Siddhartha: ಸದ್ಯದಲ್ಲೇ ಸೆಟ್ಟೇರಲಿದೆ ಕಾಫಿ ಕಿಂಗ್ ಬಯೋಪಿಕ್, ತೆರೆಯ ಮೇಲೆ ಕಾಫಿ ಡೇ ಸಿದ್ಧಾರ್ಥ್ ಜೀವನಗಾಥೆ

Sandalwood: ಹೌದು, ವರ್ಷಕ್ಕೆ ಸರಿ ಸುಮಾರು 160 ಕೋಟಿ ಕಪ್ ಕಾಫಿಗಳನ್ನು ಮಾರಾಟ ಮಾಡುತ್ತಿದ್ದ ಈ ಅದ್ಭುತ ಸಂಸ್ಥೆಯನ್ನು ಕಟ್ಟಿದ ಕೆಫೆ ಕಾಫಿ ಡೇ ಸಂಸ್ಥಾಪಕ  ಜಿ ಸಿದ್ಧಾರ್ಥ್ ಬದುಕು ಮತ್ತು ಸಾವಿನ ನಿಗೂಢತೆಯನ್ನು ಹೊಂದಿರುವ ಈ ಸಿನಿಮಾ ಸದ್ಯದಲ್ಲಿಯೇ ಸೆಟ್ಟೇರುತ್ತಿದೆ.

ಸಿದ್ಧಾರ್ಥ್

ಸಿದ್ಧಾರ್ಥ್

  • Share this:
ಕರ್ನಾಟಕದ ಪ್ರತಿಷ್ಠಿತ ಕೆಫೆ ಕಾಫಿ ಡೇ (Cafe Coffee Day) ಒಂದು ಕಾಲದಲ್ಲಿ ಯಶಸ್ಸು ಕಂಡಿದ್ದ ಕಂಪನಿ. ಆದರೆ, ಬಳಿಕ ನಷ್ಟದ ಸುಳಿಗೆ ಸಿಲುಕಿತು. 2019ರ ಆಗಸ್ಟ್ನಲ್ಲಿ ಸಿದ್ದಾರ್ಥ (Siddhartha) ಮಂಗಳೂರು ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಪ್ರೈವೇಟ್ ಈಕ್ವಿಟಿ ಪಾರ್ಟನರ್ಗಳು, ಸಾಲಗಾರರ ಕಿರುಕುಳ ಹಾಗೂ ಆದಾಯ ತೆರಿಗೆ ಇಲಾಖೆಯ ಕಿರುಕುಳ ತಾಳಲಾಗದೇ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಸಿದ್ದಾರ್ಥ ಡೆತ್ ನೋಟ್ ಬರೆದಿಟ್ಟಿದ್ದರು. ಯಾರೇನೇ ಅಂದ್ರು ಕಾಫಿ ಡೇ ಕರ್ನಾಟಕದ (Karnataka) ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿದ್ಧಾರ್ಥ್ ಎಂದರೆ ಕಾಫಿ ಡೇ ಎನ್ನುವಷ್ಟು ಅವರು ಪ್ರಸಿದ್ಧ ಅವರನ್ನು ಕಾಫಿ ಕಿಂಗ್ ಎಂದು ಕರೆಯಲಾಗುತ್ತದೆ. ಇದೀಗ ಅವರ ಬಯೋಪಿಕ್ ಸದ್ಯದಲ್ಲಿಯೇ ಆರಂಭವಾಗಲಿದೆ.  

ಸದ್ಯದಲ್ಲಿಯೇ ಸೆಟ್ಟೇರಲಿದೆ ಬಯೋಪಿಕ್

ಹೌದು, ವರ್ಷಕ್ಕೆ ಸರಿ ಸುಮಾರು 160 ಕೋಟಿ ಕಪ್ ಕಾಫಿಗಳನ್ನು ಮಾರಾಟ ಮಾಡುತ್ತಿದ್ದ ಈ ಅದ್ಭುತ ಸಂಸ್ಥೆಯನ್ನು ಕಟ್ಟಿದ ಕೆಫೆ ಕಾಫಿ ಡೇ ಸಂಸ್ಥಾಪಕ  ಜಿ ಸಿದ್ಧಾರ್ಥ್ ಬದುಕು ಮತ್ತು ಸಾವಿನ ನಿಗೂಢತೆಯನ್ನು ಹೊಂದಿರುವ ಈ ಸಿನಿಮಾ ಸದ್ಯದಲ್ಲಿಯೇ ಸೆಟ್ಟೇರುತ್ತಿದೆ. ಸಿದ್ದಾರ್ಥ ಅವರ ಜೀವನವೇ ನಿಜಕ್ಕೂ ಹಲವಾರು ಜನರಿಗೆ ಮಾದರಿ. ಅವರು ಕೇವಲ 24ನೇ ವಯಸ್ಸಿನಲ್ಲೇ ಮುಂಬೈನಲ್ಲಿ ಪೋರ್ಟ್ಪೊಲಿಯೋ ಮ್ಯಾನೇಜ್ ಮೆಂಟ್ ತರಬೇತಿ ಪಡೆದು, ನಂತರ ಸ್ವಂತ ಉದ್ಯಮ ಆರಂಭಿಸಿದವರು.

ಇದನ್ನೂ ಓದಿ: ಅಪ್ಪ-ಮಗ ಅಂದ್ರೆ ಹೀಗಿರಬೇಕು, ಕೊನೆ ಸಿನಿಮಾದಲ್ಲೂ ಒಂದೇ ಸಂದೇಶ ಕೊಟ್ಟ ಪುನೀತ್-ರಾಜ್​ಕುಮಾರ್!

ತಂದೆಯ ಸಹಾಯದಿಂದ ಟ್ರೆಡಿಂಗ್, ಮ್ಯೂಚುಯಲ್ ಫಂಡ್ಸ್, ರಿಯಲ್ ಎಸ್ಟೇಟ್, ಸ್ಟಾರ್ಟ್ ಅಪ್ ಕಂಪೆನಿ, ಹೀಗೆ ಒಂದೊಂದೇ ಉದ್ಯಮ ಆರಂಭಿಸಿ, ಸಾಧನೆ ಮಾಡಿದವರು.  1993ರಲ್ಲಿ ಕಾಫಿ ಉದ್ಯಮ ಆರಂಭಿಸಿದ ಸಿದ್ದಾರ್ಥ್ ಯಶಸ್ಸು ಪಡೆದಿದ್ದಾರೆ. ಮೊದಲು ಕೇವಲ ಕಾಫಿ ಬೀಜಗಳ ವ್ಯಾಪಾರ ಮತ್ತು ರಫ್ತು ಆರಂಭಿಸಿದ ಅವರು ನಂತರ ಕಾಫಿ ಕ್ಯೂರಿಂಗ್ ಘಟಕವನ್ನೂ ಸಹ ಮಾಡಿ, ಕಾಫಿ ಉದ್ಯಮದಲ್ಲಿ ಅಧಿಪತ್ಯ ಮೆರೆದಿದ್ದಾರೆ. 1996ರಲ್ಲಿ ಕಾಫಿ ಡೇ ಸ್ಟಾರ್ಟ್ ಮಾಡಿ, ಕೇವಲ ಐದು ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕೆಫೆ ಕಾಫಿ ಡೇ ಆರಂಭಿಸಿ ಕಿಂಗ್ ಆಗಿ ಮೆರೆದ ಮೇರು ವ್ಯಕ್ತಿತ್ವ ಅವರದ್ದು.  ಆದರೆ ಸಾಲಾದ ಸುಳಿಯಲ್ಲಿ ಸಿಲುಕಿದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮತ್ತೆ ಪುಟಿದೆದ್ದ ಕಾಫಿ ಡೇ

ಈಗಾಗಲೇ ಅವರ ಸಾವಿನ ಬಗ್ಗೆ ಕನ್ನಡದ ಖ್ಯಾತ ಲೇಖಕ ರವಿ ಬೆಳೆಗರೆ ಬರೆದಿದ್ದಾರೆ. ಹಾಗೆಯೇ, ರುಕ್ಮಿನಿ ರಾವ್ ಮತ್ತು ದತ್ತ ಎನ್ನುವವರು ಸಹ ಒಟ್ಟಿಗೆ ಸೇರಿ ಪುಸ್ತಕ ಬರೆದಿದ್ದಾರೆ.  ಇನ್ನು ಸಿದ್ದಾರ್ಥನ ಸಾವಿನ ಬಳಿಕ ಬಳಿಕ ಕೆಫೆ ಕಾಫಿ ಡೇ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ ತನ್ನ ದಿಟ್ಟ ನಿರ್ಧಾರಗಳಿಂದ ಮಾಳವಿಕಾ ಕಾಫಿ ಡೇಗೆ ಮರುಜೀವ ನೀಡಿ ಸಾಧಿಸಿ ತೋರಿಸಿದ್ದಾರೆ.

ಇದನ್ನೂ ಓದಿ: ಶ್ರೀನಿಧಿ ಶೆಟ್ಟಿ ಎಸ್​ಎಸ್​ಎಲ್​ಸಿ ಮಾರ್ಕ್ಸ್​ ಕಾರ್ಡ್​ ವೈರಲ್, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಕೆಜಿಎಫ್ ಬೆಡಗಿ

ಮಾಳವಿಕಾ ಪ್ರಯತ್ನಗಳ ಫಲವಾಗಿ ಕೆಫೆ ಕಾಫಿ ಡೇ ಕಂಪನಿಯ ಬಗ್ಗೆ ಹೂಡಿಕೆದಾರರು, ಬ್ಯಾಂಕ್ಗಳು, ಷೇರು ಮಾರುಕಟ್ಟೆಯಲ್ಲೂ ಹೊಸ ಭರವಸೆ ಬಂದಿದೆ. ₹ 23ಕ್ಕೆ ಕುಸಿದಿದ್ದ ಕೆಫೆ ಕಾಫಿ ಡೇ ಷೇರುಗಳು ಈಗ ₹ 51ಕ್ಕೆ ಏರಿಕೆಯಾಗಿವೆ.ಸಾಲದ ಭಯವೋ ವಿಧಿಯ ಆಟಕ್ಕೊ ಸಿದ್ಧಾರ್ಥ ಬಲಿಯಾದ್ರು. ಪತಿಯ ಅಗಲಿಕೆಯ ನೋವು, ವ್ಯವಹಾರದಲ್ಲಿನ ನಷ್ಟ, ಸಾವಿರಾರು ಉದ್ಯೋಗಿಗಳ ಬದುಕು ಹೀಗೆ ಹಲವು ಸವಾಲುಗಳ ನಡುವೆ ಮಾಳವಿಕ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ್ರು. ಕೊಟ್ಟ ಮಾತು ಉಳಿಸಿಕೊಂಡಿರೋ ಮಾಳವಿಕಾ ಕಂಪನಿಯ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ.
Published by:Sandhya M
First published: