Britney Spears: ದೀರ್ಘಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುಎಸ್ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್

Sam Asghari And Britney Spears Engagement : ನಟ ಮತ್ತು ಫಿಟ್ನೆಸ್ ತರಬೇತುದಾರರಾಗಿರುವ  ಅಸ್ಘರಿ ಅವರು ಉಂಗುರ  ಮತ್ತು ದಂಪತಿಗಳು ಚುಂಬಿಸುತ್ತಿರುವ ಪ್ರತ್ಯೇಕ ಫೋಟೋವನ್ನು ಅನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ವ  ಮಾಡಿದ್ದಾರೆ.

 ಬ್ರಿಟ್ನಿ ಸ್ಪಿಯರ್ಸ್

ಬ್ರಿಟ್ನಿ ಸ್ಪಿಯರ್ಸ್

  • Share this:
ಯುಎಸ್ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ತನ್ನ ದೀರ್ಘಕಾಲದ ಗೆಳೆಯ ಸ್ಯಾಮ್ ಅಸ್ಘಾರಿ ಜೊತೆ ನಿಶ್ಚಿತಾರ್ಥವನ್ನು ಘೋಷಣೆ ಮಾಡಿದ್ದಾರೆ.  ದಂಪತಿಗಳು ಉಂಗುರವನ್ನು ತೋರಿಸುತ್ತಿರುವ ಫೋಟೋವನ್ನು ಸಿಂಗರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 39 ವರ್ಷದ ಆಕೆ ತನ್ನ 13 ವರ್ಷಗಳ ಕನ್ಸರ್ವೇಟರ್‌ಶಿಪ್ ಅನ್ನು ಕೊನೆಗೊಳಿಸಲು ಕಾನೂನು ಹೋರಾಟ ನಡೆಸುತ್ತಿದ್ದಾರೆ, ಇದು ಆಕೆಯ ವೈಯಕ್ತಿಕ ಜೀವನ ಮತ್ತು ಹಣಕಾಸು ಪರಿಸ್ಥಿತಿಯನ್ನು ಎರಡನ್ನೂ ನಿಯಂತ್ರಣ ಮಾಡುತ್ತಿದೆ.  

ಈ ವ್ಯವಸ್ಥೆಯ ನಿಯಮಗಳು ಆಕೆಯನ್ನು  ಅಸ್ಘರಿಯನ್ನು ಮದುವೆಯಾಗಲು  ಮತ್ತು ಹೆಚ್ಚು ಮಕ್ಕಳನ್ನು ಪಡೆಯಲು ತಡೆಗೋಡೆಯಾಗುತ್ತಿದೆ ಎಂದು ಸ್ಪಿಯರ್ಸ್ ಬಹಿರಂಗಪಡಿಸಿದ್ದಾರೆ. 2008 ರಲ್ಲಿ ಗಾಯಕಿಯ  ಮಾನಸಿಕ ಆರೋಗ್ಯದ  ವಿಚಾರವಾಗಿ ಕನ್ಸರ್ವೇಟರ್‌ಶಿಪ್ ಹೇರಲಾಗಿತ್ತು.  ಕಳೆದ ವಾರ, ಬ್ರಿಟ್ನಿ ಸ್ಪಿಯರ್ಸ್ ತಂದೆ, ಜೇಮೀ ಸ್ಪಿಯರ್ಸ್, ಕನ್ಸರ್ವೇಟರ್‌ಶಿಪ್ ಅನ್ನು ಕೊನೆಗೊಳಿಸಲು ಲಾಸ್ ಏಂಜಲೀಸ್ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ನ್ಯಾಯಾಲಯದ ವಿಚಾರಣೆಯನ್ನು ಸೆಪ್ಟೆಂಬರ್ 29 ಕ್ಕೆ ನಿಗದಿಪಡಿಸಲಾಗಿದೆ.

ನಟ ಮತ್ತು ಫಿಟ್ನೆಸ್ ತರಬೇತುದಾರರಾಗಿರುವ  ಅಸ್ಘರಿ ಅವರು ಉಂಗುರ  ಮತ್ತು ದಂಪತಿಗಳು ಚುಂಬಿಸುತ್ತಿರುವ ಪ್ರತ್ಯೇಕ ಫೋಟೋವನ್ನು ಅನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ವ  ಮಾಡಿದ್ದಾರೆ. ಇನ್ನು ಈ ಬಗ್ಗೆ ಅವರ ಮ್ಯಾನೇಜರ್ ಬ್ರಾಂಡನ್ ಕೋಹೆನ್, ಪೀಪಲ್ ನಿಯತಕಾಲಿಕೆಗೆ ನಿಶ್ಚಿತಾರ್ಥದ ಸುದ್ದಿಯನ್ನು ದೃಢಪಡಿಸಿದ್ದಾರೆ.
View this post on Instagram


A post shared by Sam Asghari (@samasghari)


ಇದನ್ನೂ ಓದಿ: ಸಖತ್ ವೈರಲ್ ಆಗ್ತಿದೆ ಅನುಪಮಾ ಸೀರಿಯಲ್​ನ ‘ಕಿಂಜಲ್‘ ನಿಧಿ ಶಾ ಹಾಟ್ ಫೋಟೋ..!

ಈ ದಂಪತಿಗಳು ತಮ್ಮ ದೀರ್ಘಕಾಲದ ಸಂಬಂಧವನ್ನು ಇಂದು ಅಧಿಕೃತಗೊಳಿಸಿದ್ದಾರೆ ಮತ್ತು ಅವರಿಗೆ ನೀಡಿದ ಬೆಂಬಲ ಮತ್ತು ಪ್ರೀತಿಯಿಂದ  ಧನ್ಯವಾದ ಹೇಳಿದ್ದಾರೆ ಎಂದು ಮ್ಯಾನೇಜರ್​  ಹೇಳಿದ್ದಾರೆ.  ದಂಪತಿಗಳು 2016 ರಲ್ಲಿ ಮ್ಯೂಸಿಕ್ ವಿಡಿಯೋ ಸೆಟ್ ನಲ್ಲಿ ಭೇಟಿಯಾಗಿದ್ದರೂ, ಇದೀಗ ತಮ್ಮ ಸುದೀರ್ಘ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿದ್ದಾರೆ.

ನಟ ಅಸ್ಘರಿ ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ ಜನಿಸಿದ್ದರು,  ಆದರೆ ಟ್ರಕ್ ಚಾಲಕರಾಗಿದ್ದ ತಮ್ಮ ತಂದೆಯೊಂದಿಗೆ ವಾಸಿಸಲು 12 ನೇ ವಯಸ್ಸಿನಲ್ಲಿ ಲಾಸ್ ಏಂಜಲೀಸ್‌ಗೆ ತೆರಳಿ, ಅಲ್ಲಿಯೇ ಜೀವನ ಆರಂಭಿಸಿದರು.  ಈ ವರ್ಷದ ಆರಂಭದಲ್ಲಿ ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅವರು ಯಾವುದೇ ಇಂಗ್ಲಿಷ್  ಭಾಷೆ ತಿಳಿಯದೇ ಯುಎಸ್‌ಗೆ ಬಂದು , ಅವರು ಜೀವನ ನಡೆಸಿದ ರೀತಿಯನ್ನು ವಿವರಿಸಿದ್ದಾರೆ. ಇದು ಖಂಡಿತವಾಗಿಯೂ  ವಿಭಿನ್ನ.  ಬೇರೆ ಭಾಷೆ ಮತ್ತು ಸಂಸ್ಕೃತಿ. ಜೀವನ ಬಹಳ ಕಷ್ಟಕರವಾಗಿತ್ತು ಎಂದು ವಿವಿರಿಸಿದ್ದಾರೆ. ಇನ್ನು  ಅಸ್ಘರಿಗೆ ಮೂವರು ಸಹೋದರಿಯರಿದ್ದು,  ಅವರು ಸಹ ಇರಾನ್‌ನಿಂದ ಯುಎಸ್‌ಗೆ ವಲಸೆ ಬಂದಿದ್ದಾರೆ.

ಇನ್ನು  ಸ್ಪಿಯರ್ಸ್ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಾರೆ. ಅವರು 2004 ರಲ್ಲಿ, ತನ್ನ ಬಾಲ್ಯದ ಗೆಳೆಯ ಜೇಸನ್ ಅಲೆಕ್ಸಾಂಡರ್‌ನನ್ನು ಲಾಸ್ ವೇಗಾಸ್‌ನಲ್ಲಿ ವಿವಾಹವಾಗಿದ್ದರು.  ಆದರೆ ಮದುವೆಯನ್ನು ಶೀಘ್ರದಲ್ಲೇ ರದ್ದುಗೊಳಿಸಲಾಗಿತ್ತು.  ಅದೇ ವರ್ಷದ ನಂತರ, ಸ್ಪಿಯರ್ಸ್ ಡ್ಯಾನ್ಸರ್ ಕೆವಿನ್ ಫೆಡರ್‌ಲೈನ್‌ ಎನ್ನುವ ವ್ಯಕ್ತಿಯನ್ನು ವಿವಾಹವಾಗಿದ್ದರು,  ಆಕೆಗೆ ಇಬ್ಬರು ಮಕ್ಕಳಿದ್ದಾರೆ.  ಆದರೆ ಸಂಸಾರದಲ್ಲಿ ವೈಮನಸ್ಸು  ಹುಟ್ಟಿಕೊಂಡ ಹಿನ್ನಲೆ 2007 ರಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದರು.

ಇದನ್ನೂ ಓದಿ: 400 ಕಲಾವಿದರೊಂದಿಗೆ ಶೂಟಿಂಗ್ ಮಾಡಿದ ಐಶ್ವರ್ಯಾ ರೈ: ಈ ಸಿನಿಮಾಗೆ ಬಜೆಟ್​ 500 ಕೋಟಿ..!

ಜೂನ್‌ನಲ್ಲಿ  ಸಾಕ್ಷ್ಯಗಳನ್ನು ನ್ಯಾಯಲಯಕ್ಕೆ ಒದಗಿಸಿ ನ್ಯಾಯಾಧೀಶರನ್ನು ಸಂರಕ್ಷಣೆಯನ್ನು  ವ್ಯವಸ್ಥೆಯನ್ನು ಕೊನೆಗೊಳಿಸಲು  ಮನವಿ ಮಾಡಿದ್ದರು.  ಇದರಿಂದ ಆಕೆ  ಮದುವೆಯಾಗಲು ಮತ್ತು ಹೆಚ್ಚಿನ ಮಕ್ಕಳನ್ನು ಪಡೆಯಲು ಸಾಧ್ಯವಾಗಿದೆ.  ಒಂದು ತಿಂಗಳ ನಂತರ, ಅವಳು ತನ್ನ ತಂದೆಯ ವಿರುದ್ಧ  ಪ್ರಕರಣ ದಾಖಲಿಸುವುದಾಗಿ  ಹೇಳಿದ್ದರು. ನ್ಯಾಯಾಲಯದ ಆದೇಶದ ಕನ್ಸರ್ವೇಟರ್‌ಶಿಪ್ ಜೇಮೀ ಸ್ಪಿಯರ್ಸ್‌ಗೆ ತನ್ನ ಮಗಳ ಎಸ್ಟೇಟ್ ಮತ್ತು ಆಕೆಯ ಜೀವನದ ಇತರ ಅಂಶಗಳ ಮೇಲೆ ನಿಯಂತ್ರಣವನ್ನು ನೀಡಿತ್ತು.   ಸ್ಪಿಯರ್ಸ್ ಆರೋಗ್ಯ ಸಮಸ್ಯೆಗಳಿಂದಾಗಿ 2019 ರಲ್ಲಿ ತನ್ನ ಮಗಳ ವೈಯಕ್ತಿಕ ವ್ಯವಹಾರಗಳ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದಿದ್ದರು ಅವರ ಅವರ ಮ್ಯಾನೇಜರ್ ಮಾಂಟ್ಗೊಮೆರಿ ಅವರನ್ನು ನೇಮಿಸಲಾಗಿತ್ತು.
Published by:Sandhya M
First published: