HOME » NEWS » Entertainment » BRODHA V AARAAM KANNADA RAP SONG RELEASE ON YOUTUBE HG

ಅಲ್ಲೇನು ಆರಾಮಾ? ಯೋಗಕ್ಷೇಮ ವಿಚಾರಿಸಲು ಬಂದ್ರು ಬ್ರೋಧಾ ವಿ!

Aaraam: ರ‍್ಯಾಪರ್​ ಬ್ರೋಧಾ ವಿ ಸಾಕಷ್ಟು ಹಾಡುಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಕೆಲವು ಹಾಡುಗಳು ಯುವಕ, ಯುವತಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಿರುತ್ತದೆ. ಇದೀಗ ಅಲ್ಲೇನು ಆರಾಮ ಎಂಬ ಹಾಡಿನೊಂಡಿದೆ ಬ್ರೋಧಾ ವಿ ಈ ವರ್ಷದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ.

news18-kannada
Updated:February 19, 2021, 10:16 AM IST
ಅಲ್ಲೇನು ಆರಾಮಾ? ಯೋಗಕ್ಷೇಮ ವಿಚಾರಿಸಲು ಬಂದ್ರು ಬ್ರೋಧಾ ವಿ!
ಆರಾಮ್
  • Share this:
ವೈಯ್ಕೊ, ಫ್ಲೆಕ್ಸ್​, ಆತ್ಮ ರಾಮ, ಐಗಿರಿ ನಂದಿನಿ ಮುಂತಾದ ಹಾಡಿನ ಮೂಲಕ ಯ್ಯೂಟೂಬ್​ನಲ್ಲಿ ಸದ್ದು ಮಾಡಿದ್ದ ರ‍್ಯಾಪರ್ ಬ್ರೋಧಾ ವಿ ಇದೀಗ ಹೊಸದಾದ ಹಾಡೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಲ್ಲೇನು ಆರಾಮ? ಎಂದು ಕೇಳುತ್ತಾ ಯುವಕರ ಯೋಗಕ್ಷೇಮ ವಿಚಾರಿಸುವ ಕೆಲಸ ಮಾಡಿದ್ದಾರೆ. ಸದ್ಯ ಈ ಹಾಡು ಯ್ಯೂಟೂಬ್​ನಲ್ಲಿ ಸದ್ದು ಮಾಡುತ್ತಿದೆ.

ರ‍್ಯಾಪರ್​ ಬ್ರೋಧಾ ವಿ ಸಾಕಷ್ಟು ಹಾಡುಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಕೆಲವು ಹಾಡುಗಳು ಯುವಕ, ಯುವತಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಿರುತ್ತದೆ. ಇದೀಗ ಅಲ್ಲೇನು ಆರಾಮ ಎಂಬ ಹಾಡಿನೊಂಡಿದೆ ಬ್ರೋಧಾ ವಿ ಈ ವರ್ಷದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ರ‍್ಯಾಪ್​​ ಹಾಡಿಗೆ ಬ್ರೋಧಾ ವಿ ಸಂಗೀತ, ಸಾಹಿತ್ಯ ಬರೆದಿದ್ದಾರೆ. ಅವರದ್ದೇ ಬ್ರೋಧಾ ವಿ ಯ್ಯೂಟೂಬ್​ ಖಾತೆಯಲ್ಲಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಹಾಡು 2 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅದರಲ್ಲಿ ಹೆಚ್ಚಿನವರಿಗೆ ಹಾಡು ಇಷ್ಟವಾದರೆ ಕೆಲವರು ಡಿಸ್​ಲೈಕ್​ ಮಾಡಿದ್ದಾರೆ.

ಹಾಡು ಕೇಳಿ ಅನೇಕರು ಕಾಮೆಂಟ್​​ ಬರೆದಿದ್ದಾರೆ. ಅದರಲ್ಲಿ ಕೆಲವರು ಮತ್ತೆ ಕನ್ನಡದ ಹಾಡಿನ ಮೂಲಕ ಮತ್ತೆ ಬಂದಿದ್ದೀರಿ ಎಂದು ಕೆಲವರು ಬರೆದರೆ. ಇನ್ನು ಕೆಲವರು ನಾವು ಆರಾಮ.. ನೀವು ಆರಾಮವಾ? ಎಂದು ಬ್ರೊಧಾ ವಿ ಅವರ ಅರೋಗ್ಯ ವಿಚಾರಿಸುವ ಕಾಮೆಂಟ್​ ಬರೆದಿದ್ದಾರೆ.

Youtube Video


ಬ್ರೋಧಾ ವಿ ಕಳೆದ ಡಿಸೆಂಬರ್​ ತಿಂಗಳಿನಲ್ಲಿ ಫ್ಲೆಕ್ಸ್​ ಹಾಡನ್ನು ರಿಲೀಸ್​ ಮಾಡಿದ್ದರು. ಆದಾದ ಬಳಿಕ 1 ತಿಂಗಳ ಸಮಯವಕಾಶ ತೆಗೆದುಕೊಂಡು ಅಲ್ಲೇನು ಆರಾಮ? ರ‍್ಯಾಪ್​ ಹಾಡನ್ನು ಬಿಡುಗಡೆ ಮಾಡಿದ್ದಾರೆ.
Published by: Harshith AS
First published: February 19, 2021, 10:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories