Mithyam: ಕ್ಯಾನ್​ ಮೂವೀ ಮಾರ್ಕೆಟ್​ನಲ್ಲಿ ಕರಾವಳಿಯ ಮಿಥ್ಯಂ - ಕನ್ನಡಕ್ಕೆ ಮತ್ತೊಂದು ಹೆಮ್ಮೆಯ ಗರಿ

Cannes Film Festival: ಕ್ಯಾನ್​​ ಮೂವೀ ಮಾರ್ಕೆಟ್‌ನ ಭಾಗವಾಗಿ ಹಲವಾರು ಆನ್‌ಲೈನ್ ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕ್ಯಾನ್​ ನಂತರ ಈ ಚಿತ್ರವನ್ನು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದ ಪೋಸ್ಟರ್​

ಚಿತ್ರದ ಪೋಸ್ಟರ್​

  • Share this:
ಕ್ಯಾನ್​ ಚಲನಚಿತ್ರೋತ್ಸವದಲ್ಲಿ (Cannes Film Festival) ಭಾಗಿಯಾಗುವುದು ಒಂದು ಹೆಮ್ಮೆಯ ವಿಚಾರ. ಈ ಬಾರಿ ಈ ಕಾರ್ಯಕ್ರಮದ ಗೌರವ ರಾಷ್ಟ್ರವಾಗಿ ಭಾರತವನ್ನು (India)  ಆಯ್ಕೆಮಾಡಲಾಗಿದೆ. ಇದು ನಿಜಕ್ಕೂ ಸಂತೋಷದ ವಿಚಾರ. ಹಲವಾರು ಬಾಲಿವುಡ್ (Bollywood) ಸೆಲೆಬ್ರಿಟಿ ಸೇರಿದಂತೆ ದಕ್ಷಿಣದ ಸ್ಟಾರ್ ನಟ, ನಟಿಯರು ಸಹ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ಎಲ್ಲ ಕಡೆ ಸೆಲೆಬ್ರಿಟಿಗಳದ್ದೇ ಸದ್ದು, ಆದರೆ ನಮ್ಮ ಕರಾವಳಿ ಜಿಲ್ಲೆಯ ಜನರಿಗೆ ಖುಷಿ ಪಡಲು ಈ ಬಾರಿ ಬೇರೆಯ ವಿಚಾರವಿದೆ. ಈ ವಿಚಾರ ಕೇವಲ ಕರಾವಳಿ ಮಾತ್ರವಲ್ಲ ಇಡೀ ಕರ್ನಾಟಕವೇ ಸಂಭ್ರಮಪಡುವ ಸುದ್ದಿ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾದ ರಘು ನಾಯ್ಕ್ ನಿರ್ದೇಶನದ ಮಿಥ್ಯಂ-ದ ಫಾಲ್ಸ್​ ಟ್ರುಥ್, ಕ್ಯಾನ್ಸ್ ಚಲನಚಿತ್ರ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಚಲನಚಿತ್ರಗಳಲ್ಲಿ ಒಂದಾಗಿದ್ದು, ಇದು ಹೆಮ್ಮೆಯ ವಿಚಾರ ಎನ್ನಬಹುದು. ಚಲನಚಿತ್ರವು ಅಭಯ್ ಎಂಬ ಶ್ರದ್ಧೆಯುಳ್ಳ ವೈದ್ಯರೊಬ್ಬರ ಕಥೆಯಾಗಿದ್ದು, ಅವರು ಅನೇಕ ಜನರಲ್ಲಿ ಪಾದರಸದ ವಿಷವು ಕಾರಣವಿಲ್ಲದೇ ನಿಗೂಢವಾದ ಏರಿಕೆಯನ್ನು ಕಂಡುಹಿಡಿಯುವುದೇ ಈ ಚಿತ್ರದ ಕಥಾ ಹಂದರವಾಗಿದೆ.

ಲಾಭದಾಯಕ ಹುದ್ದೆ ಬಿಟ್ಟು ಸಿನೆಮಾ ರಂಗಕ್ಕೆ

ಈ ಚಿತ್ರದ ನಿರ್ದೇಶಕ ರಘು ನಾಯ್ಕ್, ಅಟ್ಲಾಂಟಾದಲ್ಲಿ ಲಾಭದಾಯಕ, ಹೆಚ್ಚಿನ ಸಂಬಳದ ಸಾಫ್ಟ್‌ವೇರ್ ಪ್ರೋಗ್ರಾಂ ಉದ್ಯೋಗವನ್ನು ಬಿಟ್ಟನಂತರ, 2010 ರಲ್ಲಿ ಮುಂಬೈಗೆ ತೆರಳಿ, ಸಿನೆಮಾ ಬಗ್ಗೆ ಹೆಚ್ಚು ಕಲಿಯುವ ಉದ್ದೇಶದಿಂದ ತರಬೇತಿ ಪಡೆದಿದರು. ಸಿನೆಮಾದ ಎಲ್ಲಾ ಆಯಾಮಗಳನ್ನು ಅರಿತು ಮುಂದುವರೆದಿದ್ದಾರೆ.

ಅವರು ಬೆಳಗಾವಿ ಮತ್ತು ಪುಣೆಯ ಜೊತೆಗೆ ಮುಂಬೈ, ಜಕಾರ್ತಾ ಮತ್ತು ಅಟ್ಲಾಂಟಾದಂತಹ ನಗರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವುದರಿಂದ , ಹಲವಾರು ವಿಚಾರಗಳ ಬಗ್ಗೆ ಜ್ಞಾನ ಅವರಲ್ಲಿದೆ. ಹಲವಾರು ಕಲಾಕೃತಿಗಳು, ಸಾಹಿತ್ಯ, ಸಂಪ್ರದಾಯಗಳು ಮತ್ತು ಪ್ರಪಂಚದ ವಿವಿಧ ರೀತಿಯ ಚಲನಚಿತ್ರಗಳು, ರಘು ಅವರನ್ನು ಸಿನೆಮಾ ನಿರ್ದೇಶಕರಾಗಲು ಪ್ರಭಾವ ಬೀರಿತು ಎನ್ನುತ್ತಾರೆ.

ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ “Mithyam ಚಿತ್ರವು ನಿರ್ದೇಶಕನಾಗಿ ನನ್ನ ಮೊದಲ ವೈಶಿಷ್ಟ್ಯ ಪೂರ್ಣ ಹಾಗೂ ಹೆಚ್ಚು ಸಮಯದ ಚಲನಚಿತ್ರವಾಗಿದೆ ಮತ್ತು ಇದು ಶುದ್ಧ ಪ್ರೀತಿ ಮತ್ತು ಶ್ರಮದಾಯಕ ಕೆಲಸದ ಪ್ರತಿಫಲ. ಇಲ್ಲಿಯವರೆಗೆ ಸ್ಪರ್ಧೆಯ ಪ್ರತಿಕ್ರಿಯೆ ಉತ್ತಮವಾಗಿದೆ, ”ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರೋಲಿಗರಿಗೆ ಚಳಿ ಬಿಡಿಸಿದ ಪೂಜಾ ಹೆಗ್ಡೆ - ಐರೆನ್ ಲೆಗ್ ಅಂತಾ ಕರೆದವರಿಗೆ ರಾಧೆ ತಿರುಗೇಟು

ನಾಯಕ್ ಅವರು ಮೊದಲು ವೈಜ್ಞಾನಿಕ ಕಾಲ್ಪನಿಕ ಸಂಗ್ರಹಣೆ ಮತ್ತು ಇಂಟರ್ನೆಟ್ ಸಂಗ್ರಹಣೆಯ ವಿಚಾರದ ಬಗ್ಗೆ ಹೆಚ್ಚು ಗಮನ ನೀಡಿದರು. ಅವರ ಸಹೋದರ ವಿನಾಯಕ್ ನಾಯಕ್, ಎರಡೂವರೆ ವರ್ಷಗಳ ಕಾಲ ಪರಿಣತಿ ನಿಗಮಗಳಿಗೆ ಅಂತರಾಷ್ಟ್ರೀಯ ಉದ್ಯಮದ ಮುಖ್ಯಸ್ಥರಾಗಿದ್ದರು ಮತ್ತು ಸಾಕಷ್ಟು ದೇಶಗಳಲ್ಲಿ ವಾಸವಿದ್ದ ಅವರು ಸಹ 2013ರಲ್ಲಿ ಸಿನೆಮಾರಂಗಕ್ಕೆ ಬಂದಿದ್ದಾರೆ.

ಸದ್ಯದಲ್ಲಿ ಒಟಿಟಿಗೆ ಚಿತ್ರ

ಮುಂಬೈನ ಅಂಕಿತ್ ವರ್ಷ್ನೇಯ ಅವರು ಚಿತ್ರದ ನಾಯಕನ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದ ಅನೇಕ ಕಲಾವಿದರೂ ಹಾಗೂ ಸಿಬ್ಬಂದಿಗಳು ಕರಾವಳಿಯವರಾಗಿದ್ದು, ಉದಾಹರಣೆಗೆ, ಚಿತ್ರದಲ್ಲಿ ರಾಹುಲ್ ಶರ್ಮಾ ಪಾತ್ರವನ್ನು ನಿರ್ವಹಿಸುವ ಪರಿವೇಶ್ ಪಾಧಿ ಅವರು ಮಣಿಪಾಲದ ಶಾಲೆಯಲ್ಲಿ ಪದವಿ ಪಡೆದವರಾಗಿದ್ದಾರೆ. ಪರಿವೇಶ್ ಅವರು ಕೆಲವು ವರ್ಷಗಳಿಂದ ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಿದ ಅನುಭ ಹೊಂದಿದ್ದಾರೆ.

ಇದನ್ನೂ ಓದಿ: ಮತ್ತೋರ್ವ ಕನ್ನಡತಿಗೆ ಪರಭಾಷೆಯಲ್ಲಿ ರೆಡ್ ಕಾರ್ಪೆಟ್, ತೆಲುಗಿಗೆ ಹಾರಿದ 'ಸಲಗನ' ಬೆಡಗಿ!

ಕ್ಯಾನ್​​ ಮೂವೀ ಮಾರ್ಕೆಟ್‌ನ ಭಾಗವಾಗಿ ಹಲವಾರು ಆನ್‌ಲೈನ್ ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕ್ಯಾನ್​ ನಂತರ ಈ ಚಿತ್ರವನ್ನು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.
Published by:Sandhya M
First published: