ಹುಟ್ಟುಹಬ್ಬದ ದಿನವೇ ವಿವಾದ ಸೃಷ್ಟಿಸಿದ ದುನಿಯಾ ವಿಜಿ; ಕೇಸ್ ದಾಖಲು?

ಬರ್ತ್ ಡೇ ಆಚರಣೆ ವೇಳೆ ದುನಿಯಾ ವಿಜಿ ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದಾರೆ. ಆದರೆ, ಕಾನೂನಿನ ಪ್ರಕಾರ ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಹಾಗೂ ಪ್ರದರ್ಶಿಸುವಂತಿಲ್ಲ.

news18-kannada
Updated:January 20, 2020, 11:25 AM IST
ಹುಟ್ಟುಹಬ್ಬದ ದಿನವೇ ವಿವಾದ ಸೃಷ್ಟಿಸಿದ ದುನಿಯಾ ವಿಜಿ; ಕೇಸ್ ದಾಖಲು?
ದುನಿಯಾ ವಿಜಯ್​
  • Share this:
ಬೆಂಗಳೂರು: ನಟ ದುನಿಯಾ ವಿಜಯ್ 46ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಜನ್ಮದಿನವನ್ನು ಅವರು ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಈ ವೇಳೆ ಅವರು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಬರ್ತ್ ಡೇ ಆಚರಣೆ ವೇಳೆ ದುನಿಯಾ ವಿಜಿ ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದಾರೆ. ಆದರೆ, ಕಾನೂನಿನ ಪ್ರಕಾರ ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಹಾಗೂ ಪ್ರದರ್ಶಿಸುವಂತಿಲ್ಲ. ಐದು ಇಂಚಿಗೂ ಉದ್ದದ ಕತ್ತಿಯನ್ನು ಇಟ್ಟುಕೊಂಡರೆ ಲೈಸೆನ್ಸ್ ಪಡೆಯಬೇಕು. ಪರವಾನಗಿ ಪಡೆಯದೇ ಆಯುಧ ಇಟ್ಟುಕೊಂಡರೆ ಅಥವಾ ಬಳಸಿದರೆ ಆರ್ಮ್ಸ್​​ ಆ್ಯಕ್ಟ್ ಅಡಿ ಪೊಲೀಸರು ಕೇಸ್ ಬುಕ್ ಮಾಡುತ್ತಾರೆ.

ಸದ್ಯ, ದುನಿಯಾ ವಿಜಿ ಕೇಕ್ ಕಟ್ ಮಾಡಿರುವ ವಿಡಿಯೋವನ್ನು ಗಿರಿನಗರ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ದುನಿಯಾ ವಿಜಿ ಕೇಕ್ ಕತ್ತರಿಸಿರುವ ಕತ್ತಿ ಐದು ಇಂಚಿಗೂ ಉದ್ದ ಇರುವುದು ಖಚಿತವಾದರೆ ಕೇಸ್ ಬುಕ್ ಮಾಡಲಾಗುತ್ತದೆ.ಅಭಿಮಾನಿಗಳ ಜೊತೆ ಕರಿ ಚಿರತೆ:

ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ವಿಜಯ್​ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ  ವೇಳೆ ತಮ್ಮ ನಿರ್ದೇಶನದ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ  ಹಲವಡೆಯಿಂದ ಅಭಿಮಾನಿಗಳು ಬಂದಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಿ, “ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಬರ್ತಡೇ ಅನ್ನೋದಕ್ಕಿಂತ ಸಲಗ ಚಿತ್ರ ತಂಡದ ಹುಟ್ಟುಹಬ್ಬ. ನಮ್ಮ ಚಿತ್ರ ತಂಡವೇ ನನಗೆ ಬಲ ತಂದು ಕೊಟ್ಟಿದೆ. ನಿರ್ದೇಶಕನಾದ ನಂತರ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ,” ಎಂದರು.
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ