ರಕ್ಷಾ ಬಂಧನದ ಹಬ್ಬದಂದು ತಪ್ಪಾದೇ ನೋಡಲೇ ಬೇಕಾದ ಸಿನಿಮಾ ಯಾವುದು ಗೊತ್ತಾ...

news18
Updated:August 26, 2018, 12:01 PM IST
ರಕ್ಷಾ ಬಂಧನದ ಹಬ್ಬದಂದು ತಪ್ಪಾದೇ ನೋಡಲೇ ಬೇಕಾದ ಸಿನಿಮಾ ಯಾವುದು ಗೊತ್ತಾ...
  • News18
  • Last Updated: August 26, 2018, 12:01 PM IST
  • Share this:
-ನ್ಯೂಸ್ 18 ಕನ್ನಡ

ರಕ್ಷಾ ಬಂಧನ ಎಂದರೆ ನಂಬಿಕೆ, ಕಾಳಜಿ, ಅಣ್ಣ-ತಂಗಿ, ಅಕ್ಕ-ತಮ್ಮ ನಡುವಿನ ಬಂಧನದ ಸಂಕೇತದ ಹಬ್ಬ. ಈ ಹಬ್ಬ ಹಿಂದೂ ಸಂಸ್ಕೃತಿಯ ಭಾಗವಾಗಿದ್ದು, ಇದು ಕೇವಲ ಒಂದು ಪ್ರಾಂತ್ಯ, ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ.

ಇನ್ನು ಸಿನಿಮಾಗಳು ಕೂಡ ಈ ಬಾಂಧವ್ಯಗಳನ್ನು ಸಾರಿ ಹೇಳುತ್ತವೆ. ಅಣ್ಣ-ತಂಗಿಯರ ಬಾಂಧವ್ಯವನ್ನು ಅಜಾರಾಮರವಾಗಿ ಕಟ್ಟಿಕೊಡುವ ಸಿನಿಮಾಗಳು ಜನರಿಂದಲೂ ಪ್ರಶಂಸೆಗೆ ಒಳಗಾಗಿದೆ ಅಂತಹ ಸಿನಿಮಾಗಳ ಝಲಕ್​ ಇಲ್ಲಿದೆ.

ತವರಿಗೆ ಬಾ ತಂಗಿ: ಸಿನಿಮಾ ರಂಗದಲ್ಲಿ ಅಣ್ಣತಂಗಿ ಎಂದಾಕ್ಷಣ ನೆನಪಿಗೆ ಬರುವುದು ಶಿವರಾಜ್​ ಕುಮಾರ್​- ರಾಧಿಕಾ ಕುಮಾರಸ್ವಾಮಿ. ಅವರ ಇಬ್ಬರ ಕಾಂಬಿನೇಷನ್​ನಲ್ಲಿ ಬಂದತಂಹ ಅಣ್ಣತಂಗಿ, ತವರಿಗೆ ಬಾ ತಂಗಿ ಚಿತ್ರಗಳು ಜನರ ಮನಸ್ಸನ್ನು ಗೆದ್ದಿದ್ದು ಮಾತ್ರವಲ್ಲ. ಇದ್ದಾರೆ ಈ ರೀತಿಯಾಗಿ ಇರಬೇಕು ಎಂದು ಎಷ್ಟೋ ಜನಕ್ಕೆ ಸ್ಪೂರ್ತಿಯಾಗಿದೆ.

ಗುರಿ : ರಾಜ್​ ಕುಮಾರ್​ ತಾರಾ ಅಣ್ಣ ತಂಗಿಯಾಗಿ ಅಭಿನಯಿಸಿದ ಈ ಚಿತ್ರ ಅಂದಿನ ಕಾಲಕ್ಕೆ ಸಿಕ್ಕಾಪಟ್ಟೆ ಪ್ರಖ್ಯಾತಿ ಪಡೆದಿತ್ತು. ಅದರಲ್ಲಿನ ಶ್ರಾವಣ ಬಂತು ಎಂಬ ಹಾಡು ಅಣ್ಣನೊಬ್ಬ ತಂಗಿಯ ಬಗ್ಗೆ ಮದುವೆ ಬಗ್ಗೆ ಯಾವೆಲ್ಲಾ ಕನಸು ಹೊಂದಿರುತ್ತಾನೆ ಎಂಬುದನ್ನು ತಿಳಿಸುತ್ತದೆ.

ತಂಗಿಗಾಗಿ: ದರ್ಶನ್ ತೂಗುದೀಪ್ ಅಭಿನಯದ ಈ ಚಿತ್ರವು ತಂಗಿಗಾಗಿ ಏನೂ ಬೇಕಾದರೂ ಮಾಡುವ ಗಂಡೆದೆಯ ಅಣ್ಣನ ಕಥೆ ಸಾರಿತ್ತು. ತಂಗಿಯ ಸಂತೋಷಕ್ಕಾಗಿ ಕಿಡಿಕೇಡಿಗಳೊಂದಿಗೆ ಹೋರಾಡುವ ಈ ಚಿತ್ರದ ಕಥೆಯು ಸಿನಿಮಾ ಪ್ರಿಯರ ಮನಗೆದ್ದಿತ್ತು.

ಒಡಹುಟ್ಟಿದವಳು: ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಂತಹ ಮತ್ತೊಂದು ಕಣ್ಣೀರ ಕಹಾನಿ. ಚಿತ್ರದಲ್ಲಿ ರವಿಚಂದ್ರನ್ ನಾಯನಾಗಿ ನಟಿಸಿದರೆ ಮಲ್ಲಿಕಾ ತಂಗಿಯಾಗಿ ಅಭಿನಯಿಸಿದ್ದರು. ತನ್ನ ಪ್ರೀತಿಯ ತಂಗಿಯ ಮದುವೆಗಾಗಿ ಅಣ್ಣನೊಬ್ಬ ಪಡುವ ಕಷ್ಟವನ್ನು ಈ ಸಿನಿಮಾದ ಮೂಲಕ ಕಟ್ಟಿಕೊಡಲಾಗಿತ್ತು.ನಮ್ಮಣ್ಣ: ಕಿಚ್ಚ ಸುದೀಪ್ ಅಣ್ಣನಾಗಿ ಅಭಿನಯಿಸಿದ ಈ ಸಿನಿಮಾ ಸಹೋದರ-ಸಹೋದರಿಯರ ಬಾಂಧವ್ಯವನ್ನು ಸಾರಿ ಹೇಳಿತ್ತು. ಚಿತ್ರದಲ್ಲಿ ಸುದೀಪ್ ಅವರ ಮನೋಜ್ಞ ಅಭಿನಯವು ಎಲ್ಲರ ಮನಕಲುಕುವಂತೆ ಮಾಡಿತ್ತು.

ದೇವರು ಕೊಟ್ಟ ತಂಗಿ: ಶಿವರಾಜ್ ಕುಮಾರ್ ಮತ್ತು ಮೀರಾ ಜಾಸ್ಮಿನ್ ಅಭಿನಯಿಸಿದ ಈ ಸಿನಿಮಾ ಅಣ್ಣ ತಂಗಿಯರು ಹೇಗಿರಬೇಕೆಂದು ತಿಳಿಸಿತ್ತು. ಪ್ರೀತಿಯಿಂದ ಸಲುಹಿದ ಅಣ್ಣ, ಅಣ್ಣನ  ಪ್ರೀತಿಯನ್ನು ಮಾತ್ರ ಬಯಸುವ ತಂಗಿ ಪಾತ್ರದಲ್ಲಿ ಮೀರಾ ಜಾಸ್ಮಿನ್ ಮತ್ತು ಶಿವಣ್ಣ ಮಿಂಚಿದ್ದರು. ತವರಿಗೆ ಬಾ ತಂಗಿ ಚಿತ್ರದ ಮುಂದುವರಿದ ಭಾಗದಂತಿದ್ದ ಈ ಸಿನಿಮಾ ಶಿವಣ್ಣನ ಕೆರಿಯರ್​ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎನ್ನಲಾಗಿದೆ.
First published: August 26, 2018, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading