Mukhyamantri Chandru: ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ದೂರು! ಬಂಧನಕ್ಕೆ ಆಗ್ರಹ

ಕನ್ನಡದ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ಕೇಸ್ ದಾಖಲಾಗಿದೆ. ಸಿನಿಮಾ ಹಾಗೂ ಸೀರಿಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಟನಿಗೆ ಬಂಧನದ ಭೀತಿ ಎದುರಾಗಿದೆ.

ಕನ್ನಡದ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ಕೇಸ್ ದಾಖಲಾಗಿದೆ. ಸಿನಿಮಾ ಹಾಗೂ ಸೀರಿಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಟನಿಗೆ ಬಂಧನದ ಭೀತಿ ಎದುರಾಗಿದೆ.

ಕನ್ನಡದ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ಕೇಸ್ ದಾಖಲಾಗಿದೆ. ಸಿನಿಮಾ ಹಾಗೂ ಸೀರಿಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಟನಿಗೆ ಬಂಧನದ ಭೀತಿ ಎದುರಾಗಿದೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್ (Sandalwood) ನಟ ಮುಖ್ಯಮಂತ್ರಿ ಚಂದ್ರು (Mukhyamantri Chandru) ವಿರುದ್ಧ ದೂರು ದಾಖಲಿಸಲಾಗಿದೆ. ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದಿಂದ ನಟನ ವಿರುದ್ಧ ದೂರು  (Case) ದಾಖಲಿಸಲಾಗಿದೆ. ವಿಶೇಷಚೇತನರನ್ನು ನಿಂದನೆ, ಅಪಮಾನ ಮಾಡಿರುವ ಆರೋಪವನ್ನು ಹೊರಿಸಲಾಗಿದ್ದು ಈ ನಿಟ್ಟಿನಲ್ಲಿ ಕೇಸ್ ದಾಖಲಿಸಿದ್ದಾರೆ. ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ವಿಶೇಷಚೇತನರಿಗೆ ನಿಂದನೆ ಮಾಡಿರುವ ಆರೋಪ ಮುಖ್ಯಮಂತ್ರಿ ಚಂದ್ರು ಮೇಲಿದೆ. ಚುನಾವಣೆಗೆ (Election) ಸ್ಪರ್ಧಿಸುವ ವ್ಯಕ್ತಿಯು ಕುಂಟನೇ, ಕುರುಡನೇ, ಹೆಳವನೇ ಎಂದು ಹೇಳಿಕೆ  (Statement) ನೀಡಿದ್ದಾರೆಂದು ಆರೋಪಿಸಲಾಗಿದೆ.


ಮಾತನಾಡುವಾಗ ವಿಶೇಷಚೇತನರನ್ನು ನಿಂದಿಸಿದ್ದಾರೆ. ಚಂದ್ರು ಅವರು ಮಾಧ್ಯಮದ ಮುಂದೆ ಕ್ಷಮೆ ಯಾಚಿಸಬೇಕು. ಸರ್ಕಾರ ಇವರನ್ನು ಬಂಧಿಸಬೇಕು ಎಂದು ವಿಶೇಷಚೇತನರ ಸಂಘದಿಂದ ಮದ್ದೂರು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.


ಸಿನಿಮಾಗಳಲ್ಲಿ ಮಿಂಚಿದ ಮುಖ್ಯಮಂತ್ರಿ ಚಂದ್ರು ಅವರು ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ಹೊಸ ಮುಖದೊಂದಿಗೆ ಕಿರುತೆರೆಗೆ ಬಂದರು. ವಿಲನ್ ರೋಲ್​ಗಳಲ್ಲಿಯೇ ಅವರನ್ನು ನೋಡಿದ್ದ ಜನರು ಅಗ್ನಿಸಾಕ್ಷಿಯಲ್ಲಿ ಅವರ ಪಾತ್ರ ನೋಡಿ ಅಚ್ಚರಿಪಟ್ಟಿದ್ದರು.


43 ವರ್ಷಗಳಿಂದಲೂ ನಟ ಮುಖ್ಯಮಂತ್ರಿ ಎಂಬ ಪಟ್ಟ ಹಿಡಿದುಕೊಂಡೇ ಇದ್ದಾರೆ. 'ಮುಖ್ಯಮಂತ್ರಿ' ಹೆಸರಿನ ನಾಟಕದಲ್ಲಿ ಅವರು ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿದ್ದರು. ಆಗಿನಿಂದಲೂ ಅವರು ಮುಖ್ಯಮಂತ್ರಿ ಚಂದ್ರುವಾಗಿ ಫಿಕ್ಸ್ ಆಗಿದ್ದಾರೆ.


ಇದನ್ನೂ ಓದಿ: Kichcha Sudeep: ಕ್ರಶ್ ಮದ್ವೆ ಆಯ್ತು! ಸುದೀಪ್ ಮಗಳಿಗೆ ಫುಲ್ ಬೇಜಾರು


ಉಳಿದ ಪಾತ್ರಗಳಂತೆಯೇ ಬಂದ ಈ ಪಾತ್ರದ ಖ್ಯಾತಿ ನಟನಿಗೆ ರಾಜಕೀಯದಲ್ಲಿಯೂ ಅದೃಷ್ಟ ತಂದುಕೊಟ್ಟಿದೆ. ಇದುವರೆಗೆ ಈ ನಾಟಕ 801 ಬಾರಿ ಪ್ರದರ್ಶನಗೊಂಡಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದರು. ಏಳು ವರ್ಷಗಳ ಕಾಲ ಧಾರಾವಾಹಿ ಪ್ರಸಾರವಾಗಿತ್ತು. ಅವರು 525 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ .

Published by:Divya D
First published: