Dear Comrade: ಕನ್ನಡದಲ್ಲೂ ಬಿಡುಗಡೆಯಾಯ್ತು ರಶ್ಮಿಕಾ ಅಭಿನಯದ ಡಿಯರ್​ ಕಾಮ್ರೆಡ್​ ಚಿತ್ರದ ಕ್ಯಾಂಟೀನ್​ ಹಾಡು..!

Rashmika Mandanna: ಈ ಹಿಂದೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಅದರಲ್ಲಿ ರಶ್ಮಿಕಾ ಹಾಗೂ ವಿಜಯ್​ ದೇವಕೊಂಡ ಅವರ ಲಿಪ್​ ಲಾಕ್​ ನೋಡಿದ್ದ ಪ್ರೇಕ್ಷಕರಲ್ಲಿ ಕೆಲವರು ಲಿಲ್ಲಿ ವಿರುದ್ಧ ಕೆಂಡಕಾರಿದ್ದರು. ಆದರೆ ಈಗ ಈ ಚಿತ್ರದ ಮತ್ತೊಂದು ಹಾಡು ರಿಲೀಸ್​ ಆಗಿದ್ದು, ಇದರಲ್ಲಿ ಏನಿದೆ ಗೊತ್ತಾ..?

Anitha E | news18
Updated:July 1, 2019, 1:14 PM IST
Dear Comrade: ಕನ್ನಡದಲ್ಲೂ ಬಿಡುಗಡೆಯಾಯ್ತು ರಶ್ಮಿಕಾ ಅಭಿನಯದ ಡಿಯರ್​ ಕಾಮ್ರೆಡ್​ ಚಿತ್ರದ ಕ್ಯಾಂಟೀನ್​ ಹಾಡು..!
ಈ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ನಿಮಗೆ ನಿರಾಸೆ ಮಾಡಿರುವುದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಾವಿಬ್ಬರು ಕುಳಿತು ಡೇಟಿಂಗ್ ನಡೆಸಲಾಗುವುದಿಲ್ಲ. ಏಕೆಂದರೆ ನಮ್ಮಿಬ್ಬರಿಗೂ ಮಾಡಲು ಸಾಕಷ್ಟು ಕೆಲಸಗಳಿವೆ. ನಾವು ಕೆಲಸದ ಮೂಲಕ ಪ್ರೀತಿ ಮತ್ತು ಗೌರವವನ್ನು ಕೊಡುತ್ತೇವೆ ಎಂದು ರಶ್ಮಿಕಾ ಉತ್ತರಿಸಿದ್ದರು.
  • News18
  • Last Updated: July 1, 2019, 1:14 PM IST
  • Share this:
ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಡಿಯರ್​ ಕಾಮ್ರೆಡ್​'. ಈ ಸಿನಿಮಾ ಪೋಸ್ಟರ್​, ಟೀಸರ್ ಹಾಗೂ ಟ್ರೈಲರ್​ಗಳಿಂದಲೇ ಸದ್ದು ಮಾಡುತ್ತಿದೆ.

ಈ ಹಿಂದೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಅದರಲ್ಲಿ ರಶ್ಮಿಕಾ ಹಾಗೂ ವಿಜಯ್​ ದೇವಕೊಂಡ ಅವರ ಲಿಪ್​ ಲಾಕ್​ ನೋಡಿದ್ದ ಪ್ರೇಕ್ಷಕರಲ್ಲಿ ಕೆಲವರು ಲಿಲ್ಲಿ ವಿರುದ್ಧ ಕೆಂಡಕಾರಿದ್ದರು. ಅಷ್ಟೇಅಲ್ಲ ಈ ಹಿಂದೆ ಅವರು ಪೋಸ್​ ನೀಡಿದ್ದ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ ಸಹ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

Rashmika Mandanna Kissing photo
ಡಿಯರ್​ ಕಾಮ್ರೆಡ್​ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಜತೆ ಲಿಪ್​ ಲಾಕ್​ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ


Rashmika Mandanna
ರಶ್ಮಿಕಾ ಮಂದಣ್ಣ


ಈ ಸಿನಿಮಾದ ಟೀಸರ್​ ಬಿಡುಗಡೆಯಾದಾಗಿನಿಂದ ರಶ್ಮಿಕಾ ಒಂದು ರೀತಿಯಲ್ಲಿ ಲಿಪ್​ಲಾಕ್​ ದೃಶ್ಯದಿಂದಲೇ ವಿವಾದಕ್ಕೀಡಾಗಿದ್ದಾರೆ. ಆದರೆ ಈ ಚಿತ್ರದಲ್ಲಿ ಲಿಲ್ಲಿ ಪಾತ್ರದಲ್ಲಿ ಅಭಿನಯಿಸಿರುವ ರಶ್ಮಿಕಾ ಕ್ರಿಕೆಟ್​ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ದಿನ ಕಳೆದಂತೆ ಸಿಕ್ಕಾಪಟ್ಟೆ ಹಾಟ್​ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ: ವೈರಲ್​ ಆಗುತ್ತಿವೆ ಕಿರಿಕ್​ ಬೆಡಗಿಯ ಬೋಲ್ಡ್​​​ ಚಿತ್ರಗಳು..!

ಸದ್ಯ ಈ ಸಿನಿಮಾದ ಕ್ಯಾಂಟೀನ್ ಹಾಡು ಬಿಡುಗಡೆಯಾಗಿದೆ.ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರದ ಕ್ಯಾಂಟೀನ್​ ಹಾಡು ಸಹ ನಾಲ್ಕು ಭಾಷೆಗಳಲ್ಲಿ ಅಂದರೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳದಲ್ಲಿ ಬಿಡುಗಡೆಯಾಗಿದೆ. ಇದನ್ನು ರಶ್ಮಿಕಾ ಟ್ವೀಟ್​ ಮಾಡಿದ್ದಾರೆ.


ಕನ್ನಡದಲ್ಲೂ ಈ ಹಾಡು ಬಿಡುಗಡೆಯಾಗಿದ್ದು, ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರಲ್ಲಿ ಕಾಲೇಜಿನ ಕ್ಯಾಂಟೀನ್​ನಲ್ಲಿ ನಡೆಯುವ ಪ್ರೀತಿ-ಪ್ರೇಮದ ಬಗ್ಗೆ ಸಬಹಳ ಸುಂದರವಾಗಿ ಚಿತ್ರೀಕರಿಸಲಾಗಿದೆ.
ಇತ್ತೀಚೆಗಷ್ಟೆ ಈ ಸಿನಿಮಾದ ಗಿರ ಗಿರ ಗಿರ ಹಾಡಿನ ಲಿರಿಕಲ್​ ವಿಡಿಯೋ ಸಹ ಬಿಡುಗಡೆಯಾಗಿದೆ. ಇದೊಂದು ಮದುವೆ ಮನೆಯಲ್ಲಿನ ಸಂದರ್ಭದಲ್ಲಿ ಬರುವ ಹಾಡಾಗಿದೆ.


'ಗೀತ ಗೋವಿಂದಂ' ನಂತರ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮತ್ತೆ ಒಂದಾಗಿ ನಟಿಸಿರೋ ಸಿನಿಮಾ 'ಡಿಯರ್ ಕಾಮ್ರೆಡ್'. ಹೀಗಾಗಿ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಕೊಂಡಿದೆ. 'ಡಿಯರೆ ಕಾಮ್ರೆಡ್' ಇದೇ 26ಕ್ಕೆ ಅಂದರೆ ಜುಲೈ 26ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ.

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​
First published: July 1, 2019, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading