ಸುಶಾಂತ್ ಆತ್ಮಹತ್ಯೆ ಪ್ರಕರಣ; ಸಲ್ಮಾನ್, ಕರಣ್ ಸೇರಿ ಬಾಲಿವುಡ್ ದಿಗ್ಗಜರ ವಿರುದ್ಧ ದಾಖಲಾಯ್ತು ಕೇಸ್

ಬಾಲಿವುಡ್​ನಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಸುಶಾಂರ್​ಗೆ ಇದೆ. ಕೇವಲ ಸ್ಟಾರ್​ ನಟರ ಮಕ್ಕಳಿಗೆ ಮಾತ್ರ ಮಣೆ ಹಾಕುವ ಕರಣ್​ ಜೋಹರ್​ ಸೇರಿ ಸಾಕಷ್ಟು ಮಂದಿ ಸುಶಾಂತ್​ ಸಿಂಗ್​ ಅವರು ತುಳಿಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

news18-kannada
Updated:June 17, 2020, 1:54 PM IST
ಸುಶಾಂತ್ ಆತ್ಮಹತ್ಯೆ ಪ್ರಕರಣ; ಸಲ್ಮಾನ್, ಕರಣ್ ಸೇರಿ ಬಾಲಿವುಡ್ ದಿಗ್ಗಜರ ವಿರುದ್ಧ ದಾಖಲಾಯ್ತು ಕೇಸ್
ಸುಶಾಂತ್​ ಸಿಂಗ್
  • Share this:
ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಸುಶಾಂತ್​ ಸಾವಿಗೆ ಖ್ಯಾತ ನಿರ್ಮಾಪಕ ಕರಣ ಜೋಹರ್​ ಸೇರಿ ಬಾಲಿವುಡ್​ನ ಅನೇಕ ಮಂದಿ ಕಾರಣ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ದಿಗ್ಗಜರ ವಿರುದ್ಧ ಈಗ ಕೇಸ್​ ದಾಖಲಾಗಿದೆ.

ಸುಶಾಂತ್​ ಸಿಂಗ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟವರು. ಬಾಲಿವುಡ್​ನಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಕೇವಲ ಸ್ಟಾರ್​ ನಟರ ಮಕ್ಕಳಿಗೆ ಮಾತ್ರ ಮಣೆ ಹಾಕುವ ಕರಣ್​ ಜೋಹರ್​ ಸೇರಿ ಸಾಕಷ್ಟು ಮಂದಿ ಸುಶಾಂತ್​ ಸಿಂಗ್​ ಅವರು ತುಳಿಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಅಲ್ಲದೆ, ಅವರ ಕೈಯಲ್ಲಿದ್ದ ಸಾಕಷ್ಟು ಚಿತ್ರಗಳನ್ನು ಕಿತ್ತುಕೊಂಡಿದ್ದಾರೆ ಎನ್ನುವ ಮಾತಿದೆ. ಈ ಎಲ್ಲ ಕಾರಣಕ್ಕೆ ಸುಶಾಂತ್​ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.

ಈ ವಿಚಾರಕ್ಕೆ ಸಂಬಂಧಿಸಿ ಬಿಹಾರದ ವಕೀಲ ಸುಧೀರ್​ ಕುಮಾರ್​ ಓಝಾ ಅವರು ಮುಜಾಫರ್​ಪುರ್​ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಸುಶಾಂತ್​ ಆತ್ಮಹತ್ಯೆಗೆ ಸಂಬಂಧಿಸಿ ಕರಣ್​ ಜೋಹರ್​, ಸಂಜಯ್​ ಲೀಲಾ ಬನ್ಸಾಲಿ, ಸಲ್ಮಾನ್​ ಖಾನ್​ ಹಾಗೂ ಏಕ್ತಾ ಕಪೂರ್​ ವಿರುದ್ಧ ಕೇಸ್​ ದಾಖಲಿಸಿದ್ದೇನೆ. ಸಾಕಷ್ಟು ಸಿನಿಮಾಗಳಿಂದ ಅವರನ್ನು ಒತ್ತಾಯ ಪೂರ್ವಕವಾಗಿ ತೆಗೆದು ಹಾಕಲಾಗಿತ್ತು. ಈ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,” ಎಂದು ಸುಧೀರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಕಿಡಿಗೇಡಿಗಳ ದೌರ್ಜನ್ಯ

ಆಗಿದ್ದೇನು?:

ಮುಂಜಾನೆ 1:47 ಗಂಟೆಗೆ ಸುಶಾಂತ್ ಆಪ್ತ ಗೆಳತಿ ರಿಯಾ ಚಕ್ರವರ್ತಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಅವರು ಕರೆ ಎತ್ತಿರಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಗೆಳೆಯ ಹಾಗೂ ನಟ ಮಹೇಶ್ ಶೆಟ್ಟಿಗೆ ಸುಶಾಂತ್ ಕರೆ ಮಾಡಿದ್ದರು. ಆದರೆ, ಅವರು ಕೂಡ ಕರೆ ಸ್ವೀಕರಿಸರಲಿಲ್ಲ.

ಸುಶಾಂತ್ ಸಾಯುವುದಕ್ಕೂ ಕೆಲವೇ ಗಂಟೆ ಮೊದಲು ಮಹೇಶ್ ಮೊಬೈಲ್ ನೋಡಿದ್ದರು. ಸುಶಾಂತ್ ಮಿಸ್​ಕಾ ಲ್ ನೋಡಿ ಕಾಲ್ ಬ್ಯಾಕ್ ಮಾಡಿದ್ದರು. ಈ ವೇಳೆ ಸುಶಾಂತ್ ಕರೆ ಸ್ವೀಕರಿಸಿರಲಿಲ್ಲ. 9:30ಸುಮಾರಿಗೆ ಮಹೇಶ್​ಗೆ ಕರೆ ಮಾಡಲು ಸುಶಾಂತ್ ಪ್ರಯತ್ನ ಪಟ್ಟಿದ್ದರು. ಆದರೆ, ಕರೆ ಕನೆಕ್ಟ್ ಆಗಿರಲಿಲ್ಲ.

ಸುಶಾಂತ್ ತಿಂಡಿ ತಿನ್ನುವುದಕ್ಕೂ ಮೊದಲು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದಿದ್ದರು. ಊಟದ ಮೆನು ಬಗ್ಗೆ ಕೇಳಲು 10:25ಕ್ಕೆ ಸುಶಾಂತ್ ಉಳಿದಿದ್ದ ರೂಮಿನ ಬಾಗಿಲನ್ನು ಬಾಣಸಿಗ ನೀರಜ್ ತಟ್ಟಿದ್ದರು. ಆದರೆ, ಯಾವುದೇ ಉತ್ತರ ಬಂದಿಲ್ಲ. ಈ ವೇಳೆ ಅದೇ ಮನೆಯಲ್ಲಿದ್ದ ಸುಶಾಂತ್ ಗೆಳೆಯ 11 ಗಂಟೆಗೆ ಎದ್ದು ಸುಶಾಂತ್ ಬಗ್ಗೆ ವಿಚಾರಿಸಿದ್ದರು. ಅವರು ಕೂಡ ಬಾಗಿಲು ತಟ್ಟಿದ್ದರೂ ಯಾವುದೇ ಉತ್ತರ ಬಂದಿರಲಿಲ್ಲ.

ಈ ವೇಳೆ ಸುಶಾಂತ್ ಮೊಬೈಲ್ ರಿಂಗ್ ಆಗುವ ಶಬ್ದ ಕೇಳುತ್ತಿತ್ತು. ಆದರೆ, ಸುಶಾಂತ್ ಅದಕ್ಕೆ ಉತ್ತರಿಸಿರುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಗೆಳೆಯ ಸುಶಾಂತ್ ಸಹೋದರಿ ರೀತುಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಕೀ ಮೇಕರ್ಗಳು ಕೂಡ ಆಗಮಿಸಿದ್ದರು. ಮಧ್ಯಾಹ್ನ 12:25ಕ್ಕೆ ಬೆಡ್ರೂಂ ತೆಗೆದಾಗ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ನಂತರ ವೈದ್ಯರು ಬಂದು ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಖಚಿತವಾಗಿತ್ತು.
First published: June 17, 2020, 1:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading