• Home
  • »
  • News
  • »
  • entertainment
  • »
  • Urfi Javed: ಚಿತ್ರ-ವಿಚಿತ್ರ ಉಡುಗೆಯ ಬ್ರ್ಯಾಂಡ್‌ ಅಂಬಾಸಿಡರ್‌ ಉರ್ಫಿ ಜಾವೇದ್ ವಿರುದ್ಧ ದೂರು

Urfi Javed: ಚಿತ್ರ-ವಿಚಿತ್ರ ಉಡುಗೆಯ ಬ್ರ್ಯಾಂಡ್‌ ಅಂಬಾಸಿಡರ್‌ ಉರ್ಫಿ ಜಾವೇದ್ ವಿರುದ್ಧ ದೂರು

ಉರ್ಫಿ ಜಾವೇದ್

ಉರ್ಫಿ ಜಾವೇದ್

ಕೆಲ ತಿಂಗಳ ಹಿಂದಷ್ಟೇ ಹೊಸ ಮ್ಯೂಸಿಕ್‌ ಆಲ್ಬಂನಲ್ಲಿ ಮೈಚಳಿ ಬಿಟ್ಟ ಉರ್ಫಿ ಜಾವೇದ್ ವಿರುದ್ಧ ಕೇಸ್‌ ದಾಖಲಾಗಿತ್ತು. ವರದಿಗಳ ಪ್ರಕಾರ ʼಹಿ ಹಿ ಯೇ ಮಜ್ಬೂರಿ' ಹಾಡಿನ ಕಾರಣಕ್ಕಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಉರ್ಫಿ ವಿರುದ್ಧ ದೂರು ದಾಖಲಿಸಿದ್ದರು

  • Share this:

ಬ್ಲೇಡ್‌ನಲ್ಲಿ ಬಟ್ಟೆ, ಒಡೆದ ಗಾಜಿನ ಪೀಸ್‌ನಲ್ಲಿ ಬಟ್ಟೆ, ಕ್ಯಾಸೆಟ್‌ ರೀಲ್‌, ಸೈಕಲ್‌ ಚೈನ್‌, ಹರಿದ ಗೋಣಿ ಚೀಲದಲ್ಲಿ ಡ್ರೆಸ್ ಹೀಗೆ ಚಿತ್ರ-ವಿಚಿತ್ರ ಉಡುಗೆಯ (Dress) ಬ್ರ್ಯಾಂಡ್‌ ಅಂಬಾಸಿಡರ್‌ ಉರ್ಫಿ ಜಾವೇದ್ ತಮ್ಮ ಡಿಫರೆಂಟ್‌ ಕಸ್ಟೂಮ್‌, ಬೋಲ್ಡ್‌ (Bold) ಸ್ಟೇಟ್‌ಮೆಂಟ್‌ಗಳಿಂದಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಪ್ರತಿದಿನ ಒಂದು ಹೊಸ ಸ್ಟೈಲ್‌ಸ್ಟೇಟ್‌ಮೆಂಟ್‌ನೊಂದಿಗೆ ಬರುವ ಉರ್ಫಿ ಜಾವೇದ್ (Urfi Javed) ಅವರನ್ನು ನೆಟ್ಟಿಗರಂತೂ ಟೀಕೆ ಮಾಡದ ದಿನಗಳೇ ಇಲ್ಲ. ಕೆಲವರಂತೂ ಉರ್ಫಿ ಎಂದರೆ ಕೆಂಡಕಾರುತ್ತಾರೆ.


ಸರಿಯಾಗಿ ಬಟ್ಟೆ ಹಾಕೊಳಮ್ಮ, ಮೈಮುಚ್ಚುವ ಮತ್ತು ಎಲ್ಲರೂ ನೋಡುವ ರೀತಿ ಇರಮ್ಮ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಕ್ಲಾಸ್‌ ತೆಗೆದುಕೊಳ್ಳುತ್ತಲೇ ಇರುತ್ತಾರೆ.


ಮತ್ತೆ ಉರ್ಫಿಗೆ ಕಾನೂನು ಸಂಕಷ್ಟ


ಇತ್ತೀಚೆಗೆ ಲೇಖಕ ಚೇತನ್‌ ಭಗತ್‌ ಮತ್ತು ಉರ್ಫಿ ನಡುವೆ ಸಾಕಷ್ಟು ವಾದವಿವಾದಗಳಾಗಿದ್ದವು. ಕಾರ್ಯಕ್ರಮವೊಂದರಲ್ಲಿ ಚೇತನ್‌ ಭಗತ್‌ ಭಾಷಣ ಮಾಡುತ್ತಿದ್ದ ವೇಳೆ ಉರ್ಫಿಯನ್ನು ಉಲ್ಲೇಖಿಸಿದ್ದರು. "ಒಂದು ಕಡೆ ದೇಶವನ್ನು ಯುವಕರ ಪಡೆ ಕಾಯುತ್ತಿದ್ದರೆ, ಇನ್ನೊಂದೆಡೆ ಉರ್ಫಿ ಜಾವೇದ್ ಅವರ ಫೋಟೋ ಮತ್ತು ರೀಲ್ಸ್​​ಗಳನ್ನು ನೋಡುತ್ತಾ ಯುವಕರು ಕಾಲ ಕಳೆಯುತ್ತಿದ್ದಾರೆ" ಎಂದಿದ್ದರು. ಇದಕ್ಕೆ ಕಿಡಿಕಾರಿದ ಉರ್ಫಿ ಕೂಡ ಲೇಖಕರಿಗೆ ಟಾಂಗ್‌ ನೀಡಿದ್ದರು. ಅದರ ಹೊಗೆ ಇರುವಾಗಲೇ ವಕೀಲರೊಬ್ಬರು ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಉರ್ಫಿ ವಿರುದ್ಧ ಕೇಸ್‌ ಹಾಕಿದ್ದಾರೆ.


ಅಶ್ಲೀಲತೆ ಪ್ರತಿಬಿಂಬಿಸುತ್ತಿರುವ ಆರೋಪದ ಮೇಲೆ ದೂರು
ಸಾರ್ವಜನಿಕ ಸ್ಥಳಗಳು, ಸೋಶಿಯಲ್ ಮೀಡಿಯಾಗಳಲ್ಲಿ ಕಾನೂನು ಬಾಹಿರ ಮತ್ತು ಅಶ್ಲೀಲತೆ ಪ್ರತಿಬಿಂಬಿಸುತ್ತಿರುವ ಆರೋಪದ ಮೇಲೆ ಉರ್ಫಿ ಜಾವೇದ್ ವಿರುದ್ಧ ಲಿಖಿದ ದೂರು ಸಲ್ಲಿಕೆಯಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು
ಲಿಖಿತ ಅರ್ಜಿಯನ್ನು ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ಶುಕ್ರವಾರ ಅಂಧೇರಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉರ್ಫಿ ಜಾವೇದ್‌ ವಿರುದ್ಧ ಈ ರೀತಿಯಾಗಿ ದಿನಕ್ಕೊಂದು ಕೇಸ್‌ ದಾಖಲಾಗುತ್ತಲೇ ಇರುತ್ತದೆ. ಕಾರಣ ಇಷ್ಟೇ ಆಕೆಯ ಬಟ್ಟೆಗಳು. ಅರೆಬರೆ ಮತ್ತು ವಿಚಿತ್ರ ಡ್ರೆಸ್ ಹಾಕಿ ಸಮಾಜದಲ್ಲಿ ಅಸಭ್ಯತೆಯನ್ನು ತೋರುತ್ತಿದ್ದಾರೆ ಎಂದು ಹಲವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: Sharukh Khan: ಮೆಕ್ಕಾದ ನಂತರ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾರುಖ್ ಖಾನ್!


ಈ ಹಿಂದೆಯೂ ಉರ್ಫಿ ವಿರುದ್ಧ ಕೇಸ್‌


ಕೆಲ ತಿಂಗಳ ಹಿಂದಷ್ಟೇ ಹೊಸ ಮ್ಯೂಸಿಕ್‌ ಆಲ್ಬಂನಲ್ಲಿ ಮೈಚಳಿ ಬಿಟ್ಟ ಉರ್ಫಿ ಜಾವೇದ್ ವಿರುದ್ಧ ಕೇಸ್‌ ದಾಖಲಾಗಿತ್ತು. ವರದಿಗಳ ಪ್ರಕಾರ ʼಹಿ ಹಿ ಯೇ ಮಜ್ಬೂರಿ' ಹಾಡಿನ ಕಾರಣಕ್ಕಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ಉರ್ಫಿ ವಿರುದ್ಧ ದೂರು ದಾಖಲಿಸಿದ್ದರು. ಅತ್ಯಂತ ಅಶ್ಲೀಲವಾಗಿರುವ ಇಂತಹ ವಿಷಯವನ್ನು ಉರ್ಫಿ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಇನ್‌ಸ್ಟಾಗ್ರಾಮ್‌ನಲ್ಲಿ ಉರ್ಫಿ ಹವಾ


ಉರ್ಫಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಡ್ರೆಸ್‌ ಸೆನ್ಸ್‌ನಿಂದಲೇ ಗಮನ ಸೆಳೆಯುತ್ತಿದ್ದಾರೆ. ಮೂರು ಮಿಲಿಯನ್‌ಗಿಂತಲೂ ಹೆಚ್ಚಿನ ಫಾಲೋವರ್‌ಗಳನ್ನು ಉರ್ಫಿ ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ವಾಚ್‌ನಲ್ಲಿ ಡ್ರೆಸ್‌, ಗೋಲಿಗಳಲ್ಲಿ, ದಾರದಲ್ಲಿ ಹೀಗೆ ಡಿಸೈನರ್‌ ತಯಾರಿಸಿದ ಎಲ್ಲಾ ಉಡುಗೆಗೂ ಉರ್ಫಿ ನ್ಯಾಯ ಒದಗಿಸುತ್ತಾರೆ. ಆದರೆ ನೆಟ್ಟಿಗರ ಕಣ್ಣಲ್ಲಿ ಮಾತ್ರ ಉರ್ಫಿ ಅಶ್ಲೀಲತೆಯನ್ನು ಪ್ರದರ್ಶಿಸುವ ವ್ಯಕ್ತಿಯಾಗಿದ್ದಾರೆ. ಕೆಲವರಂತೂ ಇದು ಚೀಪ್‌ ಗಿಮಿಕ್‌ ಎನ್ನುತ್ತಿದ್ದಾರೆ.


ಯಾರು ಏನೇ ಕಾಮೆಂಟ್‌ ಮಾಡಿದರೂ ತಲೆ ಕೆಡಿಸಿಕೊಳ್ಳದ ಉರ್ಫಿ ತಾನಿರುವುದೇ ಹೀಗೆ ಅಂತಾ ಬಿಂದಾಸ್‌ ಆಗಿದ್ದಾರೆ. ಇತ್ತೀಚೆಗೆ ಉರ್ಫಿ ಏರ್‌ಫೋಟ್‌ನಲ್ಲಿ  ಪಿಜ್ಜಾ ಬಾಕ್ಸ್‌ ನೀಡುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದರು.

First published: