Jr NTRಗೆ ಮತ್ತೆ ನಾಯಕಿಯಾಗಲಿದ್ದಾರಂತೆ ಆಲಿಯಾ ಭಟ್‌..! ಟಾಲಿವುಡ್ ನಲ್ಲಿ ಹೊಸ ಗಾಸಿಪ್..

ಜೂನಿಯರ್ ಎನ್‌ಟಿಆರ್ ನಾಯಕತ್ವ ಹಾಗೂ ಸಿವ ಕಾರತಲ ನಿರ್ದೇಶನದ "ಜೂನಿಯರ್30" ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ದಟ್ಟ ವದಂತಿ ಟಾಲಿವುಡ್ ತುಂಬಾ ಹರಿದಾಡುತ್ತಿದೆ.

Jr ಎನ್‌ಟಿಆರ್,  ಆಲಿಯಾ ಭಟ್

Jr ಎನ್‌ಟಿಆರ್,  ಆಲಿಯಾ ಭಟ್

  • Share this:
ಜೂನಿಯರ್ ಎನ್‌ಟಿಆರ್ (Junior NTR) ನಾಯಕತ್ವದ 'ಎನ್‌ಟಿಆರ್30" ಮತ್ತೆ ಮುಖಪುಟ ಶೀರ್ಷಿಕೆಗಳಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರವನ್ನು ಸಿವ ಕರತಲ ನಿರ್ದೇಶಿಸುತ್ತಿದ್ದು, ಹಂಗಾಮಿಯಾಗಿ "ಎನ್‌ಟಿಆರ್30" ಎಂಬ ಶೀರ್ಷಿಕೆ ನೀಡಲಾಗಿದೆ. ಈ ನಡುವೆ ಜೂನಿಯರ್ ಎನ್‌ಟಿಆರ್ ನಟಿಸಿರುವ ಮತ್ತೊಂದು ಚಿತ್ರ "ಆರ್‌ಆರ್‌ಆರ್" (RRR) ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿದ್ದು(Postponed) , ಜೂನಿಯರ್ ಎನ್‌ಟಿಆರ್ ನಟಿಸುತ್ತಿರುವ 30ನೇ ಚಿತ್ರವಾದ 'ಎನ್‌ಟಿಆರ್30'ನಲ್ಲಿ ಆಲಿಯಾ(Aaliya Bhatt) ಭಟ್ ಅವರೆದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು(Rumors) ಹರಿದಾಡುತ್ತಿವೆ.

ಅಧಿಕೃತ ಸ್ಪಷ್ಟನೆ ಇಲ್ಲ
ಈಗಾಗಲೇ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬಿರುಗಾಳಿಯನ್ನೇ ಎಬ್ಬಿಸಿದ್ದು, ಸಿವ ಕರತಲ ನಿರ್ದೇಶನದ ಬಹುನಿರೀಕ್ಷಿತ 'ಎನ್‌ಟಿಆರ್30' ಚಿತ್ರದಲ್ಲಿ ಆಲಿಯಾ ಭಟ್-ಜೂನಿಯರ್ ಎನ್‌ಟಿಆರ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಂದಾಜಿಸತೊಡಗಿದ್ದಾರೆ. ಆದರೆ, ಈವರೆಗೆ ಈ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಲಾಗಿಲ್ಲ.

ಈ ನಡುವೆ ನಿರ್ಮಾಣ ಪೂರ್ವ ತಯಾರಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಚಿತ್ರಕ್ಕೆ ಅನಿರುಧ್‌ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಜೂನಿಯರ್ ಎನ್‌ಟಿಆರ್ ಎದುರಿಗೆ ಸಮಂತಾ ರುಥ್‌ ಪ್ರಭು ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: RRR Movie: ಜೂನಿಯರ್ NTR, ರಾಮ್ ಚರಣ್ ಕಂಡ್ರೆ ಮಾಧವನ್‍ಗೆ ಸಕತ್ ಹೊಟ್ಟೆಕಿಚ್ಚಂತೆ..!ಯಾಕೆ ಗೊತ್ತಾ?

ಸೀತಾ ಪಾತ್ರ
ಇದೇ ವೇಳೆ, ಚಿತ್ರದ ನಿರ್ಮಾಪಕರು ಹೈದರಾಬಾದ್‌ನಲ್ಲಿ ಶಾಸ್ತ್ರೋಕ್ತ ಪೂಜೆಗಳ ಮೂಲಕ ಚಿತ್ರದ ಚಿತ್ರೀಕರಣ ಆರಂಭಿಸಲು ಯೋಜಿಸಿದ್ದಾರೆ. ಇದಕ್ಕೂ ಮುನ್ನ 'ಜನತಾ ಗ್ಯಾರೇಜ್' ಚಿತ್ರದಲ್ಲಿ ನಿರ್ದೇಶಕ ಸಿವ ಕಾರತಲ ಹಾಗೂ ಜೂನಿಯರ್ ಎನ್‌ಟಿಆರ್ ಒಟ್ಟಾಗಿ ಕೆಲಸ ಮಾಡಿದ್ದರು. ಆಲಿಯಾ ಭಟ್ ಎಸ್.ಎಸ್. ರಾಜಮೌಳಿ ನಿರ್ದೇಶನ ಹಾಗೂ ಜೂನಿಯರ್ ಎನ್‌ಟಿಆರ್-ರಾಮ್ ಚರಣ್ ನಾಯಕತ್ವದ, ಇನ್ನೂ ಬಿಡುಗಡೆಯಾಗಬೇಕಿರುವ "ಆರ್‌ಆರ್‌ಆರ್" ಚಿತ್ರದಲ್ಲಿ ಸೀತಾ ಪಾತ್ರ ನಿರ್ವಹಿಸಿದ್ದಾರೆ.

ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿನ ಅನುಭವಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದ ಆಲಿಯಾ ಭಟ್, "ಜೂನಿಯರ್ ಎನ್‌ಟಿಆರ್ ಮತ್ತು ರಾಮ್‌ ಚರಣ್ ಇಬ್ಬರೂ ತಮ್ಮೆದುರು ತೆಲುಗಿನಲ್ಲೇ ಮಾತನಾಡುತ್ತಿದ್ದರು. ಆಗೆಲ್ಲ ನನಗೆ ಗೊಂದಲವುಂಟಾಗಿ ಅವರ ಮಾತನ್ನು ಅರ್ಥ ಮಾಡಿಕೊಳ್ಳಲು ಅನುವಾದಕರ ಸಹಾಯಕ್ಕಾಗಿ ಕಾಯಬೇಕಾಗುತ್ತಿತ್ತು" ಎಂದು ಹೇಳಿಕೊಂಡಿದ್ದರು.

ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನ
"ಚಿತ್ರೀಕರಣ ಸಂದರ್ಭದಲ್ಲಿ ನಾನು ತುಂಬಾ ರೋಮಾಂಚಿತಳಾಗಿದ್ದೆ. ಆದರೆ, ನಾನು ಕೊಂಚ ಅಂಜಿಕೊಂಡೂ ಇದ್ದೆ. ಅ ಹೊತ್ತಿಗೆ ನನಗೆ ತೆಲುಗು ಭಾಷೆಯ ಬಗ್ಗೆ ಕೊಂಚ ಮಾತ್ರ ತಿಳಿದಿತ್ತು ಹಾಗೂ ನನಗೆ ನೀಡಲಾಗಿದ್ದ ಭಾಗಗಳನ್ನು ಚೆನ್ನಾಗಿ ಅಧ್ಯಯನ ಮಾಡಿ, ಅವುಗಳ ಸಾಲನ್ನು ಪ್ರತಿ ದಿನ ನನ್ನ ತರಬೇತಿದಾರನೊಂದಿಗೆ ಕುಳಿತುಕೊಂಡು ಉರು ಹೊಡೆಯುತ್ತಿದ್ದೆ. ಆದರೆ, ದಿನದ ಕೊನೆ ಮಾತ್ರ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಅಂತ್ಯವಾಗುತ್ತಿತ್ತೇ ಹೊರತು ತೆಲುಗಿನಲ್ಲಲ್ಲ. ನಾನು ತುಂಬಾ ಅಂಜಿಕೊಂಡಿದ್ದೆ ಮತ್ತು ನನ್ನ ಪಾತ್ರಕ್ಕೆ ಸರಿಯಾದ ಉಚ್ಚಾರಣೆಯ ಮೂಲಕ ನ್ಯಾಯ ಒದಗಿಸಲು ಬಯಸಿದ್ದೆ" ಎಂದೂ ಹೇಳಿಕೊಂಡಿದ್ದರು.

ಟಾಲಿವುಡ್ ನಲ್ಲಿ ದಟ್ಟ ವದಂತಿ
ಚಿತ್ರೀಕರಣ ಮುಕ್ತಾಯಗೊಂಡ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ್ದ ಆಲಿಯಾ ಭಟ್, "ಮುಂದಿನ ದಿನಗಳಲ್ಲಿ ಎಸ್.ಎಸ್.ರಾಜಮೌಳಿ ಹಾಗೂ ತೆಲುಗು ಚಿತ್ರಗಳಲ್ಲಿ ಮತ್ತಷ್ಟು ನಟಿಸುವ ಅವಕಾಶ ದೊರೆಯಲಿದೆ" ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೇ ಜೂನಿಯರ್ ಎನ್‌ಟಿಆರ್ ನಾಯಕತ್ವ ಹಾಗೂ ಸಿವ ಕಾರತಲ ನಿರ್ದೇಶನದ "ಜೂನಿಯರ್30" ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ದಟ್ಟ ವದಂತಿ ಟಾಲಿವುಡ್ ತುಂಬಾ ಹರಿದಾಡುತ್ತಿದೆ.

ಇದನ್ನೂ ಓದಿ: RRR: ಜೂ.ಎನ್​ಟಿಆರ್​, ರಾಮ್​ಚರಣ್​, ಆಲಿಯಾ ಸಂಭಾವನೆ ಕೇಳಿದ್ರೆ ಪ್ರಜ್ಞೆ ತಪ್ಪೋದು ಫಿಕ್ಸ್​!

"ಆರ್‌ಆರ್‌ಆರ್" ಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣ ಮಾಡಿದ್ದು ಇದೇ, ಜನವರಿ 7ರಂದು ಬಿಡುಗಡೆಯಾಗಬೇಕಿತ್ತು‌. ಆದರೆ, ಕೊರೊನಾ ಸೋಂಕು ಮತ್ತೆ ಉಲ್ಬಣಿಸಿರುವುದರಿಂದ ಚಿತ್ರದ ಬಿಡುಗಡೆ ಮತ್ತೆ ಮುಂದೆ ಹೋಗಿದೆ. ಈ ಹಿಂದೆಯೂ ಕೂಡಾ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿತ್ತು.
Published by:vanithasanjevani vanithasanjevani
First published: