.
'ರೋಜಾ ಕೂಟಂ' ಖ್ಯಾತಿಯ ನಟ ಶ್ರೀಕಾಂತ್ ಹಾಗೂ ಖ್ಯಾತ ನಿರ್ದೇಶಕ ಮುರುಗದಾಸ್ ಕುರಿತಂತೆ ತಮ್ಮ ಫೇಸ್ಬುಕ್ ಗೋಡೆ ಮೇಲೆ ಬರೆದುಕೊಂಡಿದ್ದಾರೆ. ಕೇವಲ ಒಂದು ಗಂಟೆ ಹಿಂದೆಯಷ್ಟೆ ನಟ ಶ್ರೀಕಾಂತ್ ಬಗ್ಗೆ ಪೋಸ್ಟ್ ಮಾಡಿರುವ ಶ್ರೀರೆಡ್ಡಿ, '5 ವರ್ಷಗಳ ಹಿಂದೆ ಪಾರ್ಕ್ ಹೋಟೆಲ್ನಲ್ಲಿ ನಡೆದಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಾರ್ಟಿಯಲ್ಲಿ ನಮ್ಮ ಪರಿಚಯವಾಗಿತ್ತು. ವೆಲಿಗೊಂಡ ಶ್ರೀನಿವಾಸ್ ಅವರು ನಮ್ಮಿಬ್ಬರನ್ನು ಪರಿಚಯಿಸಿದ್ದರು. ನನಗೆ ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಹೇಳಿ, ನನ್ನನ್ನು ಬಳಿಸಿಕೊಂಡಿದ್ದೆ. ಆದರೆ ಇಲ್ಲಿಯವರೆಗೂ ಯಾವುದೇ ಪಾತ್ರವೂ ನನಗೆ ಕೊಡಿಸಿಲ್ಲ. ನೀವೂ ಸಹ ಮಹಾನ್ ವ್ಯಕ್ತಿ' ಎಂದು ಬರೆದುಕೊಂಡಿದ್ದಾರೆ.
ಕಾಲಿವುಡ್ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಶ್ರೀಕಾಂತ್ 'ರೋಜಾ ಕೂಟಂ', 'ನನ್ಬಣ್' 'ಬೋಸ್' 'ಏಪ್ರಿಲ್ ಮಾದತ್ತಿಲ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕೇವಲ ತೆಲುಗು ನಟ-ನಿರ್ದೇಶಕರಲ್ಲದೆ ತಮಿಳಿನ ನಿರ್ದೇಶಕರ ಮೇಲೂ ಪಾತ್ರಕ್ಕಾಗಿ ಪಲ್ಲಂಗದ ಆರೋಪವನ್ನು ಮಾಡುತ್ತಿದ್ದಾರೆ ಶ್ರೀರೆಡ್ಡಿ. ಹೌದು ನಿನ್ನೆ ಅವರು ತಮ್ಮ ಫೇಸ್ಬುಕ್ನಲ್ಲಿ ತಮಿಳು ಚಿತ್ರದ ನಿರ್ದೇಶಕ ಮುರುಗದಾಸ್ ಕುರಿತಂತೆಯೂ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ 'ವೆಲಿಗೊಂಡ ಶ್ರೀನಿವಾಸ್ ಅವರ ಮೂಲಕ ಪಾರ್ಕ್ ಹೋಟೆಲ್ನಲ್ಲಿ ಪರಿಚಯವಾದ ನಂತರ ನಮ್ಮ ಮಧ್ಯೆ ಸಾಕಷ್ಟು ನಡೆದಿದೆ. ಆದರೂ ಇಲ್ಲಿಯವರೆಗೂ ಯಾವುದೇ ಪಾತ್ರದಲ್ಲಿ ಅಭಿನಯಿಸಲಿ ನನಗೆ ಅವಕಾಶ ನೀಡಿಲ್ಲ. ನೀವೂ ಸಹ ಮಹಾನ್ ವ್ಯಕ್ತಿ' ಎಂದು ಬರೆದುಕೊಂಡಿದ್ದಾರೆ.

Loading...
Loading...