Bunty Aur Babli 2 ಸ್ಕ್ರಿಪ್ಟ್ ಬದಲಾಯಿಸಿದ್ದಕ್ಕೆ ಸೈಫ್-ರಾಣಿ ಮುಖರ್ಜಿ ಮಾಡಿದ್ದೇನು ನೋಡಿ..!

ತೋಡ ಪ್ಯಾರ್​ ತೋಡ ಆಮ್ಯಜಿಕ್​. ಹಮ್​ ತುಮ್​, ತಾ ರಾ ರಮ್​ ಪಮ್​ ಹಾಗೂ ಎಲ್​ ಓ ಸಿ ಕಾರ್ಗಿಲ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿರುವ ಸೈಫ್​ ಹಾಗೂ ರಾಣಿ ಮುಖರ್ಜಿ ಈಗ ಮತ್ತೆ ಬಬ್ಲಿ ಔರ್ ಬಂಟಿ 2 ಚಿತ್ರ ಮೂಲಕ ಮತ್ತೆ ತೆರೆ ಮೇಲೆ ಒಂದಾಗಿದ್ದಾರೆ. ಈ ಸಿನಿಮಾದ ಟೀಸರ್​ ರಿಲೀಸ್​ ಆಗಿದ್ದು, ಸಖತ್​ ಕ್ರೇಜಿಯಾಗಿದೆ.

ಬಂಟಿ ಔರ್ ಬಬ್ಲಿ 2 ಸಿನಿಮಾದಲ್ಲಿ ಸೈಫ್ ಅಲಿ ಖಾನ್- ರಾಣಿ ಮುಖರ್ಜಿ

ಬಂಟಿ ಔರ್ ಬಬ್ಲಿ 2 ಸಿನಿಮಾದಲ್ಲಿ ಸೈಫ್ ಅಲಿ ಖಾನ್- ರಾಣಿ ಮುಖರ್ಜಿ

  • Share this:
'ಬಂಟಿ ಔರ್ ಬಬ್ಲಿ’  (Bunty Aur Babli) ಚಿತ್ರ ಬಿಡುಗಡೆಯಾಗಿ ಬರೋಬ್ಬರಿ 16 ವರ್ಷಗಳಾಯ್ತು. ಆ ಸಿನಿಮಾದಲ್ಲಿ ಅಭಿನಯಿಸಿದಂತಹ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ರಾಣಿ ಮುಖರ್ಜಿಯ ನಟನೆ ಇನ್ನೂ ಪ್ರೇಕ್ಷಕರ ಕಣ್ಮುಂದೆ ಬರುತ್ತದೆ ಎಂದು ಹೇಳಬಹುದು. ಆದರೆ ಈಗೇಕೆ ಈ ಚಿತ್ರದ ಬಗ್ಗೆ ಮಾತಾಡುತ್ತಿದ್ದೇವೆ ಅಂತೀರಾ?ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಈಗ ‘ಬಂಟಿ ಔರ್ ಬಬ್ಲಿ 2’ (Bunty Aur Babli 2) ಹೊಸ ಚಿತ್ರ ಬಿಡುಗಡೆ ಮಾಡಲು ಸಜ್ಜಾಗಿದ್ದು, ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್​ ಆಗಿದೆ. ನಟಿ ರಾಣಿ ಮುಖರ್ಜಿ, ನಟ ಸೈಫ್ ಅಲಿ ಖಾನ್ ಜೊತೆಗೆ ಚಿತ್ರದಲ್ಲಿ ಹೊಸಬರಾದ ನಟ ಸಿದ್ಧಾಂತ್ ಚತುರ್ವೇದಿ ಮತ್ತು ನಟಿ ಶಾರ್ವರಿ ಸಹ ನಟಿಸಿದ್ದಾರೆ.

‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲಿ ಬಂಟಿ ಮತ್ತು ಬಬ್ಲಿಯ ಎರಡು ಜೋಡಿಗಳು ಇರಲಿವೆ ಎಂದು ಟೀಸರ್ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಈ ವಿಷಯದಿಂದ ಇಬ್ಬರೂ ದಿಗ್ಗಜ ನಟ-ನಟಿ ಸೈಫ್ ಮತ್ತು ರಾಣಿ ಅವರಿಗೆ ಅಷ್ಟೊಂದು ಸಂತೋಷವಾಗಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸಿದೆ ಎಂದು ಹೇಳಲಾಗುತ್ತಿದೆ.



ನಟ ಸೈಫ್ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರ ಬದಲಿಗೆ ನಟಿಸುತ್ತಿದ್ದು, ನಟಿ ರಾಣಿ ಮುಖರ್ಜಿ ಮೊದಲ ಚಿತ್ರದಿಂದ ತಮ್ಮ ಪಾತ್ರವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆ ಚಿತ್ರದಲ್ಲಿ ಕಾನ್ ಕಲಾವಿದರು ತಮ್ಮ ಕಾನೂನುಬಾಹಿರ ಚಟುವಟಿಕೆಗಳನ್ನು ತ್ಯಜಿಸಿ ಅಮಿತಾಭ್ ಬಚ್ಚನ್ ನಿರ್ವಹಿಸಿದ ಪೋಲೀಸ್ ಅಧಿಕಾರಿ ದಶರಥ ಸಿಂಗ್ ಅಪರಾಧಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುವುದರೊಂದಿಗೆ ಮೊದಲ ಚಿತ್ರವು ಕೊನೆಗೊಂಡಿತ್ತು.

ಹೊಸ ‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲಿ ಸಿದ್ಧಾಂತ್ ಮತ್ತು ಶಾರ್ವರಿ ಜೋಡಿಯು ನಟ ಸೈಫ್ ಮತ್ತು ರಾಣಿ ಜೋಡಿಗೆ ಜೊತೆಯಾಗಿ ಇನ್ನೊಂದು ಜೋಡಿ ಸೇರಿಕೊಂಡಿರುವುದನ್ನು ನೋಡಿದ ಇಬ್ಬರೂ “ಇದು ಏನಾಗುತ್ತಿದೆ ಎಂದು ಕೇಳಿದ್ದಾರಂತೆ”. ಅವರ ಪ್ರಶ್ನೆಗೆ ಚಿತ್ರದ ನಿರ್ದೇಶಕ ವರುಣ್ ಶರ್ಮಾ ಅವರು “ಆದಿ ಸರ್ (ನಿರ್ಮಾಪಕ ಆದಿತ್ಯ ಚೋಪ್ರಾ) ಸ್ಕ್ರಿಪ್ಟ್ ಬದಲಾಯಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Weight Loss Journey: ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್​ ಆಗಿದೆ ಎಂದಿದ್ದ Rani Mukerji

ಆದಿತ್ಯ ಚೋಪ್ರಾ ಅವರನ್ನು ಮದುವೆಯಾಗಿರುವ ರಾಣಿ ನಿರ್ಮಾಪಕರನ್ನು ಕರೆಯಿಸಿ ಎಂದು ಕೇಳಿದರೆ, ಸೈಫ್ ನಿರ್ದೇಶಕರನ್ನು ಅವರ ಮೇಕಪ್ ಕೋಣೆಗೆ ಬಂದು ಭೇಟಿ ಮಾಡಬೇಕೆಂದು ಹೇಳಿದ್ದಾರೆ.

ಈ ಹೊಸ ಚಿತ್ರದ ಬಗ್ಗೆ ಮಾತನಾಡುತ್ತಾ ಸೈಫ್ "ಬಂಟಿ ಔರ್ ಬಬ್ಲಿ 2 ಸಂಪೂರ್ಣವಾಗಿ ಬೇರೆ ಕಥೆಯನ್ನು ಹೊಂದಿದೆ ಮತ್ತು ಇಂದಿನ ಸಮಯಕ್ಕೆ ಅದು ಸೂಕ್ತವಾಗಿದೆ. ಇದು ಒಂದು ಅದ್ಭುತ ಸ್ಕ್ರಿಪ್ಟ್ ಆಗಿದ್ದು, ಅದು ನನ್ನನ್ನು ತಕ್ಷಣವೇ ಸೆಳೆಯಿತು. ಇಡೀ ಕುಟುಂಬವು ಕುಳಿತು ಆನಂದಿಸಲು ಇದು ಒಂದು ಒಳ್ಳೆಯ ಚಿತ್ರವಾಗಲಿದೆ. ಅಲ್ಲದೆ, ಇದು ವಿಭಿನ್ನವಾದ ಪಾತ್ರ ಮತ್ತು ಕಥೆಯನ್ನು ಹೊಂದಿದೆ. ನಾನು ನಿಜವಾಗಿಯೂ ಸ್ಕ್ರಿಪ್ಟ್ ನಲ್ಲಿ ಅದನ್ನೇ ಹುಡುಕುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Kareena Kapoor- Saif Ali Khan ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ

“ರಾಣಿ ಮತ್ತು ನಾನು ಯಾವಾಗಲೂ ಪರಸ್ಪರ ಕೆಲಸ ಮಾಡುವಾಗ ಸಾಕಷ್ಟು ಮೋಜು ಮಾಡಿದ್ದೇವೆ” ಎಂದು ಸೈಫ್ ಹೇಳಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಚಿತ್ರದ ಬಿಡುಗಡೆಯನ್ನು ಈ ಹಿಂದೆ ಮುಂದೂಡಲಾಗಿತ್ತು. ಈ ಚಿತ್ರ ನವೆಂಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಬಂಟಿ ಔರ್ ಬಬ್ಲಿ 2’ ಚಿತ್ರವು ಸುಮಾರು 12 ವರ್ಷಗಳ ನಂತರ ಸೈಫ್ ಮತ್ತು ರಾಣಿಯನ್ನು ತೆರೆಯ ಮೇಲೆ ಮತ್ತೆ ಒಂದಾಗಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ.
First published: