• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Prakash Passes Away: ಪ್ರಕಾಶ್ ಜೊತೆಗೆ ಬುಲೆಟ್​ ಸೇರಿಸಿದ್ದು ಕ್ರೇಜಿ ಮಾಮ ರವಿಚಂದ್ರನ್​; ಹಿಂದಿನ ಕತೆ ಇಲ್ಲಿದೆ ​..!

Prakash Passes Away: ಪ್ರಕಾಶ್ ಜೊತೆಗೆ ಬುಲೆಟ್​ ಸೇರಿಸಿದ್ದು ಕ್ರೇಜಿ ಮಾಮ ರವಿಚಂದ್ರನ್​; ಹಿಂದಿನ ಕತೆ ಇಲ್ಲಿದೆ ​..!

ಬುಲೆಟ್​ ಪ್ರಕಾಶ್​ ಹಾಗೂ ರವಿಚಂದ್ರನ್​

ಬುಲೆಟ್​ ಪ್ರಕಾಶ್​ ಹಾಗೂ ರವಿಚಂದ್ರನ್​

Bullet Prakash: 'ಹುಟ್ಟೋದ್ಯಾಕೆ ಸಾಯೋದ್ಯಾಕೆ....' ಹಾಡಿನ ಚಿತ್ರೀಕರಣಕ್ಕೆ3 ಸಾವಿರ ಮಕ್ಕಳು ನಟಿಸಿದ್ದು, ಇದರಲ್ಲಿ ಬುಲೆಟ್​ ಪ್ರಕಾಶ್​ ಸಹ ಇದ್ದರು. ಆಗಲೇ ಚಿತ್ರೀಕರಣ ಮುಗಿದ ನಂತರ ಬುಲೆಟ್​ ಪ್ರಕಾಶ್​ ರವಿಚಂದ್ರನ್​ ಅವರ ಬಳಿ ನಟಿಸೋಕೆ ಅವಕಾಶ ಕೊಡುವಂತೆ ಕೇಳಿದ್ದರಂತೆ. (Photos Credit: Bullet Prakash Facebook)

ಮುಂದೆ ಓದಿ ...
  • Share this:

- ಅನಿತಾ ಈ, 


ಬುಲೆಟ್​ ಪ್ರಕಾಶ್​ ಅವರಿಗೆ ಮೊದಲು ಅಭಿನಯಿಸೋಕೆ ಅವಕಾಶ ಕೊಟ್ಟಿದ್ದೇ ಕ್ರೇಜಿ ಸ್ಟಾರ್​​ ರವಿಚಂದ್ರನ್​. ಅವರ ಕನಸಿನ ಕೂಸಾಗಿ 'ಶಾಂತಿ ಕ್ರಾಂತಿ' ಚಿತ್ರದಲ್ಲಿ ಬುಲೆಟ್​ ಪ್ರಕಾಶ್​ ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ನಟಿಸಿದ್ದು. 


ಹೌದು, ರವಿಚಂದ್ರನ್​ ಅವರ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ 1991 ಅಕ್ಟೋಬರ್ 19ರಂದು ಬಿಡುಗಡೆಯಾಗಿತ್ತು. ಆ ಕಾಲಕ್ಕೆ 10 ಕೋಟಿ ಬಜೆಟ್​ನಲ್ಲಿ ನಿರ್ಮಿಸಿದ್ದ ಈ ಸಿನಿಮಾಗೆ  ಹಂಸಲೇಖ ಸಂಗೀತ ನೀಡಿದ್ದು, ಆಗಿನ ದೊಡ್ಡ ಮ್ಯೂಸಿಕಲ್​ ಹಿಟ್ ಆಗಿತ್ತು. ಈ ಸಿನಿಮಾದ ಹಾಡಿನಲ್ಲಿ ಪ್ರಕಾಶ್​ ನಟಿಸಿದ್ದಾರೆ. ಈ ಸಿನಿಮಾ ಆಗಲೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ತೆರೆ ಕಂಡಿತ್ತು.
ಈ ಸಿನಿಮಾದಲ್ಲಿ 'ಹುಟ್ಟೋದ್ಯಾಕೆ ಸಾಯೋದ್ಯಾಕೆ....' ಹಾಡಿನ ಚಿತ್ರೀಕರಣದಲ್ಲಿ 3 ಸಾವಿರ ಮಕ್ಕಳು ನಟಿಸಿದ್ದು, ಇದರಲ್ಲಿ ಬುಲೆಟ್​ ಪ್ರಕಾಶ್​ ಸಹ ಇದ್ದರು. ಆಗಲೇ ಚಿತ್ರೀಕರಣ ಮುಗಿದ ನಂತರ ಬುಲೆಟ್​ ಪ್ರಕಾಶ್​ ರವಿಚಂದ್ರನ್​ ಅವರ ಬಳಿ ನಟಿಸೋಕೆ ಅವಕಾಶ ಕೊಡುವಂತೆ ಕೇಳಿದ್ದರಂತೆ. ಆಗ ಅವರು ಡಿಗ್ರಿ ಮುಗಿಸಿ ಬಾ ಎಂದಿದ್ದರಂತೆ. ನಂತರದಲ್ಲಿ ರವಿಚಂದ್ರನ್​ ಅವರೊಂದಿಗೆ 9 ಸಿನಿಮಾಗಳಲ್ಲಿ ಬುಲೆಟ್​ ನಟಿಸಿದರು.


ಬುಲೆಟ್​ ಎಂದ ಹೆಸರು ಕೊಟ್ಟ ರವಿಚಂದ್ರನ್​


ಈಶ್ವರಿ ಬಾಬು ಅವರಿಂದ 'ಓ ನನ್ನ ನಲ್ಲೆ' ಸಿನಿಮಾದಲ್ಲಿ ರವಿಚಂದ್ರನ್​ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು ಪ್ರಕಾಶ್​ ಅವರಿಗೆ. ಪರಿಚಯ ಇದ್ದ ಕಾರಣಕ್ಕೆ ಹೆಚ್ಚಾಗಿ ರವಿ ಮಾಮನ ಜೊತೆಯಲ್ಲೇ ಇರುತ್ತಿದ್ದ ಪ್ರಕಾಶ್​ಗೆ ಒಮ್ಮೆ ರವಿಚಂದ್ರನ್​, "ಏ ದಡಿಯಾ ಬಾರೋ ಇಲ್ಲಿ... ನಿನ್ನೆ ಹೆಸರಿನ ಮುಂದೆ ಅಥವಾ ಹಿಂದೆ ಬುಲೆಟ್​ ಅನ್ನೋ ಹೆಸರು ಸೇರಿಸು" ಅಂದ್ರಂತೆ. ಆಗಿನಿಂದ ಕಾಟನ್​ಪೇಟೆ ಪ್ರಕಾಶ ಬುಲೆಟ್​ ಪ್ರಕಾಶ ಆಗಿದ್ದು.

Hot Photos Of Sunny Leone: ಗುರಾಯಿಸಿ ಪರವಾಗಿಲ್ಲ ಎಂದ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​..!

Published by:Anitha E
First published: