‘Bunty Aur Babli 2’ ಚಿತ್ರದ ಮೊದಲ ಹಾಡು ಬಿಡುಗಡೆ.. ಇದರಲ್ಲಿರುವ ವಿಶೇಷತೆ ಕಂಡು ಹಿಡಿಯಿರಿ ನೋಡೋಣ

Bunty Aur Babli 2 ಚಿತ್ರತಂಡವು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದು, ಹಾಡು ‘ಟ್ಯಾಟೂ ವಾಲಿಯೇ’ ಎಂಬ ಶೀರ್ಷಿಕೆ ಹೊಂದಿದೆ. ಈ ಹಾಡಿನಲ್ಲಿ ನಟ ಸೈಫ್ ಅಲಿ ಖಾನ್, ನಟಿ ರಾಣಿ ಮುಖರ್ಜಿ, ಇನ್ನೊಬ್ಬ ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಮತ್ತು ನಟಿ ಶರ್ವರಿ (Sharvari ) ಚಿತ್ರದ ಎಲ್ಲಾ ನಾಲ್ಕು ಮುಖ್ಯ ಪಾತ್ರದಲ್ಲಿರುವವರು ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿದೆ.

Bunty Aur Babli 2

Bunty Aur Babli 2

 • Share this:
  ಮೊನ್ನೆ ತಾನೇ ಯಶ್ ರಾಜ್ ಫಿಲ್ಮ್ಸ್ ಮುಂಬರುವ ಚಲನಚಿತ್ರ ‘ಬಂಟಿ ಔರ್ ಬಬ್ಲಿ 2’ (Bunty Aur Babli 2) ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ಮಾಪಕರು ಬದಲಾಯಿಸಿದ್ದಾರೆ ಎಂದು ಚಿತ್ರದ ನಟ ಸೈಫ್ ಅಲಿ ಖಾನ್ (Saif Ali Khan)  ಮತ್ತು ನಟಿ ರಾಣಿ ಮುಖರ್ಜಿ (Rani Mukerji) ಕೋಪಗೊಂಡಿದ್ದು ನಮಗೆಲ್ಲಾ ತಿಳಿದೇ ಇದೆ. ಆದರೆ ಈಗ ಮತ್ತೊಮ್ಮೆ ಈ ಚಿತ್ರವು ಸುದ್ದಿಯಲ್ಲಿದೆ, ಆದರೆ ಈ ಬಾರಿ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿದೆ.‘ಬಂಟಿ ಔರ್ ಬಬ್ಲಿ 2’ ಚಿತ್ರತಂಡವು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದು, ಹಾಡು ‘ಟ್ಯಾಟೂ ವಾಲಿಯೇ’ ಎಂಬ ಶೀರ್ಷಿಕೆ ಹೊಂದಿದೆ. ಈ ಹಾಡಿನಲ್ಲಿ ನಟ ಸೈಫ್ ಅಲಿ ಖಾನ್, ನಟಿ ರಾಣಿ ಮುಖರ್ಜಿ, ಇನ್ನೊಬ್ಬ ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಮತ್ತು ನಟಿ ಶರ್ವರಿ (Sharvari ) ಚಿತ್ರದ ಎಲ್ಲಾ ನಾಲ್ಕು ಮುಖ್ಯ ಪಾತ್ರದಲ್ಲಿರುವವರು ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿದೆ.

  ಈ ಚಿತ್ರದ ಪ್ರಚಾರ ಹಾಡಿನಲ್ಲಿ ಈ ನಾಲ್ವರು ನಟರು ಮನಮೋಹಕ ಮತ್ತು ಹೊಳಪಿನ ಬಟ್ಟೆಗಳನ್ನು ತೊಟ್ಟು ಹೆಜ್ಜೆ ಹಾಕಿದ್ದಾರೆ. ಅವರು ಶಂಕರ್–ಎಹಸಾನ್–ಲಾಯ್ ಅವರ ಪೆಪ್ಪಿ ಬೀಟ್‌ಗಳಿಗೆ ಸರಿಯಾಗಿ ಹೊಂದುವಂತೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ತಾವು ಹಾಕಿಸಿಕೊಂಡ ಟ್ಯಾಟೂಗಳನ್ನು ತೋರಿಸುತ್ತಾರೆ. ಈ ಹಾಡನ್ನು ಗಾಯಕಿ ನೇಹಾ ಕಕ್ಕರ್ ಮತ್ತು ಗಾಯಕರಾದ ಪರ್ದೀಪ್ ಸ್ರಾನ್ ಹಾಡಿದ್ದಾರೆ.

  ಈ ಹಾಡಿನಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನು ಅಂತೀರಾ..? ನಟಿ ರಾಣಿಯ ಉಡುಗೆಯು 1998ರ ‘ಕುಚ್ ಕುಚ್ ಹೋತಾ ಹೈ’ ಚಿತ್ರದಲ್ಲಿ ಧರಿಸಿದ್ದ ಬೆಳ್ಳಿ ಬಣ್ಣದ ಉಡುಪನ್ನು ನಿಮಗೆ ನೆನಪಿಸಬಹುದು. ಅವರು ಶಾರುಖ್ ಖಾನ್ ಮತ್ತು ಕಾಜೋಲ್‌ರೊಂದಿಗೆ ‘ಕೋಯಿ ಮಿಲ್ ಗಯಾ’ ಎಂಬ ಹಾಡಿಗೆ ಇದೇ ರೀತಿಯ ಉಡುಪಿನಲ್ಲಿ ಹೆಜ್ಜೆ ಹಾಕಿದ್ದರು.

  ಸುಮಾರು 23 ವರ್ಷವಾಯ್ತು ‘ಕುಚ್ ಕುಚ್ ಹೋತಾ ಹೈ’ ಚಿತ್ರ ಮಾಡಿ, ಈಗಲೂ ರಾಣಿ ಹಾಗೆಯೇ ಆ ಉಡುಪನ್ನು ಧರಿಸಿ ಹೆಜ್ಜೆ ಹಾಕಿರುವುದಕ್ಕೆ ಯೂಟ್ಯೂಬ್‌ನಲ್ಲಿ ತಮ್ಮ ಅಭಿಮಾನಿಗಳಿಂದ ಪ್ರಶಂಸೆ ಗಳಿಸಿದ್ದಾರೆ. "ರಾಣಿಗೆ ಇನ್ನೂ ಒಂದು ದಿನವೂ ಹೆಚ್ಚಿಗೆ ವಯಸ್ಸಾಗಿಲ್ಲ. ಎಲ್ಲರನ್ನು ಬೆರಗುಗೊಳಿಸುವಂತೆ ಕಾಣುತ್ತಾರೆ" ಎಂದು ಒಬ್ಬರು ಬರೆದಿದ್ದಾರೆ. "ರಾಣಿ ನಿಜವಾಗಿಯೂ ರಾಣಿ, ಅವಳ ವಯಸ್ಸು ಕೇವಲ ಒಂದು ಸಂಖ್ಯೆ" ಎಂದು ಇನ್ನೊಬ್ಬರು ಬರೆದಿದ್ದಾರೆ.

  Read Also: Samantha Ruth Prabhu: ಹೆಣ್ಣು ಮಕ್ಕಳನ್ನು ಹೆತ್ತ ಪೋಷಕರಿಗೆ ಸಮಂತಾ ನೀಡಿದ್ರು ಹೀಗೊಂದು ಸಂದೇಶ!  "ಸಿದ್ಧಾಂತ್ ಸಹ ಉತ್ತಮ ಡ್ಯಾನ್ಸರ್, ಅವರ ಡ್ಯಾನ್ಸ್ ನೋಡಿ ನಾನು ತುಂಬಾನೇ ಪ್ರಭಾವಿತನಾಗಿದ್ದೇನೆ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

  ಹಾಡಿನ ಬಗ್ಗೆ ಮಾತನಾಡಿದ ಸೈಫ್, "ಟ್ಯಾಟೂ ವಾಲಿಯೇ ಜನರು ನೋಡುವ ಮೊದಲ ಹಾಡು. ನಾವು ನಿರ್ಧರಿಸಿದಂತೆ ದೊಡ್ಡ ಪ್ರಮಾಣದಲ್ಲಿ ಈ ಹಾಡನ್ನು ಮಾಡಿದ್ದೇವೆ. ತ್ವರಿತವಾಗಿ ಚಾರ್ಟ್ ಬಸ್ಟರ್ ಆಗಬಹುದಾದ ಹಾಡನ್ನು ಚಿತ್ರೀಕರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ದುರದೃಷ್ಟವಶಾತ್, ಮಾರ್ಚ್ 2020ರಲ್ಲಿ ನಾವು ಚಿತ್ರೀಕರಣ ಮಾಡಬೇಕಾಗಿತ್ತು, ಆದರೆ ಅದೇ ದಿನ ರಾಷ್ಟ್ರವು ಲಾಕ್‌ಡೌನ್ ಆಯಿತು" ಎಂದು ಹೇಳಿದರು.

  Read Also: Kareena kapoor: ಜೆಹ್ ಹುಟ್ಟಿದಾಗ ನನಗೆ 40 ವರ್ಷ, ತಡವಾಗಿ ತಾಯಿಯಾಗುವುದು ತಪ್ಪಲ್ಲ ಎಂದ ಕರೀನಾ ಕಪೂರ್

  ರಾಣಿ ಸಹ ಇದರ ಬಗ್ಗೆ ಮಾತಾಡುತ್ತಾ "ಆ ದಿನ ನನಗೆ ಇಂದಿಗೂ ಸ್ಪಷ್ಟವಾಗಿ ನೆನಪಿದೆ. ಟ್ಯಾಟೂ ವಾಲಿಯೇ ಚಿತ್ರೀಕರಣಕ್ಕಾಗಿ ಸೆಟ್‌ಗೆ ಮರಳಲು ನಾವು ತುಂಬಾ ಉತ್ಸುಕರಾಗಿದ್ದೇವು. ಸಾಕಷ್ಟು ಪ್ರಶ್ನೆಗಳು ಇದ್ದವು, ಚಿತ್ರೀಕರಣ ಸುರಕ್ಷಿತವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಬಹಳಷ್ಟು ವಿಷಯಗಳು ನಮ್ಮ ಮನಸ್ಸಿನಲ್ಲಿದ್ದವು. ಆದರೆ ಯಶ್ ರಾಜ್ ಫಿಲ್ಮ್ಸ್ ಇಡೀ ಜಾಗವನ್ನು ಉತ್ತಮವಾಗಿ ಸ್ಯಾನಿಟೈಸ್ ಮಾಡಿದ್ದರು, ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಮತ್ತು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು” ಎಂದು ಹೇಳುತ್ತಾರೆ.
  First published: