Rachita Ram: ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿ ಪಯಣಕ್ಕೆ 9ರ ಸಂಭ್ರಮ! ಖುಷಿಯಲ್ಲಿ ಮಿಂದೆದ್ದ ರಚ್ಚು

ರಚಿತಾ ರಾಮ್ ಅವರ ಚಂದನವನದ ಪಯಣಕ್ಕೀಗ 9 ವರ್ಷ. ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ (Dimple Queen) ಎಂದೇ ಖ್ಯಾತಿ ಪಡೆದಿರುವ ರಚಿತಾ, ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ರಚಿತಾ ರಾಮ್​​

ರಚಿತಾ ರಾಮ್​​

 • Share this:
  2013ರ ಮೇ 10ರಂದು ಬಿಡುಗಡೆಯಾಗಿದ್ದ 'ಬುಲ್‌ಬುಲ್‌' (Bulbul) ಸಿನಿಮಾ ಮುಖಾಂತರ ನಾಯಕಿಯಾಗಿ ರಚಿತಾ ರಾಮ್‌ (Rachitha Ram) ಸ್ಯಾಂಡಲ್‌ವುಡ್​ಗೆ (Sandalwood) ಹೆಜ್ಜೆ ಇಟ್ಟಿದ್ದರು. ರಚಿತಾ ಅವರ ಚಂದನವನದ ಪಯಣಕ್ಕೀಗ 9 ವರ್ಷ. ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ (Dimple Queen) ಎಂದೇ ಖ್ಯಾತಿ ಪಡೆದಿರುವ ರಚಿತಾ, ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಂದ್ಯಾ ರಾಮ್ (Bindhya Ram), ಇದು ರಚಿತಾ ರಾಮ್ ಅವರ ಮೂಲ ಹೆಸರು. ಇದು ಬದಲಾದದ್ದು 2013ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬುಲ್​​​​ಬುಲ್​​​​​​ ಸಿನಿಮಾ ಬಳಿಕ. ಈ ಸಿನಿಮಾ ಬಳಿಕ ಬಿಂದ್ಯಾ ರಚಿತಾ ರಾಮ್ ಆದ್ರು. ಹೆಸರಷ್ಟೇ ಅಲ್ಲ, ಅವರ ಸಿನಿಮಾ ಬದುಕೂ ಇಲ್ಲಿಂದ ಬದಲಾಯಿತು.

  ಲೆಕ್ಕ ಹಾಕಿದರೆ ಸದ್ಯ ಹತ್ತಕ್ಕೂ ಹೆಚ್ಚು ಸಿನಿಮಾಗಳು ರಚಿತಾ ಕೈಯಲ್ಲಿವೆ. ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿಯೂ ರಚಿತಾ ಬ್ಯುಸಿಯಾಗಿದ್ದಾರೆ. ಟ್ವೀಟ್‌ ಮೂಲಕ ಈ ಪಯಣವನ್ನು ನೆನಪಿಸಿಕೊಂಡಿರುವ ರಚಿತಾ, 'ಸುದೀರ್ಘ ಪಯಣದ ಮೊದಲ ಹೆಜ್ಜೆ ಬುಲ್‌ಬುಲ್‌. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರಋಣಿ' ಎಂದಿದ್ದಾರೆ.  The first step in a long journey!

  Thank you for 9years!💕#bulbul♥️ #thoogudeepa🙏🏻#gratitudeandlovealways#manymoretocome✌️


  ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರಋಣಿಯಾಗಿರುತ್ತೇವೆ!
  ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ.🙏🏻♥️@dasadarshan BOSS pic.twitter.com/EDv4unhWBe

  — Rachita Ram (@RachitaRamDQ) May 10, 2022

  ಸದ್ಯಕ್ಕೆ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಸಿನಿಮಾ

  ನಟ ಡಾಲಿ ಧನಂಜಯ್​​​​ಗೆ ಜೋಡಿಯಾಗಿ ಮಾನ್ಸೂನ್​​​ ರಾಗ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಆ.12ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

  ಜೊತೆಗೆ ರಚಿತಾ ರಾಮ್ ನಟ ನೀನಾಸಂ ಸತೀಶ್‌ ಜೊತೆಗೆ 'ಮ್ಯಾಟ್ನಿ',  ಸೇರಿದಂತೆ 'ಲವ್‌ ಮಿ ಆರ್‌ ಹೇಟ್‌ ಮಿ', 'ಶಬರಿ' ಸಿನಿಮಾಗಳಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಅವರ ಸಿನಿಮಾ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿಯೂ ರಚಿತಾ ಬ್ಯುಸಿಯಾಗಿದ್ದಾರೆ. ನಟ 'ಡಾಲಿ' ಧನಂಜಯ್‌ ಜೋಡಿಯಾಗಿ ರಚಿತಾ ನಟಿಸಿರುವ 'ಮಾನ್ಸೂನ್‌ ರಾಗ' ಆ.12ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 'ಕ್ರಾಂತಿ' ಸಿನಿಮಾ ಚಿತ್ರೀಕರಣದಲ್ಲೂ ರಚಿತಾ ತೊಡಗಿಸಿಕೊಂಡಿದ್ದಾರೆ.

  ಇದನ್ನೂ ಓದಿ: Mansi Joshi: ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ಮಾನ್ಸಿ ಜೋಶಿ ಈಗ ಕಿರುತೆರೆಯಲ್ಲಿ ಫುಲ್ ಬ್ಯುಸಿ

  2019 ರಲ್ಲಿ ರಚಿತಾ ರಾಮ್ ಕೈಯಲ್ಲಿ ಇಷ್ಟೊಂದು ಸಿನಿಮಾಗಳು ಇರಲಿಲ್ಲ ನಿಖಿಲ್ ಕುಮಾರ್ ಜೊತೆಗಿನ ಸೀತಾರಾಮ ಕಲ್ಯಾಣ ಬ್ಲಾಕ್ಬಸ್ಟರ್ ಹಿಟ್ ಆಗಿ ಹೊರಹೊಮ್ಮಿತು.  ಶ್ರೀಮುರಳಿ ಎದುರು ಭರಾಟೆ ಚಿತ್ರದ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಂತರ ಆಯುಷ್ಮಾನ್ ಭಾವ ಚಿತ್ರದಲ್ಲಿ ಶಿವರಾಜ್‌ಕುಮಾರ್ ಎದುರು ನಟಿಸಿದರು.

  ಇದನ್ನೂ ಓದಿ: Sai Pallavi: ಭಾಷೆ ಬರದಿದ್ರೂ ಕನ್ನಡ ಕಲಿತು ಡಬ್​ ಮಾಡಿದ ಸಾಯಿ ಪಲ್ಲವಿ! 'ಆ' ನಟಿಗೆ ಗೊತ್ತಿದ್ರೂ ಡವ್​ ಮಾಡ್ತಾರೆ ಎಂದು ಟ್ರೋಲ್

  ಒಂದು ವರ್ಷದ ಅಂತರದ ನಂತರ 2021 ರಲ್ಲಿ ಅವರು ರಮೇಶ್ ಅರವಿಂದ್ ನಿರ್ದೇಶನದ 100 ನಲ್ಲಿ ರಮೇಶ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸರಾಸರಿ ಗಳಿಕೆ ಮಾಡಿತು.  ಹಿಂದಿನ ವರ್ಷದಲ್ಲಿ ರಚಿತಾ ರಾಮ್ ಅವರ ಮುಂದಿನ ಸಿನಿಮಾ ಶಂಕರ್ ಅವರ ಲವ್ ಯೂ ರಚ್ಚು,  ಇಲ್ಲಿ  ರಚಿತಾ ರಾಮ್ ಅವರು  ಅಜಯ್ ರಾವ್ ಎದುರು ಜೋಡಿಯಾದರು. ಅನೇಕ ವಿವಾದಗಳೊಂದಿಗೆ ಚಲನಚಿತ್ರವು ಪ್ರೇಕ್ಷಕರಿಂದ ಕಳಪೆ ಪ್ರತಿಕ್ರಿಯೆಯೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿತ್ತು. ಆದರೆ ಮುಂದೆ ಬಿಡುಗಡೆಯಾಗಲಿರುವ ರಚಿತಾ ರಾಮ್ ಅವರ ಸಿನಿಮಾಗಳು ಭರವಸೆ ಮೂಡಿಸಿವೆ.
  Published by:Swathi Nayak
  First published: