The Kashmir Files: ಈ ಸಿನಿಮಾ ದ್ವೇಷಪೂರಿತ ಕಸ ಎಂದ ಕೆನಡಾ ನಿರ್ಮಾಪಕ ಡೈಲನ್ ಮೋಹನ್

ಅನುರಾಗ್ ಕಶ್ಯಪ್ ಮತ್ತು  ಡೈಲನ್ ಮೋಹನ್

ಅನುರಾಗ್ ಕಶ್ಯಪ್ ಮತ್ತು ಡೈಲನ್ ಮೋಹನ್

ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತಂತೆ ಅನುರಾಗ್ ಕಶ್ಯಪ್ ಅವರ ಟೀಕೆಗೆ ಪ್ರತಿಯಾಗಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿಯವರು ಬಾಲಿವುಡ್‌ನ ನಿರಾಕರಣೆ ಟ್ರೆಂಡ್ ಅನುರಾಗ್ ಅವರ ಮುಂದಾಳತ್ವದಲ್ಲಿ ಆರಂಭಗೊಂಡಿದ್ದು, ಇದೀಗ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಗುರಿಯಾಗಿಸಿದ್ದಾರೆ ಎಂದು ಹೇಳಿದ್ದರು. ಇದೀಗ ವಿವೇಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ಮಾಪಕ ಡೈಲನ್ ಮೋಹನ್ ಕಾಶ್ಮೀರ್ ಫೈಲ್ಸ್ ಕಲಾತ್ಮಕ ಅರ್ಹತೆಯಿಲ್ಲದ ದ್ವೇಷಪೂರಿತ ಕೊಳೆ ಎಂಬುದಾಗಿ ಮೂದಲಿಸಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್‌ನ (Bollywood) ಹೆಚ್ಚಿನ ಚಿತ್ರಗಳುಇಂದು ಬಹಿಷ್ಕಾರದ ಸುಳಿಗೆ ಸಿಲುಕುತ್ತಿದ್ದು, ಒಂದಿಲ್ಲೊಂದು ಕಾರಣಗಳಿಂದ ಚಿತ್ರಗಳನ್ನು ಚಿತ್ರಪ್ರೇಮಿಗಳು ನಿಷೇಧಿಸುತ್ತಿದ್ದಾರೆ. ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ (Lal Singh Chaddha) ಪ್ರಸ್ತುತ ಬಹಿಷ್ಕಾರಕ್ಕೆ ಒಳಗಾದ ಚಿತ್ರವಾಗಿದೆ. ಬಾಲಿವುಡ್‌ನ ಅನೇಕ ಚಿತ್ರ ನಿರ್ಮಾಪಕರು ಚಿತ್ರಗಳ ಬಹಿಷ್ಕಾರದ ಕುರಿತು ಕಳವಳ ವ್ಯಕ್ತಪಡಿಸಿದ್ದು, ದಕ್ಷಿಣದ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸುತ್ತಿದ್ದರೆ ಬಾಲಿವುಡ್ ಏಕೆ ಮುಗ್ಗರಿಸುತ್ತಿದೆ ಎಂಬುದಕ್ಕೆ ಕಾರಣಗಳನ್ನು ನೀಡಿದ್ದರು. ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಹೇಳುವಂತೆ ಹೆಚ್ಚಿನ ಚಿತ್ರಗಳು ಹಿಂದಿ ಭಾಷೆಯ (Hindi Language) ಗಂಧಗಾಳಿಯಿಲ್ಲದವರು ತಯಾರಿಸುತ್ತಿರುವುದಕ್ಕೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.


ಕಾಶ್ಮೀರ್ ಫೈಲ್ಸ್‌ ಚಿತ್ರದ ಬಗ್ಗೆ ಏನಂದ್ರು ಅನುರಾಗ್ ಕಶ್ಯಪ್
ಕಾಶ್ಮೀರ್ ಫೈಲ್ಸ್‌ನಂತಹ ಉತ್ತಮ ಚಿತ್ರಗಳು ಕೂಡ ಕಲಾತ್ಮಕ ಅರ್ಹತೆಯಿಲ್ಲದ ಚಿತ್ರಗಳು ಎಂಬ ಮಾತೂ ಕೂಡ ಅನುರಾಗ್ ಅವರ ಅಭಿಪ್ರಾಯವಾಗಿದೆ. ಏಕೆಂದರೆ ಈ ಚಿತ್ರಗಳು ಸಮುದಾಯದಲ್ಲಿ ದ್ವೇಷವನ್ನು ಉತ್ಪತ್ತಿ ಮಾಡುತ್ತದೆ ಹಾಗೂ ಇಂತಹ ಚಿತ್ರಗಳನ್ನು ಯಾರೂ ಕೂಡ ಆಸ್ಕರ್‌ಗೆ ಆರಿಸಬಾರದು ಎಂಬುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.


ಅನುರಾಗ್ ಅವರ ಟೀಕೆಗೆ ವಿವೇಕ್ ಅಗ್ನಿಹೋತ್ರಿಯವರ ಪ್ರತಿಕ್ರಿಯೆ ಹೀಗಿತ್ತು
ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತಂತೆ ಅನುರಾಗ್ ಕಶ್ಯಪ್ ಅವರ ಟೀಕೆಗೆ ಪ್ರತಿಯಾಗಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿಯವರು ಬಾಲಿವುಡ್‌ನ ನಿರಾಕರಣೆ ಟ್ರೆಂಡ್ ಅನುರಾಗ್ ಅವರ ಮುಂದಾಳತ್ವದಲ್ಲಿ ಆರಂಭಗೊಂಡಿದ್ದು, ಇದೀಗ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಗುರಿಯಾಗಿಸಿದ್ದಾರೆ ಎಂದು ಹೇಳಿದ್ದರು. ಇದೀಗ ವಿವೇಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ಮಾಪಕ ಡೈಲನ್ ಮೋಹನ್ ಕಾಶ್ಮೀರ್ ಫೈಲ್ಸ್ ಕಲಾತ್ಮಕ ಅರ್ಹತೆಯಿಲ್ಲದ ದ್ವೇಷಪೂರಿತ ಕೊಳೆ ಎಂಬುದಾಗಿ ಮೂದಲಿಸಿದ್ದಾರೆ.


ಇದನ್ನೂ ಓದಿ: Tollywood: ಬೆಂಕಿ ಇಲ್ಲದೇ ಹೊಗೆ ಆಡಲ್ಲ, ಅಲ್ಲು-ರಾಮ್​​ಚರಣ್​ ನಡುವೆ ವಾರ್ ನಡೀತಿರೋದು ಸತ್ಯವಂತೆ!


ಕಾಶ್ಮೀರ್ ಫೈಲ್ಸ್ ಚಿತ್ರವು ಕಲಾತ್ಮಕ ಅರ್ಹತೆಯಿಲ್ಲದೇ ಇರುವ ದ್ವೇಷಪೂರಿತ ಕಸ
ಕಾಶ್ಮೀರ್ ಫೈಲ್ಸ್ ಚಿತ್ರವು ಕಲಾತ್ಮಕ ಅರ್ಹತೆಯಿಲ್ಲದೇ ಇರುವ ದ್ವೇಷಪೂರಿತ ಕಸವೆಂದು ಡೈಲನ್ ಟೀಕಿಸಿದ್ದು, ಚಿತ್ರವು ಈ ವರ್ಷ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆಯದಿರುವುದೇ ಉತ್ತಮ ಎಂಬ ಅನುರಾಗ್ ಕಶ್ಯಪ್ ಅವರ ಮಾತನ್ನು ಬೆಂಬಲಸಿರುವ ಡೈಲನ್, ಅನುರಾಗ್ ಕನಿಷ್ಟಪಕ್ಷ ಭಾರತಕ್ಕೆ ಉಳಿದಿರುವ ಅಲ್ಪ ಸ್ವಲ್ಪ ಒಳ್ಳೆಯ ಹೆಸರನ್ನು ಕಾಪಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಡೈಲನ್ ಅವರು 2020 ರಲ್ಲಿ ಬಿಡುಗಡೆಯಾದ ನೆಟ್‌ಫ್ಲಿಕ್ಸ್ ಡಾಕ್ಯು-ಸರಣಿ ಬ್ಯಾಡ್ ಬಾಯ್ ಬಿಲಿಯನೇರ್ಸ್ ಇಂಡಿಯಾವನ್ನು ನಿರ್ಮಿಸಿದ್ದಾರೆ.


ವಿವೇಕ್ ಅಗ್ನಿಹೋತ್ರಿಯವರು ತಮ್ಮ ಬಾಲಿವುಡ್‌ನ ಹತ್ಯಾಕಾಂಡ ನಿರಾಕರಣೆ ಲಾಬಿಯಂತೆ ತಮ್ಮ ಚಿತ್ರದ ಕುರಿತು ಅಭಿಯಾನವನ್ನು ಆರಂಭಿಸಿದೆ ಎಂದು ಟ್ವೀಟ್ ಮಾಡಿದ್ದರು. ಅನುರಾಗ್ ಮಾತುಗಳನ್ನು ಉಲ್ಲೇಖಿಸಿ ವಿವೇಕ್ ಅವರು ಅನುರಾಗ್ ನೇತೃತ್ವದ ಅಡಿಯಲ್ಲಿ ಬಾಲಿವುಡ್‌ನ ಕೆಟ್ಟ, ನರಮೇಧ-ನಿರಾಕರಿಸುವ ಲಾಬಿ ಆಸ್ಕರ್‌ಗಾಗಿ ಕಾಶ್ಮೀರ್ ಫೈಲ್ಸ್ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸಿದೆ ಎಂದು ಟ್ವೀಟ್ ಮಾಡಿದ್ದರು. RRR ಅನ್ನು ಅಂತಿಮ ಐದರಲ್ಲಿ ನಾಮನಿರ್ದೇಶಿತಗೊಂಡರೆ ಭಾರತಕ್ಕೆ ಆಸ್ಕರ್ ದೊರೆಯುವ ನಿರೀಕ್ಷೆ ಇದೆ ಯಾವ ಚಿತ್ರವನ್ನು ಅವರು ಆಯ್ಕೆಮಾಡುತ್ತಾರೆ ಎಂಬುದು ಗೊತ್ತಿಲ್ಲ ಕಾಶ್ಮೀರಿ ಫೈಲ್ಸ್ ಅನ್ನು ಆರಿಸುವುದಿಲ್ಲವೆಂದು ನಾನು ಭಾವಿಸುತ್ತೇನೆ ಎಂದು ಅನುರಾಗ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.


ಇದನ್ನೂ ಓದಿ:  Jote Jotheyali: ಅನಿರುದ್ಧ್‌ಗೆ ಸ್ಟಾರ್‌ ಹೋಟೆಲ್ ಬೇಕು, ಕಾಲು ಹಿಡಿದು ಆ್ಯಕ್ಟ್ ಮಾಡಿಸ್ಬೇಕು! ಜೊತೆ ಜೊತೆಯಲಿ ನಿರ್ಮಾಪಕರ ಗಂಭೀರ ಆರೋಪ


ಅಗ್ರಗಳಿಕೆಯ ಚಿತ್ರವೆಂಬ ಬಿರುದಿಗೆ ಕಾಶ್ಮೀರ್ ಫೈಲ್ಸ್ ಭಾಜನ
ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಕಾಶ್ಮೀರ್ ಫೈಲ್ಸ್‌ನಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಲವಾರು ಚಿತ್ರ ವಿಮರ್ಶೆಗಳಿಗೆ ಒಳಗಾದರೂ ಅಗ್ರಗಳಿಕೆಯ ಚಿತ್ರವೆಂಬ ಬಿರುದಿಗೆ ಕಾಶ್ಮೀರ್ ಫೈಲ್ಸ್ ಭಾಜನವಾಗಿದೆ. ಈ ಚಲನಚಿತ್ರವು 1980 ರ ದಶಕದ ಉತ್ತರಾರ್ಧದಲ್ಲಿ ಕಾಶ್ಮೀರ ಕಣಿವೆಯ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದೆ. ಸೂಕ್ಷ್ಮವಾದ ಸಮಸ್ಯೆಯನ್ನು ಚಿತ್ರಿಸಿರುವುದಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರೆ, ಚಿತ್ರದಲ್ಲಿ ಮುಸ್ಲಿಮರೆಲ್ಲರನ್ನೂ ಆಕ್ರಮಣಕಾರರೆಂಬ ರೂಪದಲ್ಲಿ ಬಿಂಬಿಸಲಾಗಿದೆ ಎಂದು ಟೀಕಿಸಿದ್ದರು.

Published by:Ashwini Prabhu
First published: