Pushpa ಸಿನಿಮಾಗೆ KGF​ ಕಂಪೇರ್​ ಮಾಡಿದ್ದವನಿಂದ ನೀಲ್​ ಭೇಟಿ, ಇವಾಗ ಏನ್​ ಹೇಳ್ತಿಯೋ 'ಬಳೆಪೇಟೆ ಬಳೆಗಾರ' ಎಂದ ಫ್ಯಾನ್ಸ್​

ದಕ್ಷಿಣ ಭಾರತದ ಹಲವು ಸ್ಟಾರ್ ನಟರು, ನಿರ್ದೇಶಕರು 'ಕೆಜಿಎಫ್ 2' ಸಿನಿಮಾವನ್ನು ಕೊಂಡಾಡಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ರಾಕಿ ಭಾಯ್​ ಅಬ್ಬರ ಕಂಡು ದಂಗಾಗಿದ್ದಾರೆ. ಪ್ರಶಾಂತ್​ ನೀಲ್​ ಮೇಕಿಂಗ್ ಕಂಡು ಮೂಕ ವಿಸ್ಮಿತರಾಗಿದ್ದಾರೆ. ಆದರೆ, ಈ ಹಿಂದೆ ತೆಲುಗು ನಿರ್ದೇಶಕನೊಬ್ಬ ಕೆಜಿಎಫ್​ ಸಿನಿಮಾ ಬಗ್ಗೆ ಹಗುರವಾಗಿ ಮಾತನಾಡಿದ್ದ.

ಪ್ರಶಾಂತ್​ ನೀಲ್​, ಬುಚ್ಚಿಬಾಬು

ಪ್ರಶಾಂತ್​ ನೀಲ್​, ಬುಚ್ಚಿಬಾಬು

  • Share this:
ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆ ರಾಕಿಭಾಯ್ (Rocky Bhai) ಸಿನಿಮಾ ಮಾಡಿದೆ. ಬರೋಬ್ಬರಿ ಒಂದು ಸಾವಿರ ಕೋಟಿ ಕಲೆಕ್ಷನ್ (1000 Crore Collection) ಮಾಡೋ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಅದರೊಂದಿಗೆ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೇಕ್ಷನ್ ಮಾಡುತ್ತಿದ್ದು, ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ. ಈ ಯಶಸ್ಸಿನ ಮುಖ್ಯ ಸೂತ್ರದಾರ ಪ್ರಶಾಂತ್​ ನೀಲ್​ ಎಂದರೆ ತಪ್ಪಾಗಲ್ಲ.ಈ ಸಿನಿಮಾದ ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ಯಾವ ಮಟ್ಟಕ್ಕೆ ಹೆಸರು ಮಾಡುತ್ತಿದ್ದೆ ಅಂದರೆ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ಕೆಜಿಎಫ್​ ಬಗ್ಗೆ ಕಿಂಡಲ್ ಮಾಡಿದ್ದ ಬುಚ್ಚಿಬಾಬು!

ಬಾಲಿವುಡ್‌ನ ಸ್ಟಾರ್‌ಗಳು, ನಿರ್ದೇಶಕರು ಸೇರಿದಂತೆ ದಕ್ಷಿಣ ಭಾರತದ ಹಲವು ಸ್ಟಾರ್ ನಟರು, ನಿರ್ದೇಶಕರು 'ಕೆಜಿಎಫ್ 2' ಸಿನಿಮಾವನ್ನು ಕೊಂಡಾಡಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ರಾಕಿ ಭಾಯ್​ ಅಬ್ಬರ ಕಂಡು ದಂಗಾಗಿದ್ದಾರೆ. ಪ್ರಶಾಂತ್​ ನೀಲ್​ ಮೇಕಿಂಗ್ ಕಂಡು ಮೂಕ ವಿಸ್ಮಿತರಾಗಿದ್ದಾರೆ. ಆದರೆ, ಈ ಹಿಂದೆ ತೆಲುಗು ನಿರ್ದೇಶಕನೊಬ್ಬ ಕೆಜಿಎಫ್​ ಸಿನಿಮಾ ಬಗ್ಗೆ ಹಗುರವಾಗಿ ಮಾತನಾಡಿದ್ದ. ಆದರೆ, ಈಗ ಕೆಜಿಎಫ್​ 2 ನೋಡಿ ಅವನಿಗೂ ಬುದ್ಧಿ ಬಂದಿದೆ ಎಂದು ಅನಿಸುತ್ತದೆ. ಹೌದು, ತೆಲುಗು ನಿರ್ದೇಶಕ ಬುಚ್ಚಿ ಬಾಬು  ಸೇನಾ ಕೆಜಿಎಫ್​ ಸಿನಿಮಾವನ್ನು ಪುಷ್ಪ ಸಿನಿಮಾಗೆ ಕಂಪೇರ್​ ಮಾಡಿದ್ದ.

ಪ್ರಶಾಂತ್​ ನೀಲ್ ಭೇಟಿಯಾದ ಬುಚ್ಚಿಬಾಬು!

ತೆಲುಗಿನ 'ಉಪ್ಪೆನ' ಹೆಸರಿನ ಸಿನಿಮಾ ಮಾಡಿರುವ ನಿರ್ದೇಶಕ ಬುಚ್ಚಿಬಾಬು ಸನಾ, ಸನಾಕೆಲವು ತಿಂಗಳ ಹಿಂದೆ 'ಕೆಜಿಎಫ್' ಸಿನಿಮಾದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದ ಆದರೆ ಇಂದು ಆತನೇ 'ಕೆಜಿಎಫ್' ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಿದ್ದಾರೆ. ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬುಚ್ಚಿಬಾಬು ಸನಾ, ತಾನು 'ಪುಷ್ಪ' ಸಿನಿಮಾವನ್ನು ಈಗಾಗಲೇ ನೋಡಿದ್ದು, ''ಪುಷ್ಪ' ಸಿನಿಮಾ 10 'ಕೆಜಿಎಫ್'ಗೆ ಸಮ' ಎಂದಿದ್ದರು.

ಇದನ್ನೂ ಓದಿ: KGF 2 ಸಕ್ಸಸ್​ ಬೆನ್ನಲ್ಲೇ ಸಿಕ್ತು ಪ್ರಶಾಂತ್​ ನೀಲ್​ ನೆಕ್ಸ್ಟ್​ ಸಿನಿಮಾ ಬಿಗ್​ ಅಪ್​ಡೇಟ್​! ಇವ್ರೇ ನೋಡಿ ಹೀರೋ

ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದ ಬುಚ್ಚಿಬಾಬು!

'ಕೆಜಿಎಫ್' ಸಿನಿಮಾ ಬಗ್ಗೆ ಬುಚ್ಚಿಬಾಬು ಕಮೆಂಟ್ ಮಾಡಿದ ಬಳಿಕ, ಬುಚ್ಚಿಬಾಬುವನ್ನು 'ಕೆಜಿಎಫ್' ಸಿನಿಮಾ ಅಭಿಮಾನಿಗಳು ವಿಪರೀತ ಟ್ರೋಲ್ ಮಾಡಿದ್ದರು. ಬುಚ್ಚಿಬಾಬು, ಸಾಮಾಜಿಕ ಜಾಲತಾಣದಲ್ಲಿ ಏನೇ ಪೋಸ್ಟ್ ಹಾಕಿದರೂ ಯಶ್ ಹಾಗೂ 'ಕೆಜಿಎಫ್' ಅಭಿಮಾನಿಗಳು ಬುಚ್ಚಿಬಾಬು ಕಾಲೆಳೆಯುತ್ತಿದ್ದರು. ಇದೀಗ  ಬುಚ್ಚಿಬಾಬು, ಪ್ರಶಾಂತ್ ನೀಲ್ ಅನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಬುಚ್ಚಿಗಾಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಸಿನಿಮಾ ನೋಡಿ ಕೊಂಡಾಡಿದ ಕಿಚ್ಚ! 'ಆ' ನಟನ ಪರ್ಫಾಮೆನ್ಸ್​ಗೆ ಸುದೀಪ್​ ಫಿದಾ

ಜ್ಯೂ. ಎನ್​ಟಿಆರ್​ಗೆ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ ಬುಚ್ಚಿಬಾಬು!

ಕೆಜಿಎಫ್​ 2 ಸಿನಿಮಾ ಬಳಿಕ ಪ್ರಶಾಂತ್​ ಸಿನಿಮಾ ಯಾರ ಜೊತೆ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಪ್ರಶಾಂತ್​ ನೀಲ್​ ಮುಂದಿನ ಸಿನಿಮಾ ಜ್ಯೂ ಎನ್​ಟಿಆರ್​ ಎಂಬುಂದು ಗೊತ್ತಾಗಿದೆ. ಜೊತೆಗೆ ಅತ್ತ ಬುಚ್ಚಿಬಾಬು ಕೂಡ ಜ್ಯೂ ಎನ್​ಟಿಆರ್​ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರ ಡೇಟ್ ಕ್ಲ್ಯಾಶ್​ ಆಗದಂತೆ ಇಬ್ಬರು ಸೇರಿ ಚರ್ಚೆ ಮಾಡುತ್ತಿದ್ದಾರೆ.
Published by:Vasudeva M
First published: