Samantha 'ಊ ಅಂಟಾವಾ...' ಐಟಂ ಹಾಡಿಗೆ BTS Boys ಕುಣಿದಿರೋದು ನೋಡಿ, ವಿಡಿಯೋ ವೈರಲ್!

ಈ ಹಿಟ್ ತೆಲುಗು ಹಾಡಿಗೆ ಈಗ ಸೌತ್ ಕೊರಿಯಾದ ಬಿಟಿಎಸ್ ಬ್ಯಾಂಡ್ ಸದಸ್ಯರು ಡ್ಯಾನ್ಸ್ ಮಾಡಿ ಆ ವಿಡಿಯೋವನ್ನು ಕ್ವಾಲಿಟೀಪೋಸ್ಟ್ಸ್ ಎಂಬ ಜನಪ್ರಿಯ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿ ಕೊಂಡಿದ್ದಾರೆ.

BTS-ಸಮಂತಾ

BTS-ಸಮಂತಾ

  • Share this:
ಇತ್ತೀಚೆಗೆ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿ, ಯೂಟ್ಯೂಬ್‌ನಲ್ಲಿ ಕೆಲವೇ ವಾರಗಳಲ್ಲಿ 100 ಮಿಲಿಯನ್ (100 Million Views) ವೀಕ್ಷಣೆ ಪಡೆದು ತುಂಬಾನೇ ಜನಪ್ರಿಯವಾದ ಹಾಡು ಎಂದರೆ ಅದು ಪುಷ್ಪ: ದಿ ರೈಸ್’ (Pushpa: The Rise)‌ ಚಿತ್ರದಲ್ಲಿ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಮಾದಕವಾಗಿ ಡ್ಯಾನ್ಸ್ ಮಾಡಿದ ‘ಉ ಅಂಟಾವಾ ಮಾವ ಊ ಊ ಅಂಟಾವಾ ಮಾವ’ ಹಾಡು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಹಾಡು ಎಷ್ಟು ಜನಪ್ರಿಯವಾಗಿದೆ ಎಂದರೆ ಯಾರೇ ಕೇಳಿದರೂ ನಿಂತಲ್ಲಿಯೇ ಒಂದೆರಡು ಸ್ಟೆಪ್ಸ್ ಹಾಕಿ ಬಿಡೋಣ ಎಂದೆನಿಸುತ್ತದೆ. ಅಲ್ಲದೆ ಈ ಹಾಡಿಗೆ ಡ್ಯಾನ್ಸ್ ಮಾಡಲು ನಟಿ ಸಮಂತಾ ಅವರು ಯೋಚನೆ ಮಾಡುತ್ತಿದ್ದಾಗ ನಟ ಅಲ್ಲು ಅರ್ಜುನ್ (Allu Arjun) ಅವರ ಮಾತಿಗೆ ಒಪ್ಪಿ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಬಿಟಿಎಸ್ ಬ್ಯಾಂಡ್ ಸದಸ್ಯರ ಡ್ಯಾನ್ಸ್
ಚಿತ್ರಮಂದಿರಗಳಲ್ಲಿ ಪುಷ್ಪ ಚಿತ್ರದ ಪ್ರದರ್ಶನದ ಸಮಯದಲ್ಲಿ ಅಭಿಮಾನಿಗಳು ಈ ಹಾಡಿಗೆ ಹುಚ್ಚೆದ್ದು ಡ್ಯಾನ್ಸ್ ಮಾಡಿರುವ ವಿಡಿಯೋಗಳನ್ನು ನಟಿ ಸಮಂತಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಸಮಂತಾ ಈ ಹಾಡಿಗೆ ಡ್ಯಾನ್ಸ್ ಮಾಡಲು ಈಕೆ ತಗೊಂಡಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 5 ಕೋಟಿ ರೂಪಾಯಿ ಅಂತೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಈ ಹಾಡಿನ ಬಗ್ಗೆ ಪೀಠಿಕೆ ಏಕೆ ಹಾಕುತ್ತಿದ್ದೇವೆ ಎಂದು ನಿಮಗೆ ಅನ್ನಿಸಬಹುದು. ಈ ಹಿಟ್ ತೆಲುಗು ಹಾಡಿಗೆ ಈಗ ಸೌತ್ ಕೊರಿಯಾದ ಬಿಟಿಎಸ್ ಬ್ಯಾಂಡ್ ಸದಸ್ಯರು ಡ್ಯಾನ್ಸ್ ಮಾಡಿ ಆ ವಿಡಿಯೋವನ್ನು ಕ್ವಾಲಿಟೀಪೋಸ್ಟ್ಸ್ ಎಂಬ ಜನಪ್ರಿಯ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿ ಕೊಂಡಿದ್ದಾರೆ.

ಇದನ್ನೂ ಓದಿ: ಬಿಟಿಎಸ್ ತಂಡ ಹರಿಬಿಟ್ಟ ‘ಬಟರ್’ ವಿಡಿಯೋ ಹಾಡಿಗೆ ಸಂಗೀತ ಪ್ರಿಯರು ಫುಲ್ ಫಿದಾ..!

"ಬಿಟಿಎಸ್‌ನಲ್ಲಿನ 'ಟಿ' ಎಂದರೆ ಟಾಲಿವುಡ್
ಈ ವಿಡಿಯೋ ನೋಡಿ ಹೇಗೆ ಈ ಹಿಟ್ ತೆಲುಗು ಹಾಡು ಬಿಟಿಎಸ್ ಬಾಯ್ಸ್ ಡ್ಯಾನ್ಸ್ ಗೆ ಸರಿಯಾಗಿ ಹೊಂದಿದೆ ಅಂತ. "ಬಿಟಿಎಸ್ ಬೀಟ್ ಅನ್ನು ಅನುಸರಿಸುವುದಿಲ್ಲ, ಬೀಟ್ ಬಿಟಿಎಸ್ ಅನ್ನು ಅನುಸರಿಸುತ್ತದೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಮತ್ತು ವಿಡಿಯೋದ ಶೀರ್ಷಿಕೆಯಲ್ಲಿ "ಬಿಟಿಎಸ್‌ನಲ್ಲಿನ 'ಟಿ' ಎಂದರೆ ಟಾಲಿವುಡ್" ಎಂದು ಬರೆಯಲಾಗಿದೆ.

ವಿಡಿಯೋ ನೋಡಿ:




ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ 26 ಸೆಕೆಂಡಿನ ಈ ವಿಡಿಯೋವನ್ನು ಇದುವರೆಗೆ ಸುಮಾರು 2 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಅನೇಕರು "ಈ ಬೀಟ್‌ಗೆ ಇವರು ಮಾಡಿದ ಡ್ಯಾನ್ಸ್ ಸರಿಯಾಗಿ ಹೊಂದಿಕೊಳ್ಳುತ್ತದೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. "ನಾನು ಈಗಾಗಲೇ ಈ ವಿಡಿಯೋವನ್ನು 8 ಬಾರಿ ನೋಡಿದ್ದೇನೆ. ಇದು ತುಂಬಾ ಚೆನ್ನಾಗಿದೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಯಾರಿಗಾದರೂ ಇದನ್ನು ತೋರಿಸಿ ಅವರು ಇದನ್ನು ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ" ಎಂದು ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ.

ಭಾರಿ ಹಿಟ್‌ ಸಾಂಗ್
ದೇಸಿ ಬಿಟಿಎಸ್ ಅಭಿಮಾನಿಗಳು ಬಿಟಿಎಸ್ ಬ್ಯಾಂಡ್‌ನ ಸದಸ್ಯರಾದ ಆರ್ ಎಂ, ಜಿನ್, ಸುಗಾ, ಜೆ-ಹೋಪ್, ಜಿಮಿನ್, ವಿ ಮತ್ತು ಜಂಗ್ಕೂಕ್ ಈ ಹಿಂದೆಯೂ ಸಹ ಭಾರತೀಯ ಹಾಡುಗಳಾದ ‘ಚುನರಿ ಚುನರಿ’, ‘ಕಮರಿಯಾ’ ಸೇರಿದಂತೆ ಹಲವಾರು ಹಾಡುಗಳಿಗೆ ಡ್ಯಾನ್ಸ್ ಮಾಡಿರುವುದನ್ನು ಅಭಿಮಾನಿಗಳು ಕಣ್ಣಾರೆ ಕಂಡಿದ್ದಾರೆ. ಊ ಅಂಟಾವಾ ಮಾವ ಊ ಊ ಅಂಟಾವಾ ಮಾವ’ ಹಾಡು ಡಿಸೆಂಬರ್ 2021ರಲ್ಲಿ ಬಿಡುಗಡೆಯಾಯಿತು ಮತ್ತು ತಕ್ಷಣವೇ ಹಿಟ್ ಆಗಿತ್ತು. ಈ ಹಾಡು ಸಮಂತಾ ಅವರ ಮೊದಲ ಐಟಂ ಹಾಡು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BTS Vs Birthday: ಬಾಯ್ ಬ್ಯಾಂಡ್ ಬಿಟಿಎಸ್ ಹುಡುಗನ ಹುಟ್ಟುಹಬ್ಬ‌, ವಿಶ್ವದೆಲ್ಲೆಡೆ ಸೆಲೆಬ್ರೆಶನ್ ಜೋರು

ಈ ಹಾಡು ಕೆಲವೇ ವಾರಗಳಲ್ಲಿ ಯೂಟ್ಯೂಬ್‌ನಲ್ಲಿ ತುಂಬಾನೇ ಜನಪ್ರಿಯವಾಯಿತು. ಪುಷ್ಪ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ, ಬಿಟಿಎಸ್ ಬ್ಯಾಂಡ್ ಸದಸ್ಯರು ಡಿಸೆಂಬರ್‌ನಿಂದ ವಿರಾಮದಲ್ಲಿದ್ದಾರೆ. ಆದರೂ ಇವರು ವಿರಾಮದ ಸಮಯದಲ್ಲಿ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳನ್ನು ರಂಜಿಸುವುದನ್ನು ಮರೆತಿಲ್ಲ.
Published by:vanithasanjevani vanithasanjevani
First published: